ಮಹಾರಾಷ್ಟ್ರ : 13 ಮಂದಿಯನ್ನು ಕೊಂದ ನರಭಕ್ಷಕ ಹುಲಿ ಸೆರೆ

ಗಡ್ಚಿರೋಲಿ: ಮಹಾರಾಷ್ಟ್ರದ ವಿದರ್ಭ ಪ್ರದೇಶದ ಮೂರು ಜಿಲ್ಲೆಗಳಲ್ಲಿ ಕಳೆದ 10 ತಿಂಗಳ ಅವಧಿಯಲ್ಲಿ 13 ಜನರನ್ನು ಕೊಂದಿದ್ದ ಹುಲಿಯನ್ನು ರಾಜ್ಯದ ಗಡ್ಚಿರೋಲಿ ಜಿಲ್ಲೆಯಲ್ಲಿ ಅರಣ್ಯ ಇಲಾಖೆ ಗುರುವಾರ ಸೆರೆ ಹಿಡಿದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
‘ಸಿಟಿ-1’ ಹೆಸರಿನ ಹುಲಿ ಗಡ್‌ಚಿರೋಲಿಯ ವಾಡ್ಸಾ ಅರಣ್ಯ ವ್ಯಾಪ್ತಿಯಲ್ಲಿ ಸಂಚರಿಸುತ್ತಿತ್ತು ಹಾಗೂ ಮಾನವ ಜೀವಕ್ಕೆ ಅಪಾಯ ತಂದೊಡ್ಡಿತ್ತು ಎಂದು ಅವರು ಹೇಳಿದರು.
ಕಳೆದ ವರ್ಷ ಡಿಸೆಂಬರ್‌ನಿಂದ 13 ಜನರನ್ನು ಹುಲಿ ಕೊಂದಿದೆ – ವಾಡ್ಸಾದಲ್ಲಿ ಆರು, ಭಂಡಾರಾ ಜಿಲ್ಲೆಯಲ್ಲಿ ನಾಲ್ವರು ಮತ್ತು ಚಂದ್ರಾಪುರ ಜಿಲ್ಲೆಯ ಬ್ರಹ್ಮಪುರಿ ಅರಣ್ಯ ವ್ಯಾಪ್ತಿಯಲ್ಲಿ ಮೂವರು ಎಂದು ನಾಗ್ಪುರದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಅವರು ಹೇಳಿದ್ದಾರೆ.

ಅಕ್ಟೋಬರ್ 4 ರಂದು ನಡೆದ ಸಭೆಯಲ್ಲಿ ಈ “ಸಂಘರ್ಷದ ಹುಲಿ” ಯನ್ನು ಸೆರೆಹಿಡಿಯುವಂತೆ ನಿರ್ದೇಶಿಸಲಾಯಿತು.
ಅದರಂತೆ, ತಡೋಬಾ ಹುಲಿ ರಕ್ಷಣಾ ತಂಡ, ಚಂದ್ರಾಪುರ, ನವೆಗಾಂವ್-ನಾಗ್ಜಿರಾ ಮತ್ತು ಇತರ ಘಟಕಗಳ ಕ್ಷಿಪ್ರ ಕಾರ್ಯಾಚರಣೆ ತಂಡಗಳು ಹುಲಿಯನ್ನು ಸೆರೆಹಿಡಿಯಲು ಯುದ್ಧೋಪಾದಿಯಲ್ಲಿ ಕಾರ್ಯನಿರ್ವಹಿಸಿದವು. ಗುರುವಾರ ಬೆಳಿಗ್ಗೆ ಅದನ್ನು ವಡ್ಸಾ ಅರಣ್ಯ ಶ್ರೇಣಿಯಲ್ಲಿ ಸೆರೆಹಿಡಿಯಲಾಯಿತು,” ಎಂದು ಅಧಿಕಾರಿ ಹೇಳಿದರು.
ಸೆರೆಹಿಡಿದ ಹಲಿಯನ್ನು ಪುನರ್ವಸತಿಗಾಗಿ ಇಲ್ಲಿಂದ ಸುಮಾರು 183 ಕಿಲೋಮೀಟರ್ ದೂರದಲ್ಲಿರುವ ನಾಗಪುರದ ಗೊರೆವಾಡ ರಕ್ಷಣಾ ಕೇಂದ್ರಕ್ಕೆ ಕಳುಹಿಸಲಾಗಿದೆ.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ : 1ನೇ ಹಂತದಲ್ಲಿ 62.37%ರಷ್ಟು ಮತದಾನ ; 2019ರ ಮತದಾನದ ಪ್ರಮಾಣಕ್ಕಿಂತ ಕಡಿಮೆ

3 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement