ಮನೆ ಜಪ್ತಿಯಾಗುವ ಹೊತ್ತಿಗೆ ಲಕ್‌ ಹೊಡೀತು…! ಬಂಪರ್ ಬಹುಮಾನದಿಂದ ಜೀವನದ ದಿಕ್ಕೇ ಬದಲಾಯ್ತು…!

ಕೊಲ್ಲಂ: ಸಾಲ ಮರುಪಾವತಿಸದ ಕಾರಣ ಕೇರಳದ ಮೀನು ವ್ಯಾಪಾರಿಯೊಬ್ಬರ ಮನೆ ಜಪ್ತಿ ಮಾಡುವುದಾಗಿ ಬ್ಯಾಂಕ್‌ ನೋಟಿಸ್‌ ನೀಡಿದ ನಂತರ ಕಂಗಾಲಾಗಿದ್ದ ವ್ಯಾಪಾರಿಗೆ ಕೆಲವೇ ಗಂಟೆಗಳಲ್ಲಿ 70 ಲಕ್ಷ ರೂ.ಗಳ ಮೊತ್ತದ ಲಾಟರಿ ಹೊಡೆದಿದೆ…!
ರಾಜ್ಯ ಸರ್ಕಾರದ ₹70 ಲಕ್ಷಗಳ ಅಕ್ಷಯ ಲಾಟರಿಯನ್ನು ಗೆದ್ದಿರುವ ಮೀನು ವ್ಯಾಪಾರಿ ಕುಟುಂಬ ಸದ್ಯ ನೆಮ್ಮದಿಯ ನಿಟ್ಟುಸಿರು ಬಿಟ್ಟಿದೆ.
ಪೂಕುಂಜು ಅವರು ಅಕ್ಟೋಬರ್ 12 ರಂದು ಎಂದಿನಂತೆ ತಮ್ಮ ದಿನಚರಿ ಆರಂಭಿಸಿದ್ದರು. ಮೀನುಗಳನ್ನು ತಂದು ಮಾರಲು ಚೀಲ ಹಿಡಿದು ಹೊರಟ ಅವರು ದಾರಿ ಮಧ್ಯೆ ‘ಅಕ್ಷಯ ಲಾಟರಿ’ ಟಿಕೆಟ್ ಖರೀದಿಸಿದ್ದರು. ಅದರ ಮೊದಲ ಬಹುಮಾನ ₹70 ಲಕ್ಷಗಳಾಗಿದ್ದವು.

ಆದರೆ ಲಾಟರಿ ಟಿಕೆಟ್‌ ಹಿಡಿದು ಮನೆಗೆ ಬಂದ ಪೂಕುಂಜು ಅವರಿಗೆ ಆಘಾತದ ಸುದ್ದಿ ಕಾದಿತ್ತು. ಅವರು ಮನೆಗಾಗಿ ಮಾಡಿದ್ದ 9 ಲಕ್ಷ ರೂ.ಗಳ ಸಾಲ ಮರುಪಾವತಿಸಲು ಸಾಧ್ಯವಾಗದೇ ಇದ್ದಿದ್ದಕ್ಕೆ ಅವರ ಮನೆ ಜಪ್ತಿ ಮಾಡುವುದಾಗಿ ಬ್ಯಾಂಕ್‌ ನೋಟಿಸ್‌ ಕಳುಹಿಸಿತ್ತು.
ಬ್ಯಾಂಕ್‌ನಿಂದ ನೋಟಿಸ್ ಬಂದಿದ ನಂತರ ನಾವು ಮನೆಯವರೆಲ್ಲ ಕಂಗಾಲಾಗಿದ್ದೆವು. ಏನು ಮಾಡಬೇಕೆಂದು ನಮಗೆ ತೋಚಿರಲಿಲ್ಲ. ನಮ್ಮ ಆಸ್ತಿಯನ್ನು ಮಾರಾಟ ಮಾಡಬೇಕಲ್ಲ ಎಂಬ ಆತಂಕದಲ್ಲಿದ್ದೆವು. ನಮಗೆ ಇಬ್ಬರು ಮಕ್ಕಳಿದ್ದಾರೆ. ಒಬ್ಬ ಹುಡುಗ ಮತ್ತು ಹುಡುಗಿ. ಇಬ್ಬರೂ ಓದುತ್ತಿದ್ದಾರೆ’ ಎಂದು ಪೂಕುಂಜು ಅವರ ಪತ್ನಿ ಸುದ್ದಿ ವಾಹಿನಿಯೊಂದಕ್ಕೆ ತಿಳಿಸಿದ್ದಾರೆ.
ಆದರೆ ಕೆಲವೇ ಗಂಟೆಗಳಲ್ಲಿ ಅವರ ಜೀವನದ ದಿಕ್ಕೇ ಬದಲಾಯಿತು. ನೋಟಿಸ್ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ ಲಾಟರಿಯ ಗೆದ್ದ ಸಂಖ್ಯೆ ಘೋಷಿಸಲಾಯಿತು. ಅದರಲ್ಲಿ ನನಗೆ ಪ್ರಥಮ ಬಹುಮಾನ ಲಭಿಸಿತ್ತು’ ಎಂದು ಪೂಕುಂಜು ಸಂತಸ ಹೇಳಿಕೊಂಡಿದ್ದಾರೆ.
ಲಾಟರಿ ಗೆದ್ದಿರುವ ಪೂಕುಂಜು ಲಾಟರಿ ಹಣದಿಂದ ಮೊದಲು ಎಲ್ಲ ಸಾಲಗಳನ್ನು ತೀರಿಸುವುದಾಗಿಯೂ, ನಂತರ ಮಕ್ಕಳ ಶಿಕ್ಷಣಕ್ಕೆ ಹಣ ಮೀಸಲಿಡುವುದಾಗಿಯೂ ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೊ...| ಶಿವಸೇನೆ ನಾಯಕಿ ಕರೆದೊಯ್ಯಲು ಬಂದಿದ್ದ ಹೆಲಿಕಾಪ್ಟರ್ ಅಪಘಾತ

 

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement