ತ್ರಿಶೂಲ ಅಥವಾ ಉದಯಿಸುತ್ತಿರುವ ಸೂರ್ಯ: ಹೊಸ ಚಿಹ್ನೆಗಾಗಿ ಉದ್ಧವ್ ಠಾಕ್ರೆ ಬಣದ ಆಯ್ಕೆ

ಮುಂಬೈ: ಶಿವಸೇನಾದ ಎರಡು ಬಣಗಳ ಕಿತ್ತಾಟದ ನಡುವೆ, ಪಕ್ಷದ ‘ಬಿಲ್ಲು-ಬಾಣ’ಗಳನ್ನು ಚುನಾವಣಾ ಆಯೋಗ ಎರಡೂ ಬಣಕ್ಕೂ ನಿರ್ಬಂಧಿಸಿದೆ. ಮುಂಬರಲಿರುವ ಮುಂಬೈ ಅಂಧೇರಿ ಪೂರ್ವ ಕ್ಷೇತ್ರದ ಉಪ ಚುನಾವಣೆಗೆ ಉದ್ಧವ್ ಠಾಕ್ರೆ ಮತ್ತು ಏಕನಾಥ್ ಶಿಂಧೆ ಬಣಗಳು ಹೊಸ ಚಿಹ್ನೆಯಡಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಅನಿವಾರ್ಯತೆ ಎದುರಾಗಿದೆ. ಹೀಗಾಗಿ ಉದ್ಧವ್ ಠಾಕ್ರೆ ನೇತೃತ್ವದ ಬಣವು ಮೂರು ಹೊಸ ಹೆಸರು ಹಾಗೂ ಚಿಹ್ನೆಗಳ ಪಟ್ಟಿಯನ್ನು ಚುನಾವಣಾ ಆಯೋಗಕ್ಕೆ ನೀಡಿದೆ.
‘ಶಿವಸೇನಾ ಬಾಳಸಾಹೇಬ್ ಠಾಕ್ರೆ’ ಎನ್ನುವುದು ಉದ್ಧವ್ ಬಣದ ಹೆಸರಿನ ಮೊದಲ ಆಯ್ಕೆಯಾಗಿದ್ದರೆ, ಎರಡನೇ ಆಯ್ಕೆಯಾಗಿ ‘ಶಿವಸೇನಾ ಉದ್ಧವ್ ಬಾಳಸಾಹೇಬ್ ಠಾಕ್ರೆ’ ಎಂಬ ಹೆಸರನ್ನು ನೀಡಿದೆ. ಹಾಗೆಯೇ ತನ್ನ ಚಿಹ್ನೆಯ ಮೊದಲ ಆಯ್ಕೆಯಾಗಿ ‘ತ್ರಿಶೂಲ’ ಮತ್ತು ಎರಡನೇ ಆಯ್ಕೆಯಾಗಿ ಉದಯಿಸುತ್ತಿರುವ ಸೂರ್ಯನ  ಹಾಗೂ ಮೂರನೇ ಆಯ್ಕೆಯಾಗಿ ಟಾರ್ಚ್‌ ಚಿತ್ರವನ್ನು ನೀಡಿದೆ ಎಂದು ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ.

ಉದ್ಧವ್ ಠಾಕ್ರೆ ಮತ್ತು ಏಕನಾಥ್ ಶಿಂಧೆ ಬಣಗಳೆರಡೂ ಭಾನುವಾರ ಪಕ್ಷದ ನಾಯಕರ ಸಭೆ ನಡೆಸುತ್ತಿವೆ. ಚುನಾವಣೆಗೆ ಸಂಬಂಧಿಸಿದಂತೆ ಮತ್ತು ಪಕ್ಷದ ಹೆಸರಿನ ಕುರಿತಂತೆ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ ಇದೆ.
ಶಿವಸೇನಾ, 1989ರಲ್ಲಿ ತನ್ನ ಬಿಲ್ಲು ಮತ್ತು ಬಾಣ ಗುರುತನ್ನು ಚುನಾವಣಾ ಚಿಹ್ನೆಯನ್ನು ಪಡೆದುಕೊಂಡಿತ್ತು. ಅದಕ್ಕೂ ಮುನ್ನ ಅದು ಬೇರೆಬೇರೆ ಚುನಾವಣೆಗಳಲ್ಲಿ ಖಡ್ಗ ಮತ್ತು ಗುರಾಣಿ, ತೆಂಗಿನ ಮರ, ರೈಲ್ವೆ ಎಂಜಿನ್ ಮತ್ತು ತಟ್ಟೆ ಹಾಗೂ ಲೋಟ ಮುಂತಾದ ವಿಭಿನ್ನ ಸಂಕೇತಗಳ ಅಡಿ ಚುನಾವಣೆಗೆ ಸ್ಪರ್ಧಿಸಿತ್ತು.
ಶಿವಸೇನಾ ಪಕ್ಷ ಪಡೆದ ನಂತರ ಈಗ ಮೂಲ ಹೆಸರು ಹಾಗೂ ಪಕ್ಷದ ಬಿಲ್ಲು ಮತ್ತು ಬಾಣದ ಚಿಹ್ನೆಗಾಗಿ ಉದ್ಧವ್ ಮತ್ತು ಶಿಂಧೆ ಬಣಗಳ ನಡುವೆ ಹೋರಾಟ ನಡೆಯುತ್ತಿದೆ. ಸದ್ಯಕ್ಕೆ ಎರಡೂ ಬಣಗಳಿಗೆ ಈ ಚಿಹ್ನೆ ಮತ್ತು ಹೆಸರು ನೀಡದಿರಲು ನಿರ್ಧರಿಸಿ ಚುನಾವಣಾ ಆಯೋಗ, ಚಿಹ್ನೆಯನ್ನು ತಡೆಹಿಡಿದಿದೆ. ಅಲ್ಲದೆ, ತಮ್ಮ ಆಯ್ಕೆಯ ತಲಾ ಮೂರು ಹೆಸರು ಮತ್ತು ಚಿಹ್ನೆಗಳನ್ನು ತನಗೆ ನೀಡುವಂತೆ ಹೇಳಿರುವ ಚುನಾವಣಾ ಆಯೋಗ, ಅವುಗಳಲ್ಲಿ ಎರಡೂ ಬಣಕ್ಕೆ ಒಂದೊಂದು ಹೆಸರು ಹಾಗೂ ಚಿಹ್ನೆ ನೀಡಲಾಗುವುದು ಎಂದು ತಿಳಿಸಿದೆ.

ಪ್ರಮುಖ ಸುದ್ದಿ :-   ನಾಳೆ ಫಿಲಿಪ್ಪೀನ್ಸ್‌ಗೆ ʼಬ್ರಹ್ಮೋಸ್ ಕ್ಷಿಪಣಿʼಗಳ ಮೊದಲ ಸೆಟ್ ನೀಡಲಿದೆ ಭಾರತ

ಚುನಾವಣಾ ಆಯೋಗದ ಮಧ್ಯಂತರ ಆದೇಶದ ಪ್ರಕಾರ, ಎರಡೂ ಗುಂಪುಗಳು ಈಗ ಹೊಸ ಹೆಸರುಗಳನ್ನು ಆರಿಸಬೇಕಾಗುತ್ತದೆ. ಅವರು ಲಭ್ಯವಿರುವ ಉಚಿತ ಚಿಹ್ನೆಗಳ ಪಟ್ಟಿಯಿಂದ ಆಯ್ಕೆಮಾಡಬಹುದಾದ ವಿಭಿನ್ನ ಚಿಹ್ನೆಗಳನ್ನು ಅವರಿಗೆ ಹಂಚಲಾಗುತ್ತದೆ.
ಆಯೋಗವು ಈ ಹಿಂದೆ ತಮ್ಮ ಹಕ್ಕುಗಳನ್ನು ಬೆಂಬಲಿಸಲು ಆಗಸ್ಟ್ 8 ರೊಳಗೆ ಶಾಸಕಾಂಗ ಮತ್ತು ಸಾಂಸ್ಥಿಕ ಬೆಂಬಲದ ಕುರಿತು ಪುರಾವೆಗಳನ್ನು ಸಲ್ಲಿಸಲು ಪ್ರತಿಸ್ಪರ್ಧಿ ಗುಂಪುಗಳನ್ನು ಕೇಳಿತ್ತು.
ನಂತರ ಠಾಕ್ರೆ ಬಣದ ಮನವಿ ಮೇರೆಗೆ ಅಕ್ಟೋಬರ್ 7ರವರೆಗೆ ಗಡುವು ವಿಸ್ತರಿಸಲಾಗಿತ್ತು. ಶುಕ್ರವಾರದಂದು ಅಧಿಸೂಚನೆ ಹೊರಡಿಸಲಾದ ಅಂಧೇರಿ ಪೂರ್ವ ವಿಧಾನಸಭಾ ಉಪಚುನಾವಣೆಯ ದೃಷ್ಟಿಯಿಂದ ಬಿಲ್ಲು ಮತ್ತು ಬಾಣದ ಚುನಾವಣಾ ಚಿಹ್ನೆಯನ್ನು ಹಂಚಿಕೆ ಮಾಡುವಂತೆ ಅಕ್ಟೋಬರ್ 4 ರಂದು ಶಿಂಧೆ ಬಣ ಚುನಾವಣಾ ಆಯೋಗಕ್ಕೆ ಮನವಿ ಮಾಡಿತ್ತು.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement