ಮನೆ ಗೋಡೆ ಕುಸಿದು 4 ವರ್ಷದ ಮಗು ಸೇರಿ ಮೂವರು ಸಾವು

ರಾಯಚೂರು: ನಿರಂತರ ಮಳೆಯಿಂದ ತೇವಾಂಶಗೊಂಡ ಮನೆಯ ಗೋಡೆ ಕುಸಿದು 4 ವರ್ಷದ ಮಗು ಸೇರಿದಂತೆ ದಂಪತಿ ಸೇರಿ ಮೂವರು ಮೃತಪಟ್ಟ ಘಟನೆ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಕುರ್ಡಿ ಗ್ರಾಮದಲ್ಲಿ ಸಂಭವಿಸಿದೆ.
ಮೃತರನ್ನು ಪರಮೇಶ(45), ಜಯಮ್ಮ(39) ಹಾಗೂ ಹಾಗೂ ಪರಮೇಶ ಅವರ ಸಹೋದರನ ಪುತ್ರ ಭರತ (4) ಎಂದು ಗುರುತಿಸಲಾಗಿದೆ.

ಪರಮೇಶ ಹಾಗೂ ಜಯಮ್ಮ ದಂಪತಿ ಸ್ಥಳದಲ್ಲೇ ಮೃತಪಟ್ಟರೆ ಬಾಲಕ ಭರತನನ್ನು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮೃತಪಟ್ಟಿದ್ದಾನೆ. ಮಗು ಸೇರಿದಂತೆ ಪತಿ ಹಾಗೂ ಪತ್ನಿ ರಾತ್ರಿ ಊಟ ಮಾಡಿ ಮಲಗಿದ್ದರು. ಎರಡು ದಿನಗಳಿಂದ ನಿರಂತರವಾಗಿ ಸುರಿದ ಮಳೆಯಿಂದಾಗಿ ಮನೆಯ ಗೋಡೆ ನೆನೆದು ಸೋಮವಾರ ಬೆಳಗಿನ ಜಾವ ಕುಸಿದು ಅವರ ಮೇಲೆ ಬಿದ್ದಿದೆ. ಸ್ಥಳಕ್ಕೆ ಮಾನ್ವಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement