ಕಾಶ್ಮೀರ: ಗುಂಡಿನ ದಾಳಿಯಿಂದ ತೀವ್ರವಾಗಿ ಗಾಯಗೊಂಡಿದ್ದರೂ ಹೆದರದೆ ಇಬ್ಬರು ಭಯೋತ್ಪಾದಕರ ಸಾವಿಗೆ ಕಾರಣವಾದ ಸೇನೆಯ ನಾಯಿ ‘ಜೂಮ್’ ಇನ್ನಿಲ್ಲ

ನವದೆಹಲಿ: ಕಾಶ್ಮೀರದ ಅನಂತನಾಗ್‌ನಲ್ಲಿ ಭಯೋತ್ಪಾದಕರೊಂದಿಗಿನ ಎನ್‌ಕೌಂಟರ್‌ನಲ್ಲಿ ಗಾಯಗೊಂಡು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಸೇನೆಯ ನಾಯಿ ‘ಜೂಮ್’ ಗುರುವಾರ ಮೃತಪಟ್ಟಿದೆ ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ.
“ಸೇನಾ ನಾಯಿ ಜೂಮ್, 54 AFVH (ಅಡ್ವಾನ್ಸ್ ಫೀಲ್ಡ್ ವೆಟರ್ನರಿ ಹಾಸ್ಪಿಟಲ್) ನಲ್ಲಿ ಚಿಕಿತ್ಸೆಯಲ್ಲಿತ್ತು, ಇಂದು ಗುರುವಾರ ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಕೊನೆಯುಸಿರೆಳೆದಿದೆ. ಬೆಳಿಗ್ಗೆ 11:45 ರ ಸುಮಾರಿಗೆ ಅವರು ಉತ್ತಮವಾಗಿ ಪ್ರತಿಕ್ರಿಯಿಸುತ್ತಿತ್ತು, ಅವರು ಇದ್ದಕ್ಕಿದ್ದಂತೆ ಏದುಸಿರು ಬಿಡಲು ಪ್ರಾರಂಭಿಸಿತು ಮತ್ತು ಕುಸಿದುಬಿತ್ತು ಎಂದು ಸೇನೆ ತಿಳಿಸಿದೆ.
ಅನಂತನಾಗ್‌ನ ಕೋಕರ್‌ನಾಗ್‌ನಲ್ಲಿ ನಡೆದ ಯುದ್ಧ ಕಾರ್ಯಾಚರಣೆಯಲ್ಲಿ, ‘ಜೂಮ್’ ಭಯೋತ್ಪಾದಕರ ಮೇಲೆ ದಾಳಿ ಮಾಡಿತು ಮತ್ತು ಭಯೋತ್ಪಾಕರಿಂದ ಗುಂಡಿನ ದಾಳಿಗೆ ಒಳಗಾಗಿ ಗಾಯಗೊಂಡಿತ್ತು. ಆದರೂ ಕೆಚ್ಚೆಯ ಹೋರಾಟ ನಡೆಸಿ ಇಬ್ಬರು ಭಯೋತ್ಪಾದಕರ ಸಾವಿಗೆ ಕಾರಣವಾಗಿತ್ತು.

“ಜೂಮ್‌ನ ಸ್ಥಿತಿ ಸುಧಾರಿಸುತ್ತಿತ್ತು ಮತ್ತು ಚಿಕಿತ್ಸೆಗೆ ಉತ್ತಮವಾಗಿ ಪ್ರತಿಕ್ರಿಯಿಸುತ್ತಿತ್ತು. ನಾಯಿಯು ಮಧ್ಯಾಹ್ನದವರೆಗೆ ಚೆನ್ನಾಗಿಯೇ ಇತ್ತು, ನಂತರ ಅದು ಇದ್ದಕ್ಕಿದ್ದಂತೆ ಉಸಿರುಗಟ್ಟಲು ಪ್ರಾರಂಭಿಸಿತು ಮತ್ತು ಶೀಘ್ರದಲ್ಲೇ ಕುಸಿಯಿತು” ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಗಾಯಗಳ ನಡುವೆಯೂ, ಅವರು ತನ್ನ ಕಾರ್ಯವನ್ನು ಮುಂದುವರೆಸಿತು, ಇಬ್ಬರು ಭಯೋತ್ಪಾದಕರ ಸಾವಿಗೆ ಕಾರಣವಾಯಿತು ಎಂದು ಸೇನೆ ತಿಳಿಸಿದೆ. ನಾಯಿಯು ಆಪರೇಷನ್ ಟ್ಯಾಂಗ್‌ಪಾವಾಸ್‌ನ ಯುದ್ಧ ತಂಡದ ಭಾಗವಾಗಿತ್ತು. ‘ಜೂಮ್’ ಕರ್ತವ್ಯದದಲ್ಲಿ ತನ್ನ ಪ್ರಾಣವನ್ನು ಅರ್ಪಿಸಿತು. 09 ಅಕ್ಟೋಬರ್ 22 ರಂದು ಆಪ್ ಟಾಂಗ್ಪಾವಾ ಕಾರ್ಯಾಚರಣೆ ಸಮಯದಲ್ಲಿ ಗುಂಡಿನ ದಾಳಯಿಂದ ಗಾಯಗೊಂಡಿತ್ತು. ಆದರೂ ಅದು ಭಯೋತ್ಪಾದಕರೊಂದಿಗೆ ವೀರಾವೇಶದಿಂದ ಹೋರಾಡಿತು, ಸೈನಿಕರ ಪ್ರಾಣ ಉಳಿಸಿತು. ಜೂಮ್‌ನ ನಿಸ್ವಾರ್ಥ ಬದ್ಧತೆ ಮತ್ತು ರಾಷ್ಟ್ರದ ಸೇವೆ ಎಂದೆಂದಿಗೂ ಸ್ಮರಣೀಯ ಎಂದು ಸೇನೆ ಟ್ವೀಟ್‌ ಮಾಡಿದೆ.

ಪ್ರಮುಖ ಸುದ್ದಿ :-   ನೀವು ಅಮಾಯಕರಲ್ಲ : ಬಾಬಾ ರಾಮದೇವ, ಆಚಾರ್ಯ ಬಾಲಕೃಷ್ಣಗೆ ಸುಪ್ರೀಂ ಕೋರ್ಟ್‌ ಮತ್ತೆ ತರಾಟೆ

ಜೂಮ್ ಎರಡು ವರ್ಷ ಮತ್ತು ಒಂದು ತಿಂಗಳ ವಯಸ್ಸಿನ ಬೆಲ್ಜಿಯನ್ ಶೆಫರ್ಡ್ ತಳಿಯಾಗಿದ್ದು, ಕಳೆದ ಎಂಟು ತಿಂಗಳಿನಿಂದ ಸೇವೆಯಲ್ಲಿ ಸಕ್ರಿಯವಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅನಂತ್‌ನಾಗ್‌ನಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಇಬ್ಬರು ಲಷ್ಕರ್-ಎ-ತೊಯ್ಬಾ ಭಯೋತ್ಪಾದಕರು ಹತರಾಗಿದ್ದಾರೆ. ಎನ್‌ಕೌಂಟರ್‌ನಲ್ಲಿ ‘ಜೂಮ್’ ಜೊತೆಗೆ ಇಬ್ಬರು ಸೈನಿಕರೂ ಗಾಯಗೊಂಡಿದ್ದಾರೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement