ವಿಜಯದಶಮಿ : ರಾವಣ ಅಲ್ಲ, ಇ.ಡಿ, ಸಿಬಿಐ, ಹಣದುಬ್ಬರದ ಪ್ರತಿಕೃತಿ ದಹನ…!

ಭುಜ್‌: ದುಷ್ಟರ ವಿರುದ್ಧ ಒಳಿತಿನ ವಿಜಯವನ್ನು ಗುರುತಿಸಲು ಇಡೀ ದೇಶ ರಾವಣನ ಪ್ರತಿಕೃತಿ ದಹಿಸುವ ಮೂಲಕ ದಸರಾವನ್ನು ಆಚರಿಸಿದಾಗ ಕಛ್ ಜಿಲ್ಲಾ ಕಾಂಗ್ರೆಸ್ ವತಿಯಿಂದ ಬುಧವಾರ ಜಾರಿ ನಿರ್ದೇಶನಾಲಯ (ಇಡಿ), ಕೇಂದ್ರೀಯ ತನಿಖಾ ದಳ (ಸಿಬಿಐ) ಮತ್ತು ಹಣದುಬ್ಬರದ ಪ್ರತಿಕೃತಿಯನ್ನು ಗುಜರಾತ್‌ನ ಭುಜ್‌ನಲ್ಲಿ ಸುಡಲಾಯಿತು.
ಭುಜ್‌ನ ಹಮೀರ್‌ಸರ್ ಕೊಳದ ದಡದಲ್ಲಿ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಸರ್ಕಾರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ನಡೆಸಿತು.

ರಾವಣನ ಬದಲಿಗೆ ಇ.ಡಿ, ಸಿಬಿಐ ಮತ್ತು ಹಣದುಬ್ಬರ ಪ್ರತಿಕೃತಿ ದಹಿಸಿದ ಕಾಂಗ್ರೆಸ್‌ ಕಾರ್ಯಕರ್ತರು ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಭಟನೆ ನಡೆಸಿದರು.
ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವಾಗ, ಕಾಂಗ್ರೆಸ್ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿತು ಮತ್ತು ಬೆಲೆ ಏರಿಕೆ, ಹಣದುಬ್ಬರ, ಕಳಪೆ ಆರೋಗ್ಯ ಸೌಲಭ್ಯಗಳು, ದುಬಾರಿ ಶಿಕ್ಷಣ ಮತ್ತು ಜಿಎಸ್‌ಟಿಯಂತಹ ವಿಷಯಗಳನ್ನು ಪ್ರಸ್ತಾಪಿಸಿತು.
ಬಿಜೆಪಿ ಸರ್ಕಾರವು ಕೇಂದ್ರ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ಪ್ರತಿಪಕ್ಷಗಳ ಧ್ವನಿಯನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement