ಈ ವರ್ಷದ ನವರಾತ್ರಿ ವೇಳೆ 5.40 ಲಕ್ಷ ವಾಹನಗಳ ದಾಖಲೆಯ ಮಾರಾಟ: 57% ರಷ್ಟು ಹೆಚ್ಚಳ ಎಂದ ಎಫ್‌ಎಡಿಎ

ನವದೆಹಲಿ: ಈ ವರ್ಷ ನವರಾತ್ರಿ ಉತ್ಸವದಲ್ಲಿ ದೇಶದಲ್ಲಿ ವಾಹನ ಚಿಲ್ಲರೆ ಮಾರಾಟವು ಶೇಕಡಾ 57 ರಷ್ಟು ಏರಿಕೆಯಾಗಿದ್ದು, ಸುಮಾರು 5.4 ಲಕ್ಷ ವಾಹನಗಳ ದಾಖಲೆಯ ಮಾರಾಟವಾಗಿದೆ ಎಂದು ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಶನ್‌ಗಳ ಒಕ್ಕೂಟ ಸೋಮವಾರ ತಿಳಿಸಿದೆ.
ಸೆಪ್ಟೆಂಬರ್ 26 ಮತ್ತು ಅಕ್ಟೋಬರ್ 5ರ ನಡುವಿನ ಒಟ್ಟು 5,39,227 ವಾಹನಗಳು ಮಾರಾಟವಾಗಿವೆ ಎಂದು ಅದು ತಿಳಿಸಿದೆ. ಕಳೆದ ವರ್ಷ ನವರಾತ್ರಿಯಲ್ಲಿ ಮಾರಾಟವಾದ 3,42,459 ವಾಹನಗಳು ಮಾರಾಟವಾಗಿದ್ದವು ಎಂದು FADA ಹೇಳಿಕೆಯಲ್ಲಿ ತಿಳಿಸಿದೆ.
2019 ರ ನವರಾತ್ರಿಯಲ್ಲಿ 4,66,128 ವಾಹನಗಳು ಮಾರಟವಾಗಿತ್ತು, ಹಾಗೂ ಅದು ಈವರೆಗಿ ಅತ್ಯುತ್ತಮ ಮಾರಾಟವಾಗಿತ್ತು. ಈ ವರ್ಷದ ವಾಹನಗಳ ಮಾರಾಟ ಆ ದಾಖಲೆಯನ್ನು ಮುರಿದಿದೆ ಎಂದು ಅದು ಹೇಳಿದೆ.

ನವರಾತ್ರಿ ಮಾರಾಟ ನೋಡಿದರೆ ಗ್ರಾಹಕರು ಮೂರು ವರ್ಷಗಳ ನಂತರ ಮತ್ತೆ ಶೋರೂಮ್‌ಗಳಿಗೆ ಮರಳಿದ್ದಾರೆ ಎಂದು FADA ಅಧ್ಯಕ್ಷ ಮನೀಶ್ ರಾಜ್ ಸಿಂಘಾನಿಯಾ ಹೇಳಿದ್ದಾರೆ.
ಎಫ್‌ಎಡಿಎ (FADA) ಅಂಕಿಅಂಶಗಳ ಪ್ರಕಾರ, ಈ ವರ್ಷದ ನವರಾತ್ರಿಯಲ್ಲಿ ದ್ವಿಚಕ್ರ ವಾಹನಗಳ ಮಾರಾಟವು 3,69,020 ಯುನಿಟ್‌ಗಳಾಗಿದ್ದು, ಕಳೆದ ವರ್ಷ ಇದೇ ಹಬ್ಬದ ಅವಧಿಯಲ್ಲಿ 2,42,213 ಯುನಿಟ್‌ಗಳಿತ್ತು. ಅಂದರೆ ಶೇಕಡಾ 52.35 ರಷ್ಟು ಬೆಳವಣಿಗೆಯನ್ನು ತೋರಿಸಿದೆ. 2019 ರ ಪೂರ್ವ ಕೋವಿಡ್ ವರ್ಷದ ನವರಾತ್ರಿಯಲ್ಲಿ 3,55,851 ಯುನಿಟ್‌ಗಳಿಗೆ ಹೋಲಿಸಿದರೆ ದ್ವಿಚಕ್ರ ವಾಹನಗಳ ಮಾರಾಟದ ಬೆಳವಣಿಗೆಯು ಶೇಕಡಾ 3.7 ರಷ್ಟಿದೆ.
ಈ ವರ್ಷದ ನವರಾತ್ರಿಯಲ್ಲಿ ಪ್ರಯಾಣಿಕ ವಾಹನಗಳ ಮಾರಾಟವು 1,10,521 ಯುನಿಟ್‌ಗಳಷ್ಟಿದೆ, ಕಳೆದ ವರ್ಷ 64,850 ಯುನಿಟ್‌ಗಳಷ್ಟು ವಾಹನಗಳು ಮಾರಾಟವಾಗಿತ್ತು. ಇದು ಶೇಕಡಾ 70.43 ರಷ್ಟು ಬೆಳವಣಿಗೆಯಾಗಿದೆ ಎಂದು ಎಫ್‌ಎಡಿಎ ತಿಳಿಸಿದೆ.

ಪ್ರಮುಖ ಸುದ್ದಿ :-   ಉತ್ತರ ಪತ್ರಿಕೆಗಳಲ್ಲಿ ಜೈ ಶ್ರೀ ರಾಮ, ಕ್ರಿಕೆಟ್‌ ಆಟಗಾರರ ಹೆಸರು ಬರೆದ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣ ; ಇಬ್ಬರು ಪ್ರಾಧ್ಯಾಪಕರು ಅಮಾನತು

ಅದೇ ರೀತಿ, ವಾಣಿಜ್ಯ ವಾಹನಗಳ ಚಿಲ್ಲರೆ ಮಾರಾಟವು ಸಹ ಕಳೆದ ವರ್ಷ ನವರಾತ್ರಿಯಲ್ಲಿ ಮಾರಾಟವಾದ 15,135 ವಾಹನಗಳಿಗೆ ಹೋಲಿಸಿದರೆ ಈ ವರ್ಷ 22,437 ವಾಹನಗಳು ಮಾರಾಟವಾಗಿದ್ದು, ಶೇ.48.25 ರಷ್ಟು ಏರಿಕೆಯಾಗಿದೆ.
ತ್ರಿಚಕ್ರ ವಾಹನಗಳ ವಿಭಾಗದಲ್ಲಿಯೂ ಈ ಬೆಳವಣಿಗೆ ಕಂಡುಬಂದಿದ್ದು, ಕಳೆದ ವರ್ಷ 9,203 ವಾಹನಗಳಿಗೆ ಹೋಲಿಸಿದರೆ ಈ ವರ್ಷ ನವರಾತ್ರಿಯಲ್ಲಿ 19,809 ವಾಹನಗಳನ್ನು ಮಾರಾಟ ಮಾಡಿದೆ.
ಈ ಟ್ರೆಂಡ್ ದೀಪಾವಳಿಯವರೆಗೆ ಮುಂದುವರಿಯುತ್ತದೆ ಎಂದು ನಾವು ಭಾವಿಸುತ್ತೇವೆ, ಇದರಿಂದಾಗಿ ಈ ಹಬ್ಬದ ಸಮಯದಲ್ಲಿ ಒಂದು ದಶಕದ ಎತ್ತರವನ್ನು ಕಾಣುವ ಪ್ರಯಾಣಿಕ ವಾಹನ ವಿತರಕರು, ದ್ವಿಚಕ್ರ ವಾಹನ ವಿತರಕರು ಸಹ ಉತ್ತಮ ಋತುವನ್ನು ಹೊಂದಿದ್ದಾರೆ ಎಂದು ಸಿಂಘಾನಿಯಾ ಹೇಳಿದ್ದಾರೆ.

2 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement