ಕಾನ್ಪುರ ದೇವಸ್ಥಾನದಲ್ಲಿ ಆರತಿ ಮಾಡುವಾಗ ಮಂಡಿಯೂರಿ ಶಿವನನ್ನು ಪ್ರಾರ್ಥಿಸಿದ ಮೇಕೆ ; ನಂಬಲಾಗದ ವೀಡಿಯೊ ವೈರಲ್- ಬೆರಗಾದ ಇಂಟರ್ನೆಟ್ …ವೀಕ್ಷಿಸಿ

ಪ್ರಾಣಿಗಳು ಅನಿರೀಕ್ಷಿತ ವರ್ತನೆಗಳನ್ನು ತೋರುವ ಮೂಲಕ ಮೂಕವಿಸ್ಮಿತರನ್ನಾಗಿ ಮಾಡುತ್ತವೆ. ಉತ್ತರ ಪ್ರದೇಶದ ಕಾನ್ಪುರ ಜಿಲ್ಲೆಯ ದೇಗುಲವೊಂದರ ಮುಂದೆ ಮೇಕೆಯೊಂದು ಮಂಡಿಯೂರಿ ಕುಳಿತು ನಮಸ್ಕರಿಸುತ್ತಿರುವ ವೀಡಿಯೊ ಈಗ ಅಂತರ್ಜಾಲದಲ್ಲಿ ಹರಿದಾಡುತ್ತಿದೆ.
ಈ ವೀಡಿಯೊವನ್ನು ಡೇವಿಡ್ ಜಾನ್ಸನ್ ಎಂಬ ಬಳಕೆದಾರರು ಭಾನುವಾರ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಕ್ಯಾಪ್ಶನ್‌ನಲ್ಲಿ, ಕಾನ್ಪುರ ಜಿಲ್ಲೆಯ ಬಾಬಾ ಆನಂದೇಶ್ವರ ದೇವಸ್ಥಾನದಲ್ಲಿ ಭಕ್ತರೊಬ್ಬರು ಕ್ಲಿಪ್ ಅನ್ನು ಸೆರೆಹಿಡಿದಿದ್ದಾರೆ ಎಂದು ಜಾನ್ಸನ್ ಬರೆದಿದ್ದಾರೆ. ಹಿನ್ನಲೆಯಲ್ಲಿ ಆರತಿಗೆ ಘಂಟೆ ಬಾರಿಸುತ್ತಿರುವಾಗ ಭಕ್ತರು ಕೈಮುಗಿದು ದೇವರಿಗೆ ಪೂಜೆ ಸಲ್ಲಿಸುತ್ತಿರುವುದು ಕಂಡುಬಂದಿದೆ.

ಆಶ್ಚರ್ಯಕರವಾಗಿ, ಇತರ ಭಕ್ತರಂತೆ ಪುರೋಹಿತರು ಭಕ್ತಿಯ ಪ್ರಾರ್ಥನೆ ಮಾಡುತ್ತಿದ್ದಾಗ ಮೇಕೆ ಸದ್ದಿಲ್ಲದೆ ಪ್ರಾರ್ಥನೆಗಳನ್ನು ಸಲ್ಲಿಸುವುದನ್ನು ಮತ್ತು ಮಂಡಿಯೂರಿ ಕುಳಿತುಕೊಳ್ಳುವುದನ್ನು ಗಮನಿಸಲಾಯಿತು. ಮೇಕೆ ಗಲಾಟೆ ಮಾಡದೆ, ತಲೆಯನ್ನು ನೆಲಕ್ಕೆ ಮೆಟ್ಟಿಲಿಗೆ ಊರಿ, ಮುಂದಿನ ಎರಡೂ ಮಂಡಿಯೂರಿ ಭಕ್ತಿಯಿಂದ ಶಿವನಿಗೆ ನಮಸ್ಕರಿಸಿದಂತೆ ವೀಡಿಯೊದಲ್ಲಿ ಭಾಸವಾಗಿದೆ, ಅದರ ಅಕ್ಕಪಕ್ಕದಲ್ಲಿ ಅನೇಕರು ನಮಸ್ಕರಿಸುತ್ತಿರುವುದನ್ನು ಕಾಣಬಹುದು.

ಪೋಸ್ಟ್ ಅನ್ನು ಹಂಚಿಕೊಳ್ಳುವಾಗ, “ಕಾನ್ಪುರದ ಪರಮತ್ ದೇವಾಲಯದಿಂದ ಅದ್ಭುತ ಚಿತ್ರವು ಮುಂಚೂಣಿಗೆ ಬಂದಿದೆ, ಅಲ್ಲಿ ಮೇಕೆ ಬಾಬಾ ಆನಂದೇಶ್ವರನ ಆರತಿ ವೇಳೆ ನಂಬಿಕೆಯಿಂದ ಮಂಡಿಯೂರಿ ಕುಳಿತಿರುವುದು ಕಂಡುಬಂದಿದೆ ಎಂದು ಜಾನ್ಸನ್ ಬರೆದಿದ್ದಾರೆ. ಬಾಬಾ ಆನಂದೇಶ್ವರ ದೇವಾಲಯವು ಹಿಂದೂ ದೇವತೆ ಶಿವನಿಗೆ ಅರ್ಪಿತವಾದ ಗಂಗಾ ನದಿಯ ದಡದಲ್ಲಿರುವ ಪ್ರಸಿದ್ಧ, ಪುರಾತನ ದೇವಾಲಯವಾಗಿದೆ.
ಶೇರ್ ಆದ ಒಂದೇ ದಿನದಲ್ಲಿ ಈ ವಿಡಿಯೋ ನೂರಾರು ವೀಕ್ಷಣೆಗಳನ್ನು ಪಡೆದುಕೊಂಡಿದೆ.

ಪ್ರಮುಖ ಸುದ್ದಿ :-   ನಿಮ್ಮವನಾಗಿದ್ದೆ...ಯಾವಾಗಲೂ ನಿಮ್ಮವನಾಗಿಯೇ ಇರ್ತೇನೆ..: ಬಿಜೆಪಿ ಟಿಕೆಟ್ ನಿರಾಕರಣೆ ನಂತ್ರ ಪಿಲಿಭಿತ್‌ ಜನತೆಗೆ ʼಹೃದಯಸ್ಪರ್ಶಿʼ ಪತ್ರ ಬರೆದ ವರುಣ ಗಾಂಧಿ

3 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement