ಎತ್ತು ಬಳಸಿ ಪಂಪ್‌ನಿಂದ ತೋಟಕ್ಕೆ ನೀರು ಹಾಯಿಸಿದ ಈ ರೈತ; ಭಾರೀ ವೈರಲ್ ವೀಡಿಯೊಕ್ಕೆ ಪ್ರಶಂಸೆ-ಟೀಕೆ | ವೀಕ್ಷಿಸಿ

ಜನರು ಕೆಲಸವನ್ನು ಸುಲಭ ಮಾಡಿಕೊಳ್ಳಲು ನವೀನ ದಾರಿಗಳನ್ನು ಹುಡುಕಲು ಪ್ರಯತ್ನಿಸುತ್ತಾರೆ. ಕೆಲವೊಮ್ಮೆ ತುಂಬಾನೇ ಕ್ರಿಯೆಟಿವ್ ಸೃಜನಶೀಲ ತಂತ್ರಗಳು ಕೆಲವರಿಗೆ ಹೊಳೆಯುತ್ತದೆ. ಇಂತಹದ್ದೇ ಸೃಜನಶೀಲ ತಂತ್ರಗಳನ್ನು ಹುಡುಕಿರುವ ವೀಡಿವೊಂದನ್ನು ಐಎಎಸ್ ಅಧಿಕಾರಿ ಅವನೀಶ ಶರಣ್ ಹಂಚಿಕೊಂಡಿದ್ದಾರೆ.
ಈ ವೀಡಿಯೋದಲ್ಲಿ ಟ್ರೆಡ್ ಮಿಲ್ ನಂತಹ ಯಂತ್ರದ ಮೇಲೆ ಎತ್ತು ನಡೆಯುತ್ತಿರುವುದನ್ನು ತೋರಿಸಲಾಗಿದೆ. ಆ ಯಂತ್ರವನ್ನು ಒಂದು ಪಂಪ್‌ಗೆ ಜೋಡಿಸಲಾಗಿದೆ, ಇದು ನೀರಾವರಿಗಾಗಿ ಹೊಲಗಳಿಗೆ ನೀರನ್ನು ಹರಿಸಲು ಸಹಾಯ ಮಾಡುತ್ತಿರುವುದನ್ನು ವೀಡಿಯೊದಲ್ಲಿ ನೋಡಬಹುದು.

ಇತರ ಯಂತ್ರಗಳಿಂದ ಮತ್ತಷ್ಟು ಸಂಪರ್ಕಗೊಂಡಿರುವ ವಿದ್ಯುತ್ ಮೋಟರ್ ಗೆ ಸಂಪರ್ಕ ಹೊಂದಿದ ಅನೇಕ ಬೆಳಕಿನ ಬಲ್ಬ್ ಗಳನ್ನು ಒಬ್ಬ ವ್ಯಕ್ತಿ ಆನ್ ಮಾಡುವುದನ್ನು ಸಹ ಈ ವೀಡಿಯೋದಲ್ಲಿ ನೋಡಬಹುದು. ಮತ್ತೊಂದೆಡೆ ಅನೇಕ ಎತ್ತುಗಳು ಅಂತಹ ಟ್ರೇಡ್ ಮಿಲ್ ಗಳಂತೆ ಇರುವ ಯಂತ್ರಗಳ ಮೇಲೆ ನಡೆದಾಡುವುದರಿಂದ ಹೊಲಕ್ಕೆ ನೀರನ್ನು ಸಿಂಪಡಿಸುವುದನ್ನು ನಾವು ನೋಡಬಹುದು. ಶರಣ್ ಅವರು ಆ ವೀಡಿಯೋವನ್ನು ಹಂಚಿಕೊಂಡು ಅದಕ್ಕೆ “ಗ್ರಾಮೀಣ ಭಾರತ ನಾವಿನ್ಯತೆ. ಇದು ಅದ್ಭುತವಾಗಿದೆ” ಎಂದು ಶೀರ್ಷಿಕೆ ಬರೆದಿದ್ದಾರೆ.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ನನ್ನ ಬಳಿ ಹಣವಿಲ್ಲ : ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್

ಕ್ಲಿಪ್ ದೇಸಿ ಜುಗಾಡ್ ಅನ್ನು ತೋರಿಸುತ್ತದೆ.ಒಂದು ಎತ್ತು ಇಳಿಜಾರಾದ ಟ್ರೆಡ್‌ಮಿಲ್‌ನಲ್ಲಿ ನಡೆಯುತ್ತಿದೆ, ಅದು ಪ್ರಾಣಿಗೆ ಏರಲು ಮುಂದೆ ರಾಂಪ್ ಹೊಂದಿದೆ. ನೀರಾವರಿಗಾಗಿ ಹೊಲಗಳಿಗೆ ನೀರನ್ನು ಸಿಂಪಡಿಸುವ ಪಂಪ್‌ಗೆ ಟ್ರೆಡ್‌ಮಿಲ್ ಅನ್ನು ಜೋಡಿಸಲಾಗಿದೆ. ವೀಡಿಯೊವು ನಂತರ ಎತ್ತುಗಳಿಂದ ನಿರ್ವಹಿಸಲ್ಪಡುವ ಅಂತಹ ಅನೇಕ ಯಂತ್ರಗಳನ್ನು ತೋರಿಸುತ್ತದೆ

ಈ ವಿಡಿಯೋ ವೈರಲ್ ಆಗಿದ್ದು, 181 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. 5,000 ಕ್ಕೂ ಹೆಚ್ಚು ಲೈಕ್ ಗಳನ್ನು ಸಹ ಗಳಿಸಿದೆ. ಆದರೆ ಈ ಸೃಜನಶೀಲವಾದ ನೀರಾವರಿ ತಂತ್ರದಲ್ಲಿ ಪ್ರಾಣಿಗಳನ್ನು ಅತಿಯಾಗಿ ದುಡಿಸಿಕೊಂಡಿದ್ದಾರೆ ಎಂದು ಈ ವಿಧಾನಗಳನ್ನು ಅಭಿವೃದ್ಧಿಪಡಿಸಿದ ವ್ಯಕ್ತಿಯನ್ನು ಪೋಸ್ಟ್ ನ ಕಾಮೆಂಟ್ ವಿಭಾಗದಲ್ಲಿ ಟ್ವಿಟರ್ ಕೆಲವು ಬಳಕೆದಾರರು ಟೀಕಿಸಿದ್ದಾರೆ. ಆದರೆ ಕೆಲವು ಬಳಕೆದಾರರು ಈ ಸೃಜನಶೀಲವಾದ ನೀರಾವರಿ ತಂತ್ರವನ್ನು ಶ್ಲಾಘಿಸಿರುವುದನ್ನು ಸಹ ನಾವು ಇಲ್ಲಿ ನೋಡಬಹುದು.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement