ತನ್ನ ಹಿಡಿಯಲು ಮರದ ತುದಿಗೇರಿದ್ದ ಹುಲಿಗೆ ಚಳ್ಳೆ ಹಣ್ಣು ತಿನ್ನಿಸಿ ಸಾವಿನ ದವಡೆಯಿಂದ ಪಾರಾದ ಮಂಗ, ದೊಪ್ಪೆಂದು ನೆಲಕ್ಕೆ ಬಿದ್ದ ಹುಲಿ | ವೀಕ್ಷಿಸಿ

ಹುಲಿಯೊಂದು ಕೋತಿಯನ್ನು ಬೇಟೆಯಾಡಲು ಯತ್ನಿಸುತ್ತಿರುವ ಆಕರ್ಷಕ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮರವೊಂದರ ಮೇಲಿದ್ದ ಬುದ್ಧಿವಂತ ಕೋತಿಯನ್ನು ಬೇಟೆಯಾಡಲು ಯತ್ನಿಸಿದ ಹುಲಿ ಮಂಗನ ಬುದ್ಧಿವಂತಿಕೆ ಎದುರು ದಯನೀಯವಾಗಿ ವಿಫಲವಾಗಿ ಮರದ ತುದಿಯಿಂದ ಕೆಳಗೆ ಬಿದ್ದ ವೀಡಿಯೊ ಇದಾಗಿದೆ. .
ವೈರಲ್ ವಿಡಿಯೋದಲ್ಲಿ, ಮಧ್ಯಮ ಗಾತ್ರದ ಮರದ ತುದಿಯ ಮೇಲೆ ಹುಲಿಯನ್ನು ಕಾಣಬಹುದು. ಹುಲಿಯು ಕೊಂಬೆಗಳ ಮೇಲೆ ಆಕ್ರಮಣಕಾರಿ ಸ್ಥಾನದಲ್ಲಿದೆ, ಆದರೆ ಮಂಗವು ಹುಲಿಯ ಕೆಳಗಿನ ಕೊಂಬೆಯನ್ನು ಹಿಡಿದು ಕೊಂಡಿರುವುದು ಕಂಡುಬರುತ್ತದೆ. ಆದರೆ ಮರಗಳು ಮಂಗಗಳ ಆಟದ ಮೈದಾನ. ಆದರೆ ಹುಲಿಗಳಿಗೆ ಅಲ್ಲ ಎಂಬುದು ಈ ಕ್ಲಿಪ್‌ ಮತ್ತೊಮ್ಮೆ ನಿರೂಪಿಸಿದೆ.

ಕೋತಿ ನಂತರ ತನ್ನ ಪ್ರಾಣಾಪಾಯದ ಪರಿಸ್ಥಿತಿಯಿಂದ ಹೊರಬರಲು ಒಂದು ಮಾರ್ಗೋಪಾಯವನ್ನು ಹುಡುಕಲು ಯೋಜನೆಯನ್ನು ರೂಪಿಸುವುದನ್ನು ನೋಡಬಹುದು ಮತ್ತು ಹುಲಿ ತಾನು ಕೋತಿಯನ್ನು ಹಿಡಿಯಬಹುದೆಂದು ಯೋಚಿಸುವಂತೆ ಮಾಡು ಮೋಸಗೊಳಿಸುತ್ತದೆ. ಹುಲಿಯು ಮಂಗನ ಕಡೆಗೆ ಚಲಿಸುವಾಗ, ನಿಧಾನವಾಗಿ ಆದರೆ ಅಷ್ಟೊಂದು ಗುಟ್ಟಾಗಿ ಅಲ್ಲ, ಕೋತಿಯು ತಾನು ಕೆಳಗೆ ಬೀಳುತ್ತಿರುವಂತೆ ಅಥವಾ ಹುಲಿಗೆ ಸಿಕ್ಕೇ ಬಿಟ್ಟಿತು ಎಂಬಂತೆ ವರ್ತಿಸುತ್ತದೆ. ಆದರೆ, ಇನ್ನೇನು ಹುಲಿ ಕೋತಿಯನ್ನು ಹಿಡಿದೇ ಬಿಟ್ಟಿತು ಎನ್ನುವಾಗ ಕೋತಿಯು ಹುಲಿಯನ್ನು ಮೋಸಗೊಳಿಸಿ ಮರದ ಮೇಲಿರುವ ಕೊಂಬೆಗಳ ಮೇಲೆ ಜೋಕಾಲಿ ಹೊಡೆದು ಪಾರಾಗಿದೆ. ಮರದ ತುದಿಯಿಂದ ಮಂಗನ ಮೇಲೆ ಎಗರಿದ ಹುಲಿ ಆಯತಪ್ಪಿ ನೆಲದ ಮೇಲೆ ದೊಪ್ಪೆಂದು ಬಿದ್ದಿದೆ.

ಪ್ರಮುಖ ಸುದ್ದಿ :-   ನೂಪುರ್ ಶರ್ಮಾ ಸೇರಿದಂತೆ ಹಲವು ಹಿಂದೂ ನಾಯಕರ ಹತ್ಯೆಗೆ ಸಂಚು: ಮೌಲ್ವಿ ಬಂಧನ

ಈ ವಿಡಿಯೋವನ್ನು ಐಎಎಸ್ ಅಧಿಕಾರಿ ಅವನೀಶ್ ಶರಣ್ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, ಅವರು ತಮ್ಮ ಟ್ವೀಟ್‌ನಲ್ಲಿ ಹೀಗೆ ಬರೆದಿದ್ದಾರೆ: “ಹಾಲತ್ ಕಾ ‘ಶಿಕಾರ್’. ಈ ಕ್ಲಿಪ್ 174k ವೀಕ್ಷಣೆಗಳನ್ನು ಮತ್ತು 8,300 ಲೈಕ್‌ಗಳನ್ನು ಸ್ವೀಕರಿಸಿದೆ. ಹುಲಿಗೆ ತನ್ನದೇ ಔಷಧದ ರುಚಿ ಸಿಕ್ಕಿದೆ ಎಂದು ಹೇಳುವ ಮೂಲಕ ಟ್ವಿಟರ್‌ ವೀಡಿಯೊದೊಂದಿಗೆ ರಂಜಿಸಿದೆ.

4 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement