ಬಾಳಾಸಾಹೇಬ್ ಠಾಕ್ರೆ ಫೋಟೋ ಇರುವ ಬ್ಯಾನರ್ ಹಾಕಿ ಅದರಲ್ಲಿ ಶಿವಸೇನೆಯು ಬಿಜೆಪಿಯ ಗುಲಾಮನಾಗುವುದಿಲ್ಲ ಎಂದು ಬರೆದ ಉದ್ಧವ್ ಬಣ

ಮುಂಬೈ: ಅವರ ದಸರಾ ರ್ಯಾಲಿಗೆ ಮುಂಚಿತವಾಗಿ, ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಬಣವು ಶಿವಾಜಿ ಪಾರ್ಕ್‌ನಲ್ಲಿ ಬಾಳ್ ಠಾಕ್ರೆ ಅವರ ಫೋಟೋದೊಂದಿಗೆ ಬ್ಯಾನರ್‌ಗಳನ್ನು ಹಾಕಿದ್ದು, ‘ಶಿವಸೇನೆಯನ್ನು ಬಿಜೆಪಿಯ ಗುಲಾಮರಾಗಲು ನಾನು ಬಿಡುವುದಿಲ್ಲ’ ಎಂದು ಬ್ಯಾನರ್‌ಗಳಲ್ಲಿ ಬರೆಯಲಾಗಿದೆ.
ಉದ್ಧವ್ ಠಾಕ್ರೆ ಮತ್ತು ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಯ ಎರಡು ಬಣಗಳು ಇಂದು, ಬುಧವಾರ ಸಂಜೆ ಮುಂಬೈನಲ್ಲಿ ದಸರಾ ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡಲಿವೆ. ಜೂನ್‌ನಲ್ಲಿ ವಿಭಜನೆಯಾದ ನಂತರ ಎರಡು ಶಿಬಿರಗಳಿಂದ ನಡೆಯುತ್ತಿರುವ ಪ್ರತ್ಯೇಕ ರ್ಯಾಲಿಗಳನ್ನು ಶಕ್ತಿ ಪ್ರದರ್ಶನವೆಂದು ಬಿಂಬಿಸಲಾಗುತ್ತಿದೆ.
ಇದಕ್ಕೂ ಮೊದಲು, ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಉದ್ಧವ್ ಠಾಕ್ರೆ ಮತ್ತು ಅವರ ಪುತ್ರ ಆದಿತ್ಯ ಠಾಕ್ರೆ ಅವರ ವಿರುದ್ಧ ಮುಸುಕಿನ ಗುದ್ದಾಟದಲ್ಲಿ, ಪ್ರಸಿದ್ಧ ಹಿಂದಿ ಕವಿ ಹರಿವಂಶ ರಾಯ್ ಬಚ್ಚನ್ ಅವರ ದ್ವಿಪದಿಯನ್ನು ಟ್ವೀಟ್ ಮಾಡಿದ್ದಾರೆ.

ದ್ವಿಪದಿ, “ನನ್ನ ಮಗ, ನನ್ನ ಮಗನಾಗಿರುವುದು ನನಗೆ ಉತ್ತರಾಧಿಕಾರಿಯಾಗುವುದಕ್ಕಲ್ಲ, ನನ್ನ ಉತ್ತರಾಧಿಕಾರಿಯಾಗುವವರು ನನ್ನ ಮಗ.”ಎಂದು ಅದು ಹೇಳುತ್ತದೆ.
ಏತನ್ಮಧ್ಯೆ, ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆಯ ಕೆಲವು ಬೆಂಬಲಿಗರು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಅವರ ಬಣದ ಬೆಂಬಲಿಗರೊಂದಿಗೆ ಮುಂಬೈನಲ್ಲಿ ದಸರಾ ರ್ಯಾಲಿಗಳಿಗೆ ಮುಂಚಿತವಾಗಿ ಘರ್ಷಣೆ ನಡೆಸಿದ್ದರಿಂದ ಉಭಯ ಬಣಗಳ ನಡುವಿನ ಪೈಪೋಟಿ ಬೀದಿಗೆ ಬಂದಿತು.
ಉದ್ಧವ್ ಬಣದ ಶಿವಸೇನೆಯ ಮಹಿಳಾ ಬೆಂಬಲಿಗರ ಗುಂಪು ನಾಸಿಕ್‌ನಿಂದ ಮುಂಬೈಗೆ ರ್ಯಾಲಿಯಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದಾಗ ನಾಸಿಕ್-ಆಗ್ರಾ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ. ಶಿಂಧೆ ಗುಂಪಿನ ಬೆಂಬಲಿಗರು ತಾವು ಪ್ರಯಾಣಿಸುತ್ತಿದ್ದ ಬಸ್ ಅನ್ನು ಹಿಂದಿಕ್ಕುವಾಗ ಆಕ್ಷೇಪಾರ್ಹ ಸನ್ನೆಗಳನ್ನು ಮಾಡಿದ್ದಾರೆ ಎಂದು ಅವರು ಆರೋಪಿಸಿದರು. ನಂತರ ಉದ್ಧವ್ ಬಣದ ಬೆಂಬಲಿಗರು ಶಿಂಧೆ ಗುಂಪಿನ ಅನುಯಾಯಿಗಳನ್ನು ಥಳಿಸಿದರು.

ಪ್ರಮುಖ ಸುದ್ದಿ :-   ತಪ್ಪು ಮಾಹಿತಿ ನೀಡಲಾಗಿದೆ : ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ವಿವರಿಸಲು ಮೋದಿ ಭೇಟಿಗೆ ಸಮಯಾವಕಾಶ ಕೋರಿ ಬಹಿರಂಗ ಪತ್ರ ಬರೆದ ಖರ್ಗೆ

4 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement