ಶಾಲಾ ಬಸ್‌ನಲ್ಲಿ 80 ಕೆಜಿ ತೂಕದ ದೈತ್ಯ ಹೆಬ್ಬಾವು ಪತ್ತೆ, ಸೀಟಿನ ಕೆಳಗೆ ಅಡಗಿಕೊಂಡಿದ್ದ ಹೆಬ್ಬಾವು | ವೀಕ್ಷಿಸಿ

ರಾಯ್‌ಬರೇಲಿ: ಉತ್ತರ ಪ್ರದೇಶದ ರಾಯ್‌ಬರೇಲಿಯಲ್ಲಿ ಭಾನುವಾರ ಶಾಲಾ ಬಸ್‌ನೊಳಗೆ ಬೃಹತ್ ಹೆಬ್ಬಾವೊಂದು ಪತ್ತೆಯಾಗಿದೆ. ವರದಿಗಳ ಪ್ರಕಾರ, ಹೆಬ್ಬಾವು ಸ್ಟ್ಯಾಂಡ್‌ನಲ್ಲಿ ನಿಂತಿದ್ದ ರಯಾನ್ ಪಬ್ಲಿಕ್ ಸ್ಕೂಲ್‌ನ ಬಸ್‌ನ ಸೀಟಿನ ಕೆಳಗೆ ಅಡಗಿಕೊಂಡಿತ್ತು. ಸರ್ಕಲ್ ಆಫೀಸರ್ (ಸಿಒ) ಸಿಟಿ ವಂದನಾ ಸಿಂಗ್ ಮತ್ತು ಸಿಟಿ ಮ್ಯಾಜಿಸ್ಟ್ರೇಟ್ ಪಲ್ಲವಿ ಮಿಶ್ರಾ ಅವರು ಮಾಹಿತಿ ಪಡೆದು ಸ್ಥಳಕ್ಕೆ ಧಾವಿಸಿದರು. ನಂತರ ಅರಣ್ಯ ಇಲಾಖೆ ತಂಡವನ್ನು ಸ್ಥಳಕ್ಕೆ ಕರೆಸಿ ಹೆಬ್ಬಾವಿನ ರಕ್ಷಣೆ ಮಾಡಲಾಗಿದೆ.
ಅರಣ್ಯ ಇಲಾಖೆ ಅಧಿಕಾರಿಗಳು ಹೆಬ್ಬಾವನ್ನು ರಕ್ಷಿಸಿದ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೀಡಿಯೊದಲ್ಲಿ, ಅಧಿಕಾರಿಯೊಬ್ಬರು ಶಾಲಾ ಬಸ್‌ನಲ್ಲಿ ಅಡಗಿದ್ದ ಹೆಬ್ಬಾವನ್ನು ಎಳೆಯುತ್ತಿರುವುದನ್ನು ಕಾಣಬಹುದು.

ಅರಣ್ಯ ಇಲಾಖೆ ಅಧಿಕಾರಿಗಳ ಪ್ರಕಾರ ಹೆಬ್ಬಾವಿನ ತೂಕ ಸುಮಾರು 80 ಕೆಜಿ ಮತ್ತು ಉದ್ದ 12 ಅಡಿ ಇದೆ. ಸುಮಾರು ಒಂದು ಗಂಟೆಗಳ ಕಾಲ ನಡೆದ ರಕ್ಷಣಾ ಕಾರ್ಯಾಚರಣೆಯ ನಂತರ ಹೆಬ್ಬಾವನ್ನು ಹೇಗೋ ಸುರಕ್ಷಿತವಾಗಿ ಹಿಡಿದು ದಾಲ್ಮೌ ಅರಣ್ಯಕ್ಕೆ ಬಿಡಲಾಯಿತು. ಅದೃಷ್ಟವಶಾತ್ ಭಾನುವಾರವಾದ್ದರಿಂದ ಶಾಲೆ ಮುಚ್ಚಿತ್ತು. ಹೀಗಾಗಿ ಯಾವುದೇ ಅಪಾಯ ಸಂಭವಿಸಿಲ್ಲ.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ ; ಮತ್ತೊಂದು ಕ್ಷೇತ್ರದಿಂದಲೂ ರಾಹುಲ್‌ ಗಾಂಧಿ ಸ್ಪರ್ಧೆ

ಚಾಲಕನ ಹಳ್ಳಿಯಲ್ಲಿ ಶಾಲಾ ಬಸ್ ನಿಂತಿತ್ತು ಎಂದು ಮೂಲಗಳು ತಿಳಿಸಿವೆ. ಕೆಲವು ಮೇಕೆಗಳು ಬಸ್ಸಿನ ಪಕ್ಕದಲ್ಲಿ ಓಡುತ್ತಿದ್ದವು ಮತ್ತು ಹಾವು ಬಹುಶಃ ಅವುಗಳಿಂದ ಆಕರ್ಷಿತವಾಗಿದೆ. ಆದರೆ, ಸ್ಥಳೀಯರು ಅದನ್ನು ಕಂಡರು. ನಂತರ ಹಾವು ಅಡಗಿಕೊಳ್ಳಲು ಬಸ್ಸಿನೊಳಗೆ ನುಗ್ಗಿತು ಎನ್ನಲಾಗಿದೆ.

4.5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement