ದೆಹಲಿ ಎಎಪಿ ಸರ್ಕಾರದ ಸಚಿವರಾಗಿ ಸಾಮೂಹಿಕ ಮತಾಂತರ ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿವಾದದ ನಂತರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ರಾಜೇಂದ್ರ ಪಾಲ್ ಗೌತಮ್

ನವದೆಹಲಿ: ಈ ವಾರದ ಆರಂಭದಲ್ಲಿ ನೂರಾರು ಜನರು ಹಿಂದೂ ಧರ್ಮವನ್ನು ತ್ಯಜಿಸಿ ಬೌದ್ಧ ಧರ್ಮ ಸ್ವೀಕರಿಸಿದ “ಸಾಮೂಹಿಕ ಧಾರ್ಮಿಕ ಮತಾಂತರ” ಕಾರ್ಯಕ್ರಮದಲ್ಲಿ ತಮ್ಮ ಉಪಸ್ಥಿತಿಯ ಬಗ್ಗೆ ಉಂಟಾದ ವಿವಾದದ ನಂತರ ದೆಹಲಿ ಸಚಿವ ರಾಜೇಂದ್ರ ಪಾಲ್ ಗೌತಮ್ ಭಾನುವಾರ ಅರವಿಂದ್ ಕೇಜ್ರಿವಾಲ್ ಸಂಪುಟಕ್ಕೆ ರಾಜೀನಾಮೆ ನೀಡಿದ್ದಾರೆ.
ದೆಹಲಿಯ ಸಮಾಜ ಕಲ್ಯಾಣ ಸಚಿವ ಗೌತಮ್‌ ಅವರು, ಭಾರತೀಯ ಜನತಾ ಪಕ್ಷದಿಂದ (ಬಿಜೆಪಿ) ವ್ಯಾಪಕ ಟೀಕೆಗೆ ಒಳಗಾಗಿದ್ದರು, ರಾಜ್ಯದ ಆಡಳಿತಾರೂಢ ಆಮ್ ಆದ್ಮಿ ಪಕ್ಷ (ಎಎಪಿ) ಹಿಂದೂಗಳ ಭಾವನೆಗಳನ್ನು ಘಾಸಿಗೊಳಿಸಿದೆ ಎಂದು ಆರೋಪಿಸಿದೆ ಮತ್ತು ಹಾಗೂ ಗೌತಮ್‌ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕೆಂದು ಒತ್ತಾಯಿಸಿತ್ತು.
ದೆಹಲಿಯ ಬಿಜೆಪಿ ನಿಯೋಗವೊಂದು ದೆಹಲಿ ಉಪ ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿ ಸಚಿವರ ವಿರುದ್ಧ ದೂರು ದಾಖಲಿಸಿದೆ. ಈ ಘಟನೆಯಿಂದ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗೌತಮ್ ಬಗ್ಗೆ “ಅತ್ಯಂತ ಅಸಮಾಧಾನ” ಹೊಂದಿದ್ದಾರೆ ಎಂದು ವಿಷಯ ತಿಳಿದ ವ್ಯಕ್ತಿಯೊಬ್ಬರು ಹೇಳಿದ್ದರು.

ಶುಕ್ರವಾರ ಸಂಜೆ ಹೇಳಿಕೆಯೊಂದರಲ್ಲಿ, ಗೌತಮ್ ಅವರು ಯಾರ ನಂಬಿಕೆಯ ವಿರುದ್ಧವೂ ಮಾತನಾಡಿಲ್ಲ. ಇದು ಬಿಜೆಪಿ “ಅಪಪ್ರಚಾರ” ಎಂದು ಆರೋಪಿಸಿದರು.
ಬುಧವಾರ, ಸುಮಾರು 10,000 ಜನರು ಬೌದ್ಧ ಧರ್ಮ ಸ್ವೀಕರಿಸಬೇಕಿದ್ದ ಝಂಡೆವಾಲನ್‌ನ ಅಂಬೇಡ್ಕರ್ ಭವನದಲ್ಲಿ ನಡೆದ ಅಶೋಕ ವಿಜಯ ದಶಮಿ ಆಚರಣೆಯಲ್ಲಿ ಸಚಿವ ಗೌತಮ್ ಭಾಗವಹಿಸಿದ್ದರು.
ಈವೆಂಟ್‌ನ ವೀಡಿಯೊವು ಸನ್ಯಾಸಿಯೊಬ್ಬರು, ಗೌತಮ್‌ ಅವರೊಂದಿಗೆ ವೇದಿಕೆಯನ್ನು ಹಂಚಿಕೊಳ್ಳುವುದು, ನೆರೆದಿದ್ದವರಿಗೆ ಪ್ರಮಾಣ ವಚನವನ್ನು ಬೋಧಿಸುವುದನ್ನು ತೋರಿಸುತ್ತದೆ: “ನನಗೆ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರಲ್ಲಿ ನಂಬಿಕೆ ಇಲ್ಲ ಅಥವಾ ನಾನು ಅವರನ್ನು ದೇವರಂತೆ ಪೂಜಿಸುವುದಿಲ್ಲ. ನನಗೆ ರಾಮನ ಮೇಲೆ ಅಥವಾ ಕೃಷ್ಣನ ಮೇಲೆ ನಂಬಿಕೆ ಇರುವುದಿಲ್ಲ, ಅವರನ್ನು ಪೂಜಿಸುವುದಿಲ್ಲ. ನಾನು ಗೌರಿ, ಗಣಪತಿ ಮತ್ತು ಇತರ ಹಿಂದೂ ದೇವರುಗಳಲ್ಲಿ ನಂಬಿಕೆಯನ್ನು ಹೊಂದಿಲ್ಲ ಮತ್ತು ನಾನು ಅವರನ್ನು ಪೂಜಿಸುವುದಿಲ್ಲ ಎಂದು ಹಿಂದೂ ದೇವರುಗಳನ್ನು ಖಂಡಿಸಿ ಪ್ರತಿಜ್ಞೆ ಸ್ವೀಕರಿಸಲಾಗಿದೆ ಎಂದು ಆಪಾದಿತ ವೀಡಿಯೊ ವೈರಲ್‌ ಆಗಿತ್ತು.

ಪ್ರಮುಖ ಸುದ್ದಿ :-   ಉದ್ಯಮಿ, ಬಿಜೆಪಿ ನಾಯಕ ಗೋಪಾಲ ಖೇಮ್ಕಾ ಹತ್ಯೆ ಪ್ರಕರಣ ; ಅವರ ಅಂತ್ಯಕ್ರಿಯೆಗೆ ಹಾರ ಹಿಡಿದುಕೊಂಡು ಬಂದ ಆರೋಪಿ...!

3.5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement