ಹೈದರಾಬಾದ್: ನವರಾತ್ರಿ ಪೆಂಡಾಲ್‌ನಲ್ಲಿ ದುರ್ಗಾ ದೇವಿಯ ಮೂರ್ತಿಗೆ ಹಾನಿ ಮಾಡಿದ ಇಬ್ಬರು ಬುರ್ಖಾಧಾರಿ ಮಹಿಳೆಯರ ಬಂಧನ

ಹೈದರಾಬಾದ್: ಇಲ್ಲಿನ ಪೂಜಾ ಮಂಟಪದಲ್ಲಿ ಪ್ರತಿಷ್ಠಾಪನೆ ಮಾಡಲಾಗಿದ್ದ ದುರ್ಗಾ ಮಾತೆಯ ವಿಗ್ರಹಕ್ಕೆ ಹಾನಿ   ಮಾಡಿದ ಆರೋಪದ ಮೇಲೆ ಬುರ್ಖಾ ಧರಿಸಿದ್ದ ಇಬ್ಬರು ಮಹಿಳೆಯರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
ಈ ಘಟನೆಯು ಮುಂಜಾನೆ ಸಂಭವಿಸಿದ್ದು, ಇಪ್ಪತ್ತರ ಹರೆಯದವರೆಂದು ಹೇಳಲಾದ ಇಬ್ಬರು ಮಹಿಳೆಯರು, ಹೈದರಾಬಾದ್‌ನ ಖೈರತಾಬಾದ್‌ನಲ್ಲಿ ಪೂಜಾ ಮಂಟಪಕ್ಕೆ ನುಗ್ಗಿ ದುರ್ಗಾ ದೇವಿಯ ವಿಗ್ರಹವನ್ನು ಸ್ಪ್ಯಾನರ್ ಬಳಸಿ ಹಾನಿ ಮಾಡಿದ್ದಾರೆ.
ಕೇಂದ್ರ ವಲಯ ಪೊಲೀಸರ ಪ್ರಕಾರ, ಮಹಿಳೆಯರನ್ನು ಸ್ಥಳೀಯರೊಬ್ಬರು ಗಮನಿಸಿದರು ಮತ್ತು ಅವರಲ್ಲಿ ಒಬ್ಬರು ಸ್ಪ್ಯಾನರ್ ಅನ್ನು ಮರೆಮಾಡುವುದನ್ನು ನೋಡಿರುವುದಾಗಿ ತಿಳಿಸಿದ್ದಾರೆ.
ಆತ ಾದನ್ನು ತಡೆಯಲು ಯತ್ನಿಸಿದಾಗ , ಮಹಿಳೆಯರು ಅವನ ಮೇಲೆ ಹಲ್ಲೆ ಮಾಡಲು ಪ್ರಯತ್ನಿಸಿದರು. ಆದರೆ ಗಲಾಟೆ ಜೋರಾಗುತ್ತಿದ್ದಂತೆಯೇ ಅನೇಕ ಜನರು ಒಟ್ಟುಗೂಡಿದರು ಮತ್ತು ಮಹಿಳೆಯರನ್ನು ಹಿಡಿದರು  ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಹೈದರಾಬಾದ್‌ನ ಕೇಂದ್ರ ವಲಯದ ಡಿಸಿಪಿ, “ಬೆಳಿಗ್ಗೆ ಇಬ್ಬರು ಮಹಿಳೆಯರು ಮೇರಿ ಮಾತೆಯ ಪ್ರತಿಮೆಯನ್ನು ಧ್ವಂಸ ಮಾಡಲು ಪ್ರಯತ್ನಿಸಿದ್ದಾರೆ ಎಂದು ನಮಗೆ ಕರೆ ಬಂದಿತು ಮತ್ತು ನಂತರ ಅವರು ದುರ್ಗಾ ಮಾತೆಯ ಪ್ರತಿಮೆಯನ್ನು ಧ್ವಂಸ ಮಾಡಲು ಪ್ರಯತ್ನಿಸಿದರು” ಎಂದು ಹೇಳಿದರು. “ಒಬ್ಬ ಮಹಿಳೆಯು ಸ್ಪ್ಯಾನರ್ ಅನ್ನು ಹೊತ್ತೊಯ್ಯುತ್ತಿರುವುದನ್ನು ಕಂಡರು ಮತ್ತು ತಡೆಯಲು ಪ್ರಯತ್ನಿಸಿದ ಸ್ಥಳೀಯರ ಮೇಲೆ ಆ ಮಹಿಳೆ ದಾಳಿ ಮಾಡಲು ಪ್ರಯತ್ನಿಸಿದಳು. ಆದರೆ, ಸ್ಥಳೀಯರು ಇಬ್ಬರನ್ನೂ ಹಿಡಿದು ಸೈದಾಬಾದ್ ಪೊಲೀಸರಿಗೆ ಒಪ್ಪಿಸಿದ್ದಾರೆ. ನಾವು ಅವರ ವಿವರಗಳನ್ನು ಪರಿಶೀಲಿಸಲು ಪ್ರಯತ್ನಿಸುತ್ತಿದ್ದೇವೆ ಆದರೆ ಅವರು ತುಂಬಾ ವಿಚಿತ್ರವಾಗಿ ವರ್ತಿಸುತ್ತಿದ್ದಾರೆ. ತನಿಖೆ ನಡೆಯುತ್ತಿದೆ ಎಂದು ಡಿಸಿಪಿ ತಿಳಿಸಿದ್ದಾರೆ.

ವರದಿಗಳ ಪ್ರಕಾರ, ಇಬ್ಬರು ಮಹಿಳೆಯರು ಪೆಂಡಾಲ್‌ನಿಂದ ಮೀಟರ್ ದೂರದಲ್ಲಿರುವ ಚರ್ಚ್‌ನ ಹೊರಗೆ ಕಾಣಿಸಿಕೊಂಡಿದ್ದಾರೆ. ಅಲ್ಲಿಯೂ, ಇಬ್ಬರು ಮಹಿಳೆಯರು ಮೇರಿ ಮಾತೆಯ ಪ್ರತಿಮೆಗೆ ಹಾನಿ ಮಾಡಲು ಪ್ರಯತ್ನಿಸಿದರು. ಆದರೆ ಅವರನ್ನು ಚರ್ಚ್‌ನಿಂದ ಹೊರಹೋಗುವಂತೆ ಸೂಚಿಸಲಾಯಿತು.
ನಾವು ಘಟನೆಗಳ ಅನುಕ್ರಮ ಸ್ಥಾಪಿಸಲು ಪ್ರಯತ್ನಿಸುತ್ತಿದ್ದೇವೆ, ಆದಾಗ್ಯೂ ಇಬ್ಬರು ಆರೋಪಿ ಮಹಿಳೆಯರು ವಿಚಾರಣೆಗೆ ಸಹಕರಿಸುತ್ತಿಲ್ಲ,” ನಾವು ವಿವರವಾದ ತನಿಖೆ ನಡೆಸುತ್ತಿದ್ದಾರೆ.ಇಬ್ಬರು ಮಹಿಳೆಯರ ಗುರುತು ಇನ್ನೂ ಪತ್ತೆಯಾಗಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಚುನಾವಣಾ ಭಾಷಣ ಮಾಡುವ ವೇಳೆ ವೇದಿಕೆಯಲ್ಲೇ ಕುಸಿದು ಬಿದ್ದ ಕೇಂದ್ರ ಸಚಿವ ನಿತಿನ್ ಗಡ್ಕರಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement