ಸಮಾಧಿಯಾಗಲು 6 ಅಡಿ ಹೊಂಡದಲ್ಲಿ ತನ್ನನ್ನು ತಾನೇ ಹೂತುಕೊಂಡ ಯುವಕ..! ಸರಿಯಾದ ವೇಳೆಗೆ ಬಂದು ಹೊಂಡದಿಂದ ಮೇಲೆತ್ತಿ ರಕ್ಷಿಸಿದ ಪೊಲೀಸರು| ವೀಕ್ಷಿಸಿ

ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಅಗಾಧವಾದ ಪ್ರಗತಿಯನ್ನು ಸಾಧಿಸುತ್ತಿದ್ದರೂ, ಭಾರತವು ಇನ್ನೂ ಮೂಢ ನಂಬಿಕೆಗಳು ಮತ್ತು ಆಚರಣೆಗಳಿಂದ ಹೊರಬಂದಿಲ್ಲ, ದೂರ ಸರಿದಿಲ್ಲ. ಇದಕ್ಕೆ ಪುಷ್ಟಿ ನೀಡುವ ನಿದರ್ಶನ ಉತ್ತರ ಪ್ರದೇಶದ ಉನ್ನಾವೊ ಜಿಲ್ಲೆಯಲ್ಲಿ ನಡೆದಿದೆ.
ಇತ್ತೀಚೆಗೆ, ಉತ್ತರ ಪ್ರದೇಶದ ಉನ್ನಾವೊದಲ್ಲಿ ವ್ಯಕ್ತಿಯೊಬ್ಬರು ಸ್ಥಳೀಯ ಅರ್ಚಕರ ಸಲಹೆಯ ಮೇರೆಗೆ ಜೀವಂತ ಸಮಾಧಿಗೆ ಯತ್ನಿಸಿ 6 ಅಡಿಗಳಷ್ಟು ಆಳದಲ್ಲಿ ತಮ್ಮನ್ನು ತಾವೇ ಹೂತುಕೊಂಡಿದ್ದರು. ನಂತರ ಮಾಹಿತಿ ದೊರೆತು ಸ್ಥಳಕ್ಕಾಗಮಿಸಿದ ಪೊಲೀಸರು ಆತನನ್ನು ರಕ್ಷಿಸಿದ್ದಾರೆ.
ಈ ಯುವಕನಿಗೆ ನವರಾತ್ರಿ ಉತ್ಸವಗಳು ಪ್ರಾರಂಭವಾಗುವ ಒಂದು ದಿನ ಮೊದಲು ‘ಸಮಾಧಿ’ ತಮ್ಮನ್ನು ತಾವೇ ಸಮಾಧಿ ಮಾಡಿಕೊಂಡರೆ ಜ್ಞಾನೋದಯವಾಗುತ್ತದೆ ಎಂದು ಸಾಧುವೊಬ್ಬರು ಯುವಕರಿಗೆ ಹೇಳಿದರು. ಅದರಂತೆ ಓರ್ವ ಯುವಕ ತನ್ನನ್ನು ತಾನೇ ಸಮಾಧಿ ಮಾಡಿಕೊಳ್ಳಲು ಯತ್ನಿಸಿದ್ದಾನೆ. ಈ ವಿಷಯ ತಿಳಿದ ಗ್ರಾಮದ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಧಾವಿಸಿದ ಪೊಲೀಸರು ಯುವಕರನ್ನು ರಕ್ಷಿಸಿದ್ದಾರೆ.

ರಕ್ಷಣಾ ಕಾರ್ಯಾಚರಣೆಯ ವೀಡಿಯೊದಲ್ಲಿ, ಪೊಲೀಸರು ವ್ಯಕ್ತಿಯನ್ನು ಸಮಾಧಿ ಮಾಡಿದ ಮೇಲ್ಗಡೆ ಮಣ್ಣು ತುಂಬಿದ್ದ ಬಿದಿರಿನ ಹೊದಿಕೆಯನ್ನು ತೆಗೆದುಹಾಕುತ್ತಿರುವುದು ಕಂಡುಬಂದಿದೆ. ಯುವಕನನ್ನು ಅಸಿವಾನ್ ಪೊಲೀಸ್ ಠಾಣೆ ವ್ಯಾಪ್ತಿಯ ತಾಜ್‌ಪುರ ಗ್ರಾಮದ ನಿವಾಸಿ ಶುಭಂ ಗೋಸ್ವಾಮಿ ಎಂದು ಗುರುತಿಸಲಾಗಿದೆ. ಉನ್ನಾವೊದ ತಾಜ್‌ಪುರ ಗ್ರಾಮದ ಮೂವರು ಪುರೋಹಿತರು ಯುವಕನೊಬ್ಬನನ್ನು ಭೂಗತ ಸಮಾಧಿ ತೆಗೆದುಕೊಳ್ಳಲು ಮನವೊಲಿಸಿದರು. ನವರಾತ್ರಿ ಉತ್ಸವಗಳು ಪ್ರಾರಂಭವಾಗುವ ಒಂದು ದಿನ ಮೊದಲು ಸಮಾಧಿ ಮಾಡಿದರೆ ಜ್ಞಾನೋದಯವಾಗುತ್ತದೆ ಎಂದು ಯುವಕರಿಗೆ ಹೇಳಿದ್ದರು. ಅವರು ‘ಭೂ ಸಮಾಧಿ’ ತೆಗೆದುಕೊಳ್ಳಲು ಆತನನ್ನು ಪ್ರೋತ್ಸಾಹಿಸಿದರು.

ಪ್ರಮುಖ ಸುದ್ದಿ :-   ಸುಪ್ರೀಂ ಕೋರ್ಟ್ ತರಾಟೆ ನಂತರ ದೊಡ್ಡದಾಗಿ ಕ್ಷಮೆಯಾಚನೆ ಪ್ರಕಟಿಸಿದ ಪತಂಜಲಿ ಸಂಸ್ಥೆ

https://twitter.com/Saurabh_Unmute/status/1574694887332532224?ref_src=twsrc%5Etfw%7Ctwcamp%5Etweetembed%7Ctwterm%5E1574694887332532224%7Ctwgr%5E975a378745f29c86e583065edfaf60387ee70784%7Ctwcon%5Es1_&ref_url=https%3A%2F%2Fapnlive.com%2Ftrending%2Funnao-man-bhu-smadhi-viral-video%2F

ಅಸಿವಾನ್ ಪೊಲೀಸ್ ಠಾಣೆ ವ್ಯಾಪ್ತಿಯ ತಾಜ್‌ಪುರ ಗ್ರಾಮದ ನಿವಾಸಿ ಶುಭಂ ಗೋಸ್ವಾಮಿ ಅವರು ನವರಾತ್ರಿಯಂದು ಆರು ಅಡಿ ಆಳದ ಹೊಂಡದಲ್ಲಿ ಸಮಾಧಿ ಮಾಡಿಕೊಂಡಿದ್ದಾರೆ. ಆದರೆ, ಆತನ ತಂದೆ ವಿನೀತ್ ಗೋಸ್ವಾಮಿ ಕೂಡ ಮಗನ ಸಮಾಧಿ ಮಾಡಲು ಗುಂಡಿ ತೋಡುವಲ್ಲಿ ತೊಡಗಿದ್ದರು ಎಂದು ವರದಿಯಾಗಿದೆ. ಶುಭಂ ಗೋಸ್ವಾಮಿ, ತಂದೆ ವಿನೀತ್ ಗೋಸ್ವಾಮಿ ಮತ್ತು ಪುರೋಹಿತರಾದ ಮುನ್ನಾಲಾಲ್ ಮತ್ತು ಶಿವಕೇಶ್ ದೀಕ್ಷಿತ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸಿದ ನಂತರ ಘಟನೆಯಲ್ಲಿ ಭಾಗಿಯಾಗಿದ್ದ ಇತರರು ಸ್ಥಳದಿಂದ ಪರಾರಿಯಾಗಿದ್ದಾರೆ.ಸುಮಾರು ಐದು ವರ್ಷಗಳಿಂದ ಗ್ರಾಮದ ಹೊರಗೆ ಗುಡಿಸಲಿನಲ್ಲಿ ವಾಸಿಸುತ್ತಿದ್ದ ಶುಭಂ ಅವರನ್ನು ವೈದ್ಯಕೀಯ ಪರೀಕ್ಷೆಯ ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಅಲ್ಲಿಂದ ಜೈಲಿಗೆ ಕಳುಹಿಸಲಾಗಿದೆ.
ಭಾನುವಾರ ಸಂಜೆ ಯುವಕ ಸಮಧಿಯಾಗಲು 6 ಅಡಿ ಹೊಂಡ ಪ್ರವೇಶಿಸಿದ್ದ. ಮಾಹಿತಿ ತಿಳಿದ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದು, ಕೂಡಲೇ ಸ್ಥಳಕ್ಕೆ ಧಾವಿಸಿ ಆತನನ್ನು ರಕ್ಷಿಸಿದ್ದಾರೆ.

ಪ್ರಮುಖ ಸುದ್ದಿ :-   ಅಮೆರಿಕ ಮಾದರಿಯಲ್ಲಿ ಭಾರತದಲ್ಲೂ 50% ಉತ್ತರಾಧಿಕಾರ ತೆರಿಗೆ : ಸ್ಯಾಮ್ ಪಿತ್ರೊಡಾ ಹೇಳಿಕೆಯಿಂದ ವಿವಾದ ; ಬಿಜೆಪಿ ವಾಗ್ದಾಳಿ, ಇದು ನಮ್ಮ ಕಲ್ಪನೆಯಲ್ಲ ಎಂದ ಕಾಂಗ್ರೆಸ್

2 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement