ಜನನಿಬಿಡ ರಸ್ತೆಯಲ್ಲಿ ಜನ-ವಾಹನ ತಪ್ಪಿಸಿ ಜಿಂಕೆಯ ಭಾರಿ ಜಿಗಿತ.. ಇದು’ಅದ್ಭುತ’ ಎಂದ ನೆಟಿಜನ್‌ಗಳು ….ವೀಕ್ಷಿಸಿ

ಕೆಲವೊಂದು ಸಲ ಅಪಾಯಕಾರಿ ಸನ್ನಿವೇಶದಲ್ಲಿ ಪ್ರಾಣಿಗಳು ಅದ್ಭುತವಾಗಿ ತಮ್ಮ ಜೀವವನ್ನು ಕಾಪಾಡಿಕೊಳ್ಳುತ್ತವೆ. ಕೆಲವೊಮ್ಮೆ ನಂಬಲಸಾಧ್ಯ ದೃಶ್ಯಗಳು ಎದುರಾಗುತ್ತವೆ. ಇಂತಹದ್ದೇ ಒಂದು ಅದ್ಭುತ ದೃಶ್ಯ ವೀಡಿಯೊದಲ್ಲಿ ಸೆರೆಯಾಗಿದೆ. ಜಿಂಕೆಯೊಂದು ಜನ ಹಾಗೂ ವಾಹನಗಳ ಮಧ್ಯೆ ಅದ್ಭುತವಾಗಿ ಜಿಗಿದು ತನ್ನ ಜೀವ ಉಳಿಸಿಕೊಂಡಿದೆ.

ಭಾರತೀಯ ಅರಣ್ಯ ಸೇವೆಗಳ ಅಧಿಕಾರಿ ಸುಸಾಂತ ನಂದಾ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ವಿಡಿಯೊ ಹಂಚಿಕೊಂಡಿದ್ದಾರೆ. ಬೆದರಿದ ಜಿಂಕೆಯೊಂದು ರಸ್ತೆಯ ಒಂದು ಬದಿಯಿಂದ ತನ್ನ ಜೀವ ಉಳಿಸಿಕೊಳ್ಳಲು ಓಡಿ ಬರುತ್ತಿರುವ ದೃಶ್ಯದ ಮೂಲಕ ಈ ಕ್ಲಿಪ್ ಆರಂಭವಾಗುತ್ತದೆ. ಈ ಅಮಾಯಕ ಜೀವಿಗೆ ವಾಹನ ಹಾಗೂ ಜನ ಓಡಾಡುತ್ತಿದ್ದ ರ್ಸತೆಯೊಂದು ಎದುರಾಗುತ್ತದೆ. ಆದರೆ ಅದೇ ವೇಗದಲ್ಲಿ ಜಿಂಕೆ ಒಂದು ಹಂತದಲ್ಲಿ ಅದ್ಭುತವಾಗಿ ಜನರ ಮಧ್ಯೆಯೇ ಜನ ಹಾಗೂ ವಾನಗಳನ್ನು ದಾಟಿ ಜಿಗಿದು ಪಾರಾಗಿದೆ. ಆದರೆ, ಜಿಗಿಯುವಾಗ ಜಿಂಕೆಗೆ ಏನಾದರೂ ಆಗುತ್ತದೋ ಏನೋ ಎಂಬ ಆತಂಕವಿದ್ದರೂ ತುಂಬಾ ಲೆಕ್ಕಾಚಾರದಿಂದಲೇ ಜಿಗಿದ ಜಿಂಕೆ ರಸ್ತೆಯ ಮತ್ತೊಂದು ಪಕ್ಕಕ್ಕೆ ಕ್ಷಣಾರ್ಧಲ್ಲಿ ಜಿಗಿದು ಪಾರಾಗಿ ಹೋಗುತ್ತದೆ.

ಪ್ರಮುಖ ಸುದ್ದಿ :-   ನೂಪುರ್ ಶರ್ಮಾ ಸೇರಿದಂತೆ ಹಲವು ಹಿಂದೂ ನಾಯಕರ ಹತ್ಯೆಗೆ ಸಂಚು: ಮೌಲ್ವಿ ಬಂಧನ

ಈ ವಿಡಿಯೋ ಎಲ್ಲಿ ಹಾಗೂ ಯಾವಾಗ ಸೆರೆಯಾಗಿದ್ದು ಎಂಬುದು ಸ್ಪಷ್ಟವಾಗಿಲ್ಲ. ಆದರೆ, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್‌ ಆಗಿದೆ. ಸಾಕಷ್ಟು ವೀಕ್ಷಣೆಯನ್ನೂ ಗಳಿಸಿದೆ.

4.3 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement