ದ್ವೇಷ ಬೆಳೆಸುವ -ಸಾಮಾಜಿಕ ಸಾಮರಸ್ಯ ಕದಡುವ ಯಾವುದೇ ಸಂಘಟನೆಯದರೂ ಅದು ರಾಷ್ಟ್ರ ವಿರೋಧಿ : ಪಿಎಫ್‌ಐ ನಿಷೇಧ ಕುರಿತು ಮೊದಲ ಬಾರಿಗೆ ಮಾತನಾಡಿದ ರಾಹುಲ್ ಗಾಂಧಿ

ತುಮಕೂರು: ದ್ವೇಷ ಬೆಳೆಸುವ ಮತ್ತು ಸಾಮಾಜಿಕ ಸಾಮರಸ್ಯವನ್ನು ಕದಡುವ ಯಾವುದೇ ಸಂಘಟನೆಯದರೂ ಅದು ರಾಷ್ಟ್ರ ವಿರೋಧಿ ಎಂದು ಶನಿವಾರ  ಇದೇ ಮೊದಲ ಬಾರಿಗೆ  ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ)  ನಿಷೇಧದ ಬಗ್ಗೆ ಬಹಿರಂಗವಾಗಿ ಹೇಳಿದ್ದಾರೆ.
ದ್ವೇಷವನ್ನು ಹರಡುವ ವ್ಯಕ್ತಿ ಯಾರು ಎಂಬುದು ಮುಖ್ಯವಲ್ಲ, ಅವರು ಯಾವ ಸಮುದಾಯದಿಂದ ಬಂದವರು ಎಂಬುದು ಮುಖ್ಯವಲ್ಲ, ದ್ವೇಷ ಮತ್ತು ಹಿಂಸಾಚಾರವನ್ನು ಹರಡುವುದು ದೇಶ ವಿರೋಧಿ ಕೃತ್ಯವಾಗಿದೆ ಮತ್ತು ಅಂತಹವರ ವಿರುದ್ಧ ನಾವು ಹೋರಾಡುತ್ತೇವೆ ಎಂದು ರಾಹುಲ್‌ ಗಾಂಧಿ ಹೇಳಿದರು.
ಪ್ರಸ್ತುತ ಕರ್ನಾಟಕದ ತುಮಕೂರಿನಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಟ್ಟುನಿಟ್ಟಾದ ಭಯೋತ್ಪಾದನಾ-ವಿರೋಧಿ ಕಾನೂನು, ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆಯಡಿಯಲ್ಲಿ ಕೇಂದ್ರವು PFI ಮತ್ತು ಅದರೊಂದಿಗೆ ಸಂಯೋಜಿತವಾಗಿರುವ ಸಂಸ್ಥೆಗಳ ಮೇಲೆ ನಿಷೇಧ ಹೇರಿದ ಹಿನ್ನೆಲೆಯಲ್ಲಿ ಈ ಪ್ರತಿಕ್ರಿಯೆ ನೀಡಿದ್ದಾರೆ. ಹಾಗೂ ದ್ವೇಷ ಬೆಳೆಸುವ ಮತ್ತು ಸಾಮಾಜಿಕ ಸಾಮರಸ್ಯವನ್ನು ಕದಡುವ ಯಾವುದೇ ಸಂಘಟನೆಯದರೂ ನಾವು ಅದರ ವಿರುದ್ಧ ಹೋರಾಡುತ್ತೇವೆ ಎಂದು ಹೇಳಿದ್ದಾರೆ.

ಕೇಂದ್ರದಿಂದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಪಿಎಫ್‌ಐಗಳ ಮೇಲೆ ಕೇಂದ್ರ ಸರ್ಕಾರ ನಿಷೇಧ ಹೇರಿದ ನಂತರ ಇದೇ ಮೊದಲ ಬಾರಿಗೆ ಕಾಂಗ್ರೆಸ್ ಉನ್ನತ ನಾಯಕರೊಬ್ಬರು ಈ ವಿಷಯದ ಬಗ್ಗೆ ಮಾತನಾಡಿದ್ದಾರೆ.
ರಾಜಸ್ಥಾನದಲ್ಲಿ ಉದ್ಯಮಿ ಗೌತಮ್ ಅದಾನಿ ಹೂಡಿಕೆಗೆ ಸಂಬಂಧಿಸಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅದಾನಿ ರಾಜಸ್ಥಾನಕ್ಕೆ 60,000 ಕೋಟಿ ರೂ. ಹೂಡಿಕೆ ಮಾಡುವುದಾಗಿ ಹೇಳಿದ್ದರು. ಇದನ್ನು ಯಾವ ಮುಖ್ಯಮಂತ್ರಿಗಳೂ ನಿರಾಕರಿಸಲು ಸಾಧ್ಯವಿಲ್ಲ. ನೋಡಿ, ರಾಜಸ್ಥಾನ ಸರ್ಕಾರವು ಅದಾನಿಗೆ ವಿಶೇಷ ಆತಿಥ್ಯ ನೀಡಲಿಲ್ಲ, ರಾಜಸ್ಥಾನ ಸರ್ಕಾರವು ಅದಾನಿ ವ್ಯವಹಾರಕ್ಕೆ ಸಹಾಯ ಮಾಡಲು ತನ್ನ ರಾಜಕೀಯ ಶಕ್ತಿಯನ್ನು ಬಳಸಲಿಲ್ಲ ಎಂದು ಅವರು ಹೇಳಿದರು.
ನನ್ನ ಪ್ರತಿಭಟನೆ ಏಕಸ್ವಾಮ್ಯದ ವಿರುದ್ಧ ಮಾತ್ರ. ಇಡೀ ವ್ಯವಸ್ಥೆಯು ಕೇವಲ 2-3 ಜನರಿಗೆ ಮಾತ್ರ ಪಕ್ಷಪಾತದಿಂದ ಸಹಾಯ ಮಾಡಲು ಪ್ರಾರಂಭಿಸಿದರೆ, ಅದರಿಂದ ಭಾರತಕ್ಕೆ ಹಾನಿಯಾಗುತ್ತದೆ ಎಂದು ರಾಹುಲ್ ಗಾಂಧಿ ಹೇಳಿದರು. ರಾಜಸ್ಥಾನ ಸರ್ಕಾರವು ಅದಾನಿಗೆ ನ್ಯಾಯಯುತವಲ್ಲದ ರೀತಿಯಲ್ಲಿ ವ್ಯವಹಾರಕ್ಕೆ ಸಹಕರಿಸಿದರೆ, ನಾನು ಅದರ ವಿರುದ್ಧ ನಿಲ್ಲುತ್ತೇನೆ. ಆದರೆ ನಿಯಮಾನುಸಾರ ನೀಡಿದರೆ ತೊಂದರೆ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಗಾಂಧಿ ಕುಟುಂಬವು ಪಕ್ಷದ ಮುಂದಿನ ಅಧ್ಯಕ್ಷರನ್ನು ರಿಮೋಟ್ ಆಗಿ ನಿಯಂತ್ರಿಸಬಹುದೆಂಬ ಭಯವನ್ನು ಅವರು ತಳ್ಳಿಹಾಕಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಅಭ್ಯರ್ಥಿಗಳಾದ ಮಲ್ಲಿಕಾರ್ಜುನ ಖರ್ಗ್ ಮತ್ತು ಶಶಿ ತರೂರ್ ಇಬ್ಬರೂ ಬಲಿಷ್ಠರು ಮತ್ತು ಚೆನ್ನಾಗಿ ಮಾತನಾಡುವ ವ್ಯಕ್ತಿಗಳು ಎಂದು ಅವರು ಹೇಳಿದರು.
(ಚುನಾವಣೆಗೆ) ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದವರಿಬ್ಬರು ಘನತೆ, ದೂರದೃಷ್ಟಿ ಉಳ್ಳವರು ಮತ್ತು ಬುದ್ಧಿವಂತರು. ಅವರಲ್ಲಿ ಯಾರೂ ರಿಮೋಟ್ ಕಂಟ್ರೋಲ್ (ಪಕ್ಷದ ನಾಯಕ) ಆಗುತ್ತಾರೆ ಎಂದು ನಾನು ಭಾವಿಸುವುದಿಲ್ಲ. ಅವರನ್ನು ಅವಹೇಳನ ಮಾಡಲು ಈ ಮಾತುಗಳನ್ನು ಹೇಳಲಾಗುತ್ತಿದೆ ಅಷ್ಟೆ ಎಂದು ಅವರು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ತಾಯಿ, ಹೆಂಡತಿ, ಮೂವರು ಮಕ್ಕಳನ್ನು ಕೊಂದು ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ...

 

3 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement