ಕೈಗಾ ಅಣು ಸ್ಥಾವರ ವಿಸ್ತರಣೆಗೆ ನೀಡಿದ್ದ ಪರಿಸರ ಅನುಮತಿ ಅಮಾನತು

ಕಾರವಾರ: ಕೈಗಾ ಟಕ 5 ಮತ್ತು 6ನೇ ಘಟಕದ ವಿಸ್ತರಣೆಗಾಗಿ ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (ಎನ್‌ಪಿಸಿಐಎಲ್‌)ಗೆ ನೀಡಿದ್ದ ಪರಿಸರ ಅನುಮತಿಗಳನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ)ಯು ಕಾರ್ಯವಿಧಾನಗಳಲ್ಲಿನ ಲೋಪ ಉಲ್ಲೇಖಿಸಿ ಅಮಾನತುಗೊಳಿಸಿದೆ.
ನ್ಯಾಯಮೂರ್ತಿ ಕೆ. ರಾಮಕೃಷ್ಣನ್ (ನ್ಯಾಯಾಂಗ ಸದಸ್ಯ) ಮತ್ತು ಸತ್ಯಗೋಪಾಲ ಕೊರ್ಲಪಾಟಿ (ಪರಿಸರ ಸದಸ್ಯ) ಅವರನ್ನೊಳಗೊಂಡ ಎನ್‌ಜಿಟಿಯ ದಕ್ಷಿಣ ಪೀಠವು ತನ್ನ ಆದೇಶದಲ್ಲಿ ಕೈಗಾ 5 ಮತ್ತು 6ನೇ ಘಟಕಗಳ ವಿಸ್ತರಣಾ ಯೋಜನೆಗಾಗಿ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು 235 ಮೆಗಾ ವ್ಯಾಟ್‌ನಿಂದ 700 ಮೆಗಾವ್ಯಾಟ್‌ಗೆ ಹೆಚ್ಚಿಸಲು ಎನ್‌ಪಿಸಿಐಎಲ್‌ಗೆ ನೀಡಿದ್ದ ಪರಿಸರ ಅನುಮತಿಯನ್ನು ಅಮಾನತುಗೊಳಿಸಲಾಗಿದೆ ಎMದು ಹೇಳಿದೆ. ಈ ಅನುಮತಿಯನ್ನು ಆಗಸ್ಟ್ 2019ರಲ್ಲಿ ನೀಡಲಾಗಿತ್ತು.
ಎನ್‌ಪಿಸಿಐಎಲ್‌ ಹೊಸದಾಗಿ ಪರಿಸರ ಅನುಮತಿಗಳನ್ನು ಪಡೆಯುವವರೆಗೆ, ಯೋಜನೆಯ ಕಾರ್ಯಾರಂಭವನ್ನು ಪ್ರಾರಂಭಿಸದಂತೆ ಯೋಜನೆಯ ಪ್ರತಿಪಾದಕರಿಗೆ ನಿರ್ದೇಶಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಆದಾಗ್ಯೂ, ಎನ್‌ಪಿಸಿಐಎಲ್ ಈ ನಿಟ್ಟಿನಲ್ಲಿ ಪರಿಸರ ಮತ್ತು ಅರಣ್ಯ ಸಚಿವಾಲಯವು ಹೊರಡಿಸುವ ಮುಂದಿನ ನಿರ್ದೇಶನಗಳಿಗೆ (ಯಾವುದಾದರೂ ಇದ್ದರೆ) ತಮ್ಮ ಸ್ವಂತ ರಿಸ್ಕ್‌ ಮೇಲೆ ಒಳಪಟ್ಟು ಯೋಜನೆಯ ನಿರ್ಮಾಣವನ್ನು ಮುಂದುವರಿಸಬಹುದು ಎಂದು ಹೇಳಿದೆ.
ಕೈಗಾ ಅಣುವಿದ್ಯುತ್ ಸ್ಥಾವರದ 5 ಮತ್ತು 6 ಘಟಕ ವಿರೋಧಿ ಹೋರಾಟ ಸಮಿತಿ, ಕಾರವಾರ, ಪರಿಸರ ಅನುಮತಿಯ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಯನ್ನು ಎನ್‌ಜಿಟಿ ವಿಚಾರಣೆ ನಡೆಸುತ್ತಿದೆ. ಯೋಜನೆಯು ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ವಲಯಕ್ಕೆ ಸೇರಿದ್ದು, ಪರಮಾಣು ವಿದ್ಯುತ್ ಯೋಜನೆಯನ್ನು ಸ್ಥಾಪಿಸುವುದು ಕೆಂಪು ವರ್ಗದ ಉದ್ಯಮವಾಗಿದ್ದು, ಪ್ರದೇಶದ ಜೀವವೈವಿಧ್ಯಕ್ಕೆ ಅಪಾಯವಾಗಿದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ. ಕೈಗಾ ಯೋಜನಾ ಪ್ರದೇಶವು ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ವಲಯದೊಳಗೆ ಬರುತ್ತದೆಯೇ ಮತ್ತು ಕೈಗಾ ಗ್ರಾಮದ ಮೇಲೆ ಯೋಜನೆಯು ಎಷ್ಟು ಪರಿಣಾಮ ಬೀರುತ್ತದೆ ಎಂಬುದರ ಕುರಿತು ಯೋಜನಾ ಮಂಡಳಿಗೆ MoEF ಹೆಚ್ಚುವರಿ ಉಲ್ಲೇಖಗಳನ್ನು ನೀಡಬೇಕು ಎಂದು ಎನ್‌ಜಿಟಿ ಹೇಳಿದೆ. ಈ ಘಟಕಗಳಿಂದ ಪರಮಾಣು ವಿಕಿರಣದಿಂದ ಸ್ಥಳೀಯರ ಆರೋಗ್ಯದ ಮೇಲೆ ಪರಿಣಾಮ ಬೀರುವ ಬಗ್ಗೆ ಅಧ್ಯಯನ ನಡೆಸುವಂತೆ ಎನ್‌ಪಿಸಿಐಎಲ್‌ಗೆ ಎನ್‌ಜಿಟಿ ನಿರ್ದೇಶನ ನೀಡಿದೆ.

ಪ್ರಮುಖ ಸುದ್ದಿ :-   ಬಂಟ್ವಾಳ | ಯುವತಿಗೆ ಇರಿದು ನಂತ್ರ ಆತ್ಮಹತ್ಯೆಗೆ ಶರಣಾದ ಯುವಕ

 

 

3 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement