ಹೊಸೂರು: ಕೆಮಿಕಲ್‌ ಬಾಯ್ಲರ್‌ ಸ್ಪೋಟ, ಹಲವು ಮಕ್ಕಳು ಆಸ್ಪತ್ರೆಗೆ ದಾಖಲು-ವರದಿ

ಹೊಸೂರು: ಕರ್ನಾಟಕ-ತಮಿಳುನಾಡಿನ ಗಡಿಭಾಗದ ಹೊಸೂರಿನಲ್ಲಿ ಕೆಮಿಕಲ್‌ ಬಾಯ್ಲರ್‌ ಸ್ಫೋಟಗೊಂಡು ಫ್ಯಾಕ್ಟರಿಯ ಮುಂಭಾಗದಲ್ಲಿರುವ ಕಾರ್ಪೊರೇಷನ್‌ ಶಾಲೆಯ ನೂರಾರು ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಮಕ್ಕಳು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದು ಚಿಕಿತ್ಸೆ ನೀಡಲಾಗುತ್ತಿದೆ.
ಹೊಸೂರಿನಲ್ಲಿರುವ ಖಾಸಗಿ ಕಂಪನಿಯ ಕೆಮಿಕಲ್‌ ಬಾಯ್ಲರ್‌ ಸ್ಫೋಟಗೊಂಡ ಬಳಿಕ ರಾಸಾಯನಿಕ ಸೋರಿಕೆಯಾಗಿದೆ. ಸುತ್ತಲಿನ ಪ್ರದೇಶದಲ್ಲಿ, ಗಾಳಿಯಲ್ಲಿ ಈ ರಾಸಾಯನಿಕ ವ್ಯಾಪಿಸಿ ಕಾರ್ಖಾನೆಯ ಮುಂಭಾಗದಲ್ಲಿರುವ ಶಾಲಾ ಮಕ್ಕಳ ಮೇಲೆ ಪರಿಣಾಮ ಕಾಣಿಸಿಕೊಂಡಿದೆ. ಸುಮಾರು ನೂರೈವತ್ತು ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ಪ್ರಾಥಮಿಕ ವರದಿಗಳ ಪ್ರಕಾರ ಮಕ್ಕಳಿಗೆ ಸ್ವಲ್ಪಮಟ್ಟಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ. ಹೀಗಾಗಿ ಅವರನ್ನು ತಕ್ಷಣವೇ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ.

 

3 / 5. 1

ಶೇರ್ ಮಾಡಿ :
ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ ; ಮತ್ತೊಂದು ಕ್ಷೇತ್ರದಿಂದಲೂ ರಾಹುಲ್‌ ಗಾಂಧಿ ಸ್ಪರ್ಧೆ

ನಿಮ್ಮ ಕಾಮೆಂಟ್ ಬರೆಯಿರಿ

advertisement