ಮತ್ತೊಂದು ಶಂಕಿತ ನರಬಲಿ ಪ್ರಕರಣ ಬೆಳಕಿಗೆ: ದಂಪತಿ ನವರಾತ್ರಿಯಂದು 14 ವರ್ಷದ ಮಗಳನ್ನೇ ‘ಬಲಿʼ ನೀಡಿದ ಶಂಕೆ…!

ಶಂಕಿತ ‘ನರಬಲಿ’ ಪ್ರಕರಣದಲ್ಲಿ ಗುಜರಾತಿನ , ಗಿರ್ ಸೋಮನಾಥ್ ಜಿಲ್ಲೆಯ ಧಾರಾ ಗಿರ್ ಗ್ರಾಮದ ಕುಟುಂಬವೊಂದರ ಮೇಲೆ ತಮ್ಮ 14 ವರ್ಷದ ಮಗಳನ್ನು ಬಲಿ ನೀಡಿದ ಆರೋಪ ಕೇಳಿಬಂದಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ನವರಾತ್ರಿಯ ಆಥಂ (ಅಕ್ಟೋಬರ್ 3) ರಂದು ಆರ್ಥಿಕ ಲಾಭಕ್ಕಾಗಿ ಕುಟುಂಬವು ತಮ್ಮ ಮಗಳನ್ನು ‘ಬಲಿ’ ಕೊಟ್ಟಿದೆ ಎಂದು ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ ನಂತರ ಪೊಲೀಸರು ಮತ್ತು ವಿಧಿ ವಿಜ್ಞಾನ ಪ್ರಯೋಗಾಲಯ ತಂಡವು ಪ್ರಕರಣದ ಸಾಕ್ಷ್ಯವನ್ನು ಸಂಗ್ರಹಿಸುತ್ತಿದೆ ಮತ್ತು ಆಕೆಯ ಸಾವು ಗ್ರಾಮ ಪಂಚಾಯತದಲ್ಲಿ ದಾಖಲಾಗಿಲ್ಲ. ಅಪ್ರಾಪ್ತ ಬಾಲಕಿಯ ಶವವನ್ನು ಕುಟುಂಬದ ಜಮೀನಿನಲ್ಲಿ ಮಧ್ಯರಾತ್ರಿ ಸುಟ್ಟು ಹಾಕಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಅಪ್ರಾಪ್ತ ಬಾಲಕಿಯ ನಿಗೂಢ ಸಾವಿನ ಪ್ರಕರಣದಲ್ಲಿ ಪೋಷಕರೇ ಶಂಕಿತರು ಎಂದು ಗಿರ್ ಸೋಮನಾಥ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮನೋಹರ ಸಿನ್ಹ ಜಡೇಜಾ ಸ್ಥಳೀಯ ಮಾಧ್ಯಮಗಳಿಗೆ ತಿಳಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.

ಪೊಲೀಸರು ಬುಧವಾರ ಭವೇಶ್ ಅಕಬರಿಯ ಜಮೀನಿನಿಂದ ಆಕೆಯ ಚಿತಾಭಸ್ಮವನ್ನು ಸಂಗ್ರಹಿಸಿದರು. “ವಿಚಾರಣೆಯ ಸಮಯದಲ್ಲಿ, ತಂದೆ ಭವೇಶ್ ನಿರಂತರವಾಗಿ ತನ್ನ ಹೇಳಿಕೆಗಳನ್ನು ಬದಲಾಯಿಸುತ್ತಿದ್ದಾನೆ. ಎಫ್‌ಎಸ್‌ಎಲ್ ವರದಿಯು ಬಂದ ನಂತರ ಅದು ಮುಂದಿನ ತನಿಖೆಯಲ್ಲಿ ಪೊಲೀಸರಿಗೆ ಮಾರ್ಗದರ್ಶನ ನೀಡಬಹುದು ಎಂದು ಪೊಲೀಸ್ ಮೂಲಗಳು ತಿಳಿಸಿದೆ.
ಪೊಲೀಸ್ ಅಧಿಕಾರಿಯ ಪ್ರಕಾರ, ಬಾಲಕಿ ಆರು ತಿಂಗಳ ಹಿಂದೆ ಸೂರತ್‌ನಲ್ಲಿ ಓದುತ್ತಿದ್ದಳು, ಅಲ್ಲಿ ಭವೇಶ್ ತನ್ನ ವ್ಯಾಪಾರ ಮಾಡುತ್ತಿದ್ದ. ಅಜ್ಞಾತ ಕಾರಣಕ್ಕಾಗಿ, ಪೋಷಕರು ಶಾಲೆಯಿಂದ ರಜೆ ಪ್ರಮಾಣಪತ್ರವನ್ನು ತೆಗೆದುಕೊಂಡು ಮಗಳನ್ನು ಸ್ಥಳೀಯ ಗ್ರಾಮಕ್ಕೆ ಕರೆತಂದಿದ್ದರು.

ಪ್ರಮುಖ ಸುದ್ದಿ :-   ಕಾಂಗ್ರೆಸ್ಸಿಗೆ ರಾಜೀನಾಮೆ ನೀಡಿದ 35 ವರ್ಷಗಳಿಂದ ಪಕ್ಷದಲ್ಲಿದ್ದ ಪ್ರಿಯಾಂಕಾ ಗಾಂಧಿ ಆಪ್ತ ತಜೀಂದರ್ ಸಿಂಗ್ ಬಿಟ್ಟು...!

ಕುಟುಂಬಕ್ಕೆ ಐಶ್ವರ್ಯ ಬರಲಿ ಎಂಬ ಆಸೆಯಿಂದ ಅಕ್ಟೋಬರ್ 3ರಂದು ರಾತ್ರಿ ಮಗುವನ್ನು ಬಲಿ ಕೊಡಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಮಗು ಮರುಜನ್ಮ ಪಡೆಯಲಿದೆ ಎಂದು ಕುಟುಂಬದವರು ಸುಳ್ಳು ಹೇಳಿಕೆ ನೀಡಿದ್ದರು, ಆದ್ದರಿಂದ ಅವರು ನಾಲ್ಕು ದಿನಗಳ ಕಾಲ ಶವವನ್ನು ಹಾಗೆಯೇ ಇಟ್ಟುಕೊಂಡಿದ್ದರು ಎಂದು ಅವರು ಹೇಳಿದ್ದಾರೆ. ನಂತರ ಕೆಲವೇ ಕುಟುಂಬ ಸದಸ್ಯರು ಮತ್ತು ಸಂಬಂಧಿಕರ ಸಮ್ಮುಖದಲ್ಲಿ ಬಾಲಕಿಯನ್ನು ಜಮೀನಿನಲ್ಲಿ ಅಂತ್ಯಸಂಸ್ಕಾರ ಮಾಡಲಾಗಿದ್ದು, ಕೆಲ ಗ್ರಾಮಸ್ಥರು ನರಬಲಿ ಅನುಮಾನ ವ್ಯಕ್ತಪಡಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

3.5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement