ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಯುವ ನಟಿ ವೈಶಾಲಿ ಟಕ್ಕರ್

ನವದೆಹಲಿ: ‘ಸಸುರಾಲ್ ಸಿಮಾರ್ ಕಾ’ ಮತ್ತು ‘ಯೇ ರಿಶ್ತಾ ಕ್ಯಾ ಕೆಹ್ಲಾತಾ ಹೈ’ ಧಾರವಾಹಿ ಪಾತ್ರಗಳಿಗೆ ಹೆಸರುವಾಸಿಯಾದ್ದ ಕಿರುತೆರೆ ನಟಿ ವೈಶಾಲಿ ಟಕ್ಕರ್ ಅವರು ಮಧ್ಯಪ್ರದೇಶದ ಇಂದೋರ್‌ನಲ್ಲಿರುವ ತಮ್ಮ ಮನೆಯಲ್ಲಿ ಭಾನುವಾರ ಬೆಳಗ್ಗೆ ಶವವಾಗಿ ಪತ್ತೆಯಾಗಿದ್ದಾರೆ. ಆಕೆಗೆ 26 ವರ್ಷ ವಯಸ್ಸಾಗಿತ್ತು.
ಇಂದೋರ್‌ನ ಸಹಾಯಕ ಪೊಲೀಸ್ ಕಮಿಷನರ್ ಎಂ ರೆಹಮಾನ್ ಅವರು ಆತ್ಮಹತ್ಯಾ ಟಿಪ್ಪಣಿ(ಡೆತ್‌ನೋಟ್‌)ಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ. ನಟಿ ಒತ್ತಡಕ್ಕೆ ಒಳಗಾಗಿದ್ದರು ಮತ್ತು ಮಾಜಿ ಗೆಳೆಯನಿಂದ ಕಿರುಕುಳಕ್ಕೊಳಗಾಗಿದ್ದರು ಎಂದು ಡೆತ್‌ನೋಟ್‌ ಸೂಚಿಸುತ್ತದೆ ಎಂದು ವರದಿಗಳು ತಿಳಿಸಿವೆ.
ಯುವ ನಟಿ ತನ್ನ ತಂದೆ ಮತ್ತು ಸಹೋದರನೊಂದಿಗೆ ಇಂದೋರ್‌ನಲ್ಲಿ ಉಳಿದುಕೊಂಡಿದ್ದರು. ಆದಾಗ್ಯೂ, ಅವರು ಅಂತಹ ಕಠಿಣ ನಿರ್ಧಾರ ತೆಗೆದುಕೊಳ್ಳುತ್ತಾಳೆ ಎಂಬ ಬಗ್ಗೆ ನಮಗೆ ಯಾವುದೇ ಸುಳಿವು ಇರಲಿಲ್ಲ ಎಂದು ತಂದೆ ಹೇಳಿದ್ದಾರೆ.

ವೈಶಾಲಿ ಟಕ್ಕರ್ ಅವರು 2015 ರಲ್ಲಿ ‘ಯೇ ರಿಶ್ತಾ ಕ್ಯಾ ಕೆಹ್ಲಾತಾ ಹೈ’ ಕಾರ್ಯಕ್ರಮದ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದರು. ಅವರು ಇತ್ತೀಚೆಗೆ ‘ರಕ್ಷಾಬಂಧನ್’ ನಲ್ಲಿ ಕಾಣಿಸಿಕೊಂಡರು, ಅಲ್ಲಿ ಅವರು ಬಿಗ್ ಬಾಸ್ ಖ್ಯಾತಿಯ ನಿಶಾಂತ್ ಮಲ್ಕಾನಿ ಅವರೊಂದಿಗೆ ನಟಿಸಿದರು.
ಮೂಲತಃ ಉಜ್ಜಯಿನಿಯ ಮಹಿದ್‌ಪುರದವರಾದ ಅವರು ಚಲನಚಿತ್ರೋದ್ಯಮದಲ್ಲಿ ವೃತ್ತಿಜೀವನವನ್ನು ಮುಂದುವರಿಸಲು ಮುಂಬೈಗೆ ತೆರಳಿದರು. ನಂತರ ಅವರು ಜೈಪುರಕ್ಕೆ ತೆರಳಿದರು ಮತ್ತು ಅಂತಿಮವಾಗಿ ಇಂದೋರ್‌ನ ತೇಜಾಜಿ ನಗರ ಪೊಲೀಸ್ ಠಾಣೆಯ ಸಾಯಿ ಬಾಗ್ ಕಾಲೋನಿಗೆ ತೆರಳಿದರು, ಅಲ್ಲಿ ಅವರು ಕಳೆದ ವರ್ಷ ತನ್ನ ಕಿರಿಯ ಸಹೋದರ ಮತ್ತು ತಂದೆಯೊಂದಿಗೆ ನೆಲೆಸಿದ್ದರು.

ಪ್ರಮುಖ ಸುದ್ದಿ :-   ಮೋದಿ, ರಾಹುಲ್ ಗಾಂಧಿಯಿಂದ ನೀತಿ ಸಂಹಿತೆ ಉಲ್ಲಂಘನೆ ಆರೋಪ: ಉತ್ತರ ನೀಡಲು ಚುನಾವಣಾ ಆಯೋಗ ಸೂಚನೆ

ಇಂದು, ಭಾನುವಾರ ಬೆಳಗ್ಗೆ ವೈಶಾಲಿ ಟಕ್ಕರ್ ತನ್ನ ಕೊಠಡಿಯಿಂದ ಹೊರಗೆ ಬಾರದೆ ಇದ್ದಾಗ ಆಕೆಯ ತಂದೆ ಒಳಗೆ ಹೋಗಿ ನೋಡಿದಾಗ ಆಕೆ ನೇಣು ಬಿಗಿದುಕೊಂಡಿರುವುದು ಕಂಡು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಮಹಾರಾಜ ಯಶವಂತರಾವ್ ಆಸ್ಪತ್ರೆಗೆ ರವಾನಿಸಿದ್ದಾರೆ.
ಆತ್ಮಹತ್ಯೆ ಪತ್ರವನ್ನು ವಶಪಡಿಸಿಕೊಂಡ ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಆಕೆಯ ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದ್ದು, ಕುಟುಂಬ ಸದಸ್ಯರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗುತ್ತಿದೆ.

4 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement