ಅನೇಕ ಗ್ರಾಪಂಗಳಿಗೆ ಚುನಾವಣೆ ಘೋಷಣೆ: ಅಕ್ಟೋಬರ್‌ 28ರಂದು ಮತದಾನ

ಹಾಗೂ ಅಕ್ಟೋಬರ್ 31ರಂದು ಫಲಿತಾಂಶ ಪ್ರಕಟವಾಗಲಿದೆ.
ಈ ಕುರಿತು ಪ್ರಕಟಣೆ ನೀಡಿರುವ ರಾಜ್ಯ ಚುನಾವಣಾ ಆಯೋಗವು, 2022ರ ಆಗಸ್ಟ್ ನಿಂದ 2022ರ ನವೆಂಬರ್ ವರೆಗೆ ಮುಕ್ತಾಯವಾಗಲಿರುವಂತೆ 203 ಗ್ರಾಮ ಪಂಚಾಯತಗಳಿಗೆ ಹಾಗೂ ವಿವಿಧ ಕಾರಣಗಳಿಂದ ಖಾಲಿ ಇರುವ ಅಥವಾ ತೆರವಾಗಿರುವ 49 ಗ್ರಾಮ ಪಂಚಾಯತಗಳಿಗೆ ಉಪ ಚುನಾವಣೆ ಘೋಷಣೆ ಮಾಡಲಾಗಿದೆ.ಅಕ್ಟೋಬರ್ 28ರಂದು ಮತದಾನ ನಡೆಯಲಿದ್ದು, ಅಕ್ಟೋಬರ್ 31ಕ್ಕೆ ಫಲಿತಾಂಶ ಪ್ರಕಟಿಸಲಾಗುತ್ತದೆ.

ಜಿಲ್ಲಾಧಿಕಾರಿಗಳಿಂದ ಈ ಬಗ್ಗೆ 13-10-2022ರಂದು ಅಧಿಸೂಚನೆಯನ್ನು ಹೊರಡಿಸಲಾಗುತ್ತದೆ. ಅಕ್ಟೋಬರ್‌ 18 ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನಾಂಕವಾಗಿದ್ದು, ನಾಮಪತ್ರಗಳ ಪರಿಶೀಲನೆ 19ರಂದು ನಡೆಯಲಿದೆ. ಉಮೇದುವಾರಿಕೆ ಹಿಂತೆಗೆದುಕೊಳ್ಳಲು ಕೊನೆಯ ಅಕ್ಟೋಬರ್‌ 21 ಕೊನೆಯ ದಿನವಾಗಿದೆ.
ಅಕ್ಟೋಬರ್‌ 28ರಂದು ಬೆಳಿಗ್ಗೆ 7ರಿಂದ ಸಂಜೆ 5 ಗಂಟೆ ವರೆಗೆ ಮತದಾನ ನಡೆಯಲಿದ್ದು, ಮರು ಮತದಾನ ಅವಶ್ಯಕತೆ ಇದ್ದರೆ ದಿನಾಂಕ 30ರಂದು ನಡೆಸಲಾಗುತ್ತದೆ. ಅಕ್ಟೋಬರ್‌ 31ರಂದು ಬೆಳಿಗ್ಗೆ 8 ಗಂಟೆಯಿಂದ ಆರಂಭವಾಗಲಿದೆ ಎಂದು ತಿಳಿಸಲಾಗಿದೆ.

ಪ್ರಮುಖ ಸುದ್ದಿ :-   ಬೇಡ್ತಿ–ವರದಾ ನದಿ ಜೋಡಣೆ ಯೋಜನೆ ಜವಾಬ್ದಾರಿ ರಾಜ್ಯ ಸರ್ಕಾರದ್ದು ; ಡಿಪಿಆರ್‌ ರೂಪಿಸೋದು ಅಂದ್ರೆ ಯೋಜನೆ ಅಂತಿಮ ಎಂದಲ್ಲ : ಕೇಂದ್ರ ಸಚಿವ

3 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement