ಕೇರಳದ ಕಾಸರಗೋಡು ಅನಂತಪುರ ಸರೋವರ ದೇವಸ್ಥಾನದ ಸಸ್ಯಾಹಾರಿ ಮೊಸಳೆ ದೈವಿಕ ‘ಬಬಿಯಾ’ ಇನ್ನಿಲ್ಲ..ಭಕ್ತರ ಕಂಬನಿ | ವೀಕ್ಷಿಸಿ

ಕಾಸರಗೋಡು (ಕೇರಳ): ಸರೋವರ ಕ್ಷೇತ್ರ ಅನಂತಪುರ ಶ್ರೀ ಅನಂತದ್ಮನಾಭ ಸ್ವಾಮಿ ದೇವಸ್ಥಾನದ ಕ್ಷೇತ್ರ ಪಾಲಕನಂತಿದ್ದ ಸಸ್ಯಾಹಾರಿ ಮೊಸಳೆ ಬಬಿಯಾ ನಿಧನಹೊಂದಿದೆ. ಸುಮಾರು 75 ವರ್ಷದ ಬಬಿಯಾ ಭಾನುವಾರ ರಾತ್ರಿ ನಿಧನವಾಗಿದ್ದು, ಭಕ್ತರು ಕಂಬನಿ ಮಿಡಿದಿದ್ದಾರೆ.
ಅನ್ನ ತಿನ್ನಲು ಇಷ್ಟಪಡುತ್ತಿದ್ದ ಕೇರಳದ ಪ್ರಸಿದ್ಧ ದೇವಸ್ಥಾನದ ದೈವಿಕ ಮೊಸಳೆ ಬಬಿಯಾ ಸಸ್ಯಾಹಾರಿಯಾಗಿದ್ದು, ಶ್ರೀ ಅನಂತಪದ್ಮನಾಭ ಸ್ವಾಮಿ ದೇವಸ್ಥಾನದ ಪ್ರಸಾದವನ್ನು ಸೇವಿಸುವ ಮೂಲಕ 70 ವರ್ಷಗಳಿಗೂ ಹೆಚ್ಚು ಕಾಲ ದೇವಾಲಯದ ಸರೋವರದಲ್ಲಿ ವಾಸಿಸುತ್ತಿತ್ತು.
ಸ್ಥಳೀಯ ದಂತಕಥೆಯ ಪ್ರಕಾರ, ಬಬಿಯಾ ಪ್ರತಿದಿನ ದೇವರ ಮಧ್ಯಾಹ್ನದ ಪೂಜೆಯ ನಂತರ ನೀಡಲಾಗುವ ದೇವಾಲಯದ ಪ್ರಸಾದ ತಿಂದು ಜೀವಿಸುತ್ತಿತ್ತು. ಸಸ್ಯಾಹಾರಿ ಪ್ರಸಾದವು ಬೇಯಿಸಿದ ಅನ್ನ ಮತ್ತು ಬೆಲ್ಲವನ್ನು ಒಳಗೊಂಡಿತ್ತು ಮತ್ತು ಭಕ್ತರು ನಿರ್ಭೀತಿಯಿಂದ ಸ್ನೇಹಪರ ಮೊಸಳೆಗೆ ತಿನ್ನಿಸುತ್ತಿದ್ದರು.

ಅನಂತಪುರ ಸರೋವರದ ದೇವಾಲಯವು ಅನಂತಪದ್ಮನಾಭ ಸ್ವಾಮಿಯ ಅಧಿಕೃತ ಸ್ಥಾನ ಎಂದು ನಂಬಲಾಗಿದೆ. ಕೇರಳದ ಕಾಸರಗೋಡು ಜಿಲ್ಲೆಯ ಮಂಜೇಶ್ವರಂ ತಾಲೂಕಿನ ಕುಂಬಳೆ ಪಟ್ಟಣದಿಂದ ಕೆಲವು ಕಿ.ಮೀ ದೂರದಲ್ಲಿರುವ ಅನಂತಪುರ ಎಂಬ ಪುಟ್ಟ ಹಳ್ಳಿಯಲ್ಲಿರುವ ಕೆರೆಯ ಮಧ್ಯದಲ್ಲಿ ಈ ದೇವಾಲಯವನ್ನು ನಿರ್ಮಿಸಲಾಗಿದೆ.
ಈ ದೇವಸ್ಥಾನದ ಕೆರೆಯಲ್ಲಿ ವಾಸಿಸುತ್ತಿದ್ದ ಈ ಮೊಸಳೆಗೆ ನೈವೇದ್ಯ ಮಾಡುವುದು ಇಲ್ಲಿನ ಪ್ರಮುಖ ಸೇವೆ. ಭಕ್ತರು ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವಂತೆ ಬಬಿಯಾ ಬಳಿ ಪ್ರಾರ್ಥಿಸುತ್ತಿದ್ದರು. ಅರ್ಚಕರೇ ಪ್ರತಿನಿತ್ಯ ಬಬಿಯಾಗೆ ನೈವೇದ್ಯ ಅರ್ಪಿಸುತ್ತಿದ್ದರು. ಅರ್ಚಕರ ಕರೆಗೆ ಓಗೊಟ್ಟು ಅದು ಮೇಲೆ ಬರುತ್ತಿತ್ತು. ಸರೋವರದ ಇತರ ಜೀವಿಗಳು ಮತ್ತು ಮೀನುಗಳಿಗೆ ಬಬಿಯಾ ಯಾವುದೇ ಹಾನಿ ಮಾಡುತ್ತಿರಲಿಲ್ಲ.

ಭಕ್ತರು ತಾವು ತಂದ ನೈವೇದ್ಯವನ್ನು ಅರ್ಚಕರಿಗೆ ನೀಡಿದ ನಂತರ, ಅರ್ಚಕರು ಕೆರೆಯ ಕಡೆಗೆ ಹೋಗಿ ಅದಕ್ಕೆ ನೀಡುತ್ತಿದ್ದರು. ಬಬಿಯಾ ವಿಧೇಯತೆಯಿಂದ ಕೊಳದಿಂದ ಹೊರಬಂದು ಅದನ್ನು ತಿನ್ನುತ್ತಿದ್ದಳು.
ಬಬಿಯಾ ಕೊಳದಲ್ಲಿ ಯಾವ ಪ್ರಾಣಿಗೂ ಹಾನಿ ಮಾಡಿಲ್ಲ. ಬಬಿಯಾ ಅನಂತಪದ್ಮನಾಭ ದೇವಾಲಯದ ಕಾವಲು ಕಾಯುತ್ತಾಳೆ ಎಂದು ಭಕ್ತರು ನಂಬಿದ್ದರು. ಅದರ ಸಾವಿನ ಸುದ್ದಿ ಹರಡಿದ ಕೂಡಲೇ, ಪ್ರೀತಿಯ ಮೊಸಳೆ ಬಬಿಯಾ ನೋಡಲು ನೂರಾರು ಜನ ದೇವಾಲಯಕ್ಕೆ ಆಗಮಿಸಿ ಮೊಸಳೆಯ ಅಂತಿಮ ದರ್ಶನ ಪಡೆದರು.
ಈ ದೇವಾಲಯವು ತಿರುವನಂತಪುರದ ಪದ್ಮನಾಭಸ್ವಾಮಿ ದೇವಾಲಯದ ಮೂಲ ಕ್ಷೇತ್ರ. ಭಾರತದ ಏಕೈಕ ಸರೋವರ ದೇವಾಲಯ. 1945ರಲ್ಲಿ ದೇವಸ್ಥಾನದಲ್ಲಿದ್ದ ಮೊಸಳೆಯನ್ನು ಬ್ರಿಟಿಷ್​ ಸೈನಿಕನೊಬ್ಬ ಗುಂಡಿಕ್ಕಿ ಕೊಂದಿದ್ದನಂತೆ. ಕೆಲ ದಿನಗಳ ನಂತರ ಆತ ಹಾವು ಕಚ್ಚಿ ಸತ್ತಿದ್ದನಂತೆ. ಇದಾದ ಕೆಲ ದಿನಗಳ ನಂತರ ಈ ಮೊಸಳೆ ಬಬಿಯಾ ದೇವಾಲಯದ ಸರೋವರದಲ್ಲಿ ಕಾಣಿಸಿಕೊಂಡಿತ್ತು ಎಂಬ ಪ್ರತೀತಿ ಇದೆ. ದೇವಸ್ಥಾನಕ್ಕೆ ಬರುವ ಭಕ್ತರು ಬಬಿಯಾವನ್ನು ಪ್ರತ್ಯಕ್ಷ ದೇವ ಎಂದೇ ನಂಬಿ ಅದನ್ನು ಪೂಜ್ಯ ಭಾವದಿಂದ ನೋಡುತ್ತಿದ್ದರು. ಪ್ರಸಾದ ಸ್ವೀಕರಿಸುವಾಗ ಸರೋವರದಲ್ಲಿ ಕಾಣಿಸಿಕೊಳ್ಳುತ್ತಿದ್ದ ಬಬಿಯಾವನ್ನ ನೋಡಲು ಜನ ಸೇರುತ್ತಿದ್ದರು.

ಇದೀಗ ಬಬಿಯಾ ಇನ್ನಿಲ್ಲಾ ಎಂಬ ಸುದ್ದಿ ಕೇಳಿ ಭಕ್ತರು ಆಘಾತಗೊಂಡಿದ್ದಾರೆ. ಸಾವಿರಾರು ಮಂದಿ ಬಬಿಯಾದ ಅಂತಿಮ ದರ್ಶನ ಪಡೆಯಲು ಅನಂತಪುರಕ್ಕೆ ಆಗಮಿಸಿದ್ದಾರೆ. ಪ್ರತ್ಯಕ್ಷ ಬಬಿಯಾ ಇನ್ನು ನೆನಪು ಮಾತ್ರ. ಮೊಸಳೆ ಬಬಿಯಾಳ ಅಂತ್ಯಕ್ರಿಯೆ ಸಕಲ ಧಾರ್ಮಿಕ ವಿಧಿಗಳೊಂದಿಗೆ ನಡೆಯುತ್ತಿದೆ.
ವನ್ಯಜೀವಿ ತಜ್ಞರ ಪ್ರಕಾರ, ಬಬಿಯಾ ಮಗ್ಗರ್ ಮೊಸಳೆ. ದೇವಾಲಯದ ನೈವೇದ್ಯಗಳು ಅವಳಿಗೆ ಆಹಾರವಾಗಿದ್ದವು. ಈ ಮುಗ್ಗರ್ ಮೊಸಳೆಗಳ ನೈಸರ್ಗಿಕ ಕಾಡು ಆಹಾರ ಮೀನುಗಳಾಗಿವೆ. ಕಾಡಿನಲ್ಲಿ ಅವುಗಳು ಜಿಂಕೆ, ಕಾಡುಹಂದಿ ಮುಂತಾದ ಸಣ್ಣ ಮತ್ತು ದೊಡ್ಡ ಪ್ರಾಣಿಗಳನ್ನು ಸಹ ತಿನ್ನುತ್ತವೆ ಎಂದು ಮೊಸಳೆ ತಜ್ಞರು ಹೇಳುತ್ತಾರೆ.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ : 1ನೇ ಹಂತದಲ್ಲಿ 62.37%ರಷ್ಟು ಮತದಾನ ; 2019ರ ಮತದಾನದ ಪ್ರಮಾಣಕ್ಕಿಂತ ಕಡಿಮೆ

ಬಿಬಿತಾ ಮೊಸಳೆಯ ವಿಶೇಷತೆಗಳು…

ಬಬಿಯಾ ಬಗ್ಗೆ ಹಲವು ದಂತಕಥೆಗಳಿವೆ. ಇದು ಸ್ವಾತಂತ್ರ್ಯ ಪೂರ್ವದ ಪ್ನಡೆಯುತ್ತಿತ್ತು ಎಂದು ಹೇಳಲಾದ ಪ್ರತೀತಿ. ಅದು ಹಿಂದಿನ ಮೊಸಳೆ ಬಗ್ಗೆ. ದೇವಸ್ಥಾನದ ಕೊಳದಲ್ಲಿ ಓಡಾಡುವ ಈ ಮೊಸಳೆಯ ಕೊಳದ ಉತ್ತರಭಾಗದಲ್ಲಿರುವ ಎರಡು ಗುಹೆಗಳಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಿತ್ತಂತೆ. ಮಧ್ಯಾಹ್ಮದ ಪೂಜೆ ವೇಳೆ ಅರ್ಚಕರಿಂದ ಅನ್ನ ನೈವೇದ್ಯ, ಪ್ರಸಾದ ಸ್ವೀಕರಿಸಿ ಹೋಗುತ್ತಿದ್ದ ಈ ಮೊಸಳೆ ಕೊಳದ ಅವಿಭಾಜ್ಯ ಅಂಗವಾಗಿತ್ತು. ಬಬಿಯಾ ಎಂದು ಕೂಗಿದೊಡನೆ ಬಂದು ಯಾರಾದರೂ ಆಹಾರ ನೀಡಿದರೆ ಸಂತೋಷದಿಂದ ಸ್ವೀಕಾರ ಮಾಡಿ ತೆರಳತ್ತಿತ್ತಂತೆ. ಎಷ್ಟೋ ಮಂದಿ ಅದಕ್ಕೆ ಕೈಯ್ಯಾರೆ ತಿನ್ನಿಸಿದ್ದಿದೆ.

ಇದು ಸ್ವಾತಂತ್ರ್ಯಪೂರ್ವದಲ್ಲಿ ನಡೆದ ಕಥೆಯಂತೆ. ಬಬಿತಾ ಮೊಸಳೆ ಬಗ್ಗೆ ಹೇಗೋ ಕೇಳಿ ತಿಳಿದ ಬ್ರಿಟಿಷ್ ಸೈನಿಕರು  ಇದನ್ನು ಪರೀಕ್ಷಿಸಲು ಬಂದರು. ಬಬಿಯಾ ಎಂದು ಕರೆದಾಗ ಅದು ಸಹಜವಾಗಿಯೇ ಕೊಳದ ಮೇಲೆ ಬಂತು. ಈ ಸಂದರ್ಭದಲ್ಲಿ ಅದರಲ್ಲೊಬ್ಬ ಬಂದೂಕಿನಿಂದ ಅದಕ್ಕೆ ಗಂಡು ಹಾರಿಸಿದ. ಆ ಮೊಸಳೆ ಸತ್ತಿತು. ಆದರೆ ವಿಷದ ಹಾವೊಂದು ಆತನಿಗೆ ಕಚ್ಚಿತಂತೆ. ಆತ ಆಸ್ಪತ್ರೆ ದಾರಿಯಲ್ಲೇ ಸಾವಿಗೀಡಾದ ಎಂಬ ದಂತಕಥೆಗಳಿವೆ.
ಜನಮನದಲ್ಲಿ ನೆಲೆಸಿದ್ದ ಮೊಸಳೆ ತೀರಿಕೊಂಡಾಗ ಭಕ್ತರು ಬಹಳ ಬೇಸರಿಸಿಕೊಂಡಿದ್ದರು. ಆದರೆ ಕೆಲವೇ ದಿನಗಳಲ್ಲಿ ಈ ಕೊಳದಲ್ಲಿ ಮತ್ತೊಂದು ಮೊಸಳೆ ಪ್ರತಯ್ಕಷವಾಯಿತು. ಭಕ್ತರು ಅದನ್ನೂ ಬಬಿಯಾ ಎಂದೇ ಕರೆದರು. ಹಿಂದಿನ ಮೊಸಳೆ ಬಬಿಯಾ ಎಂದು ಕರೆದೊಡನೆ ಬರುತ್ತಿದ್ದರೆ, ಆದರೆ ಈ ಮೊಸಳೆ ಎಲ್ಲರುಊ ಕರೆದರೆ ಬರುತ್ತಿರಲಿಲ್ಲ. ಇದು ಅರ್ಚಕರು ಕರೆದರೆ ಮಾತ್ರ ಬರುತ್ತಿತ್ತು. ಈ ಹಿಂದೆ ಮಾನವನಿಂದ ಆಗಿರುವ ಮೋಸವೇ ಇದಕ್ಕೆ ಕಾರಣ ಎಂಬುದು ಭಕ್ತರ ನಂಬಿಕೆ.

ಪ್ರಮುಖ ಸುದ್ದಿ :-   ಉತ್ತಮ ಪ್ರತಿಕ್ರಿಯೆ, ಜನರು ದಾಖಲೆ ಸಂಖ್ಯೆಯಲ್ಲಿ ಎನ್‌ಡಿಎಗೆ ಮತ ಹಾಕಿದ್ದಾರೆ : ಲೋಕಸಭೆ ಚುನಾವಣೆ 1ನೇ ಹಂತದ ಮತದಾನದ ಬಗ್ಗೆ ಪ್ರಧಾನಿ ಮೋದಿ

ದೇವಸ್ಥಾನದ ಆರಾಧ್ಯದೈವ ಅನಂತಪದ್ಮನಾಭನ ದರ್ಶನದೊಂದಿಗೆ ಜನ ಇದರ ದರ್ಶನಕ್ಕೂ ಕಾಯುತ್ತಿದ್ದರು. ಆದರೆ ಮನಸಾದರೆ ಮಾತ್ರ ಕಾಣಿಸಿಕೊಳ್ಳುತ್ತಿದ್ದ ಬಬಿಯಾ ಕಾಣಿಸಿಕೊಂಡರೆ ಜನರಿಗೆ ಬಹಳ ಅದೃಷ್ಟ ಎಂಬುದು ಭಕ್ತರ ನಂಬಿಕೆ. ಬಬಿಯಾ ಕಂಡಾಗ ಹರಕೆಯನ್ನೂ ಹೊತ್ತುಕೊಂಡವರಿದ್ದಾರೆ.
ಈ ಮೊಸಳೆ ದೇವಸ್ಥಾನದ ಪರಿಸರದಲ್ಲಿ ವಾಸಿಸುವವರಿಗೆ ಆಗಾಗ ಎದುರು ಸಿಗುತ್ತಿತ್ತು. ಮೊದಲು ದೇವಸ್ಥಾನದ ಕೊಳದಲ್ಲೇ ಓಡಾಡುತ್ತಿದ್ದ ಮೊಸಳೆ ಆಗಾಗ ಅನಂತಪದ್ಮನಾಭ ದೇವಸ್ಥಾನದ ಕೊಳದಿಂದ ಸುಮಾರು ದೂರದಲ್ಲಿರುವ ಬನಕ್ಕೆ ಹೊಂದಿಕೊಂಡಿರುವ ಮತ್ತೊಂದು ಕೊಳಕ್ಕೂ ಹೋಗುತ್ತಿತ್ತು. ರಾತ್ರಿ ಹೊತ್ತು ಎರಡು ಕೊಳಗಳ ಮಧ್ಯೆ ತೆವಳಿಕೊಂಡೇ ಹೋಗುತ್ತಿತ್ತು. ಸಾಮಾನ್ಯವಾಗಿ ಇದನ್ನು ಅದು ಪ್ರತಿ ದಿನ ಮಾಡುತ್ತಿತ್ತು. ಎಂಟು ಅಡಿ ಉದ್ದವಿರುವ ಈ ಮೊಸಳೆ ಹೋಗುವ ದಾರಿಯಲ್ಲಿ ದನಕರುಗಳು ಮಲಗಿಕೊಂಡೇ ಇರುತ್ತಿದ್ದವು. ಆದರೂ ಏನೂ ಮಾಡುತ್ತಿರಲಿಲ್ಲ. ವಿಶ್ರಾಂತಿ ತೆಗೆದುಕೊಳ್ಳಲೆಂದು ಕೊಳದ ಮೇಲೆ ಬಂದು ಆಗಾಗ ಮಲಗುತ್ತಿತ್ತು. ಸದ್ದು ಮಾಡದೆ ನೋಡಬಹುದು. ಹೋಗಬಹುದು. ಸದ್ದು ಮಾಡಿದರೆ ಅದು ಕಿರಿಕಿರಯಾಗಿ ನೀರಿಗೆ ಇಳಿಯುತ್ತಿತ್ತು.

 

4 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement