ಬೈಲಹೊಂಗಲ: ಹೊಸೂರಲ್ಲಿ ಮೊಸಳೆ ಪ್ರತ್ಯಕ್ಷ, ಆಹಾರವಾಯ್ತು ನಾಯಿ

ಬೈಲಹೊಂಗಲ : ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಸಮೀಪದ ಹೊಸೂರ ಗ್ರಾಮದ ರೈತರ ಜಮೀನಿನಲ್ಲಿ ಮೊಸಳೆ ಪ್ರತ್ಯಕ್ಷವಾಗಿದೆ. ಎರಡು-ಮೂರು ದಿನಗಳ ಹಿಂದೆ ಭಾರೀ ಮಳೆಯಿಂದಾಗಿ ಗ್ರಾಮದ ಸೇತುವೆ ಮೇಲೆ ಮಲಪ್ರಭಾ ನದಿ ನೀರು ಹರಿದಿತ್ತು. ನದಿ ನೀರು ಉಕ್ಕಿದ ಪರಿಣಾಮ ನದಿಯಲ್ಲಿದ್ದ ಮೊಸಳೆ ರೈತರ ಜಮೀನಿಗೆ ಬಂದಿದೆ.
ಬೆಳಗಿನ ಜಾವ ರೈತನ ಹೊಲದಲ್ಲಿ ಕಟ್ಟಿದ್ದ ನಾಯಿಯೊಂದು ಜೋರಾಗಿ ಕೂಗ ತೊಡಗಿದಾಗ ರೈತ ಯಾಕೆಂದು ಹೋಗಿ ನೊಡುವಷ್ಟರಲ್ಲಿ ನಾಯಿಯುನ್ನು ಮೊಸಳೆ ತಿಂದು ಮುಗಿಸಿತ್ತು.

ಇದನ್ನು ನೋಡಿದ ರೈತ ಗ್ರಾಮಸ್ಥರಿಗೆ ಸುದ್ದಿ ತಿಳಿಸಿದರು. ನಂತರ ಕಬ್ಬಿನ ಗದ್ದೆಗೆ ಬಂದ ಗ್ರಾಮದ ಯುವಕರ ತಂಡ ಹುಡುಕಿದಾಗ ಮೊಸಳೆ ಕಣ್ಣಿಗೆ ಬಿದ್ದಿದೆ. ತಕ್ಷಣ ಪೊಲೀಸ್ ಹಾಗೂ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಯಿತು.
ಪೋಲಿಸ್ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದರು. ಆದರೆ ಅರಣ್ಯ ಇಲಾಖೆಯ ಸಿಬ್ಬಂದಿ ಬರಲಿಲ್ಲ. ಆದರೆ ಮೊಸಳೆ ಅಲ್ಲಿಂದ ಪರಾರಿಯಾಗಲು ಮೋಡುತ್ತಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಯುವಕರ ಹಗ್ಗ ಬಳಸಿ ಮೊಸಳೆಯನ್ನು ಕಟ್ಟಿ ಹಾಕಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement