ಭಾರತದ ಅನುಭವಿ ವೇಗಿ ಮೊಹಮ್ಮದ್ ಶಮಿ ಸೋಮವಾರ ಆಸ್ಟ್ರೇಲಿಯಾ ವಿರುದ್ಧದ T20 ವಿಶ್ವಕಪ್ 2022ರ ಅಭ್ಯಾಸ ಪಂದ್ಯದಲ್ಲಿ ತಮ್ಮ ಮೊದಲ ಮತ್ತು ಏಕೈಕ ಓವರ್ನಲ್ಲಿ ಬೌಲಿಂಗ್ ಪ್ರದರ್ಶನ ನೀಡಿದರು. ಪಂದ್ಯದ 20ನೇ ಓವರ್ನಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಚೆಂಡನ್ನು ಶಮಿಗೆ ಹಸ್ತಾಂತರಿಸಿದರು, ಆಸೀಸ್ಗೆ ಸ್ಪರ್ಧೆಯಲ್ಲಿ ಗೆಲ್ಲಲು 6 ಎಸೆತಗಳಲ್ಲಿ 11 ರನ್ ಅಗತ್ಯವಿತ್ತು. ಶಮಿ ಅವರು ತಮ್ಮ ವೃತ್ತಿಜೀವನದ ಅತ್ಯಂತ ಸ್ಮರಣೀಯ ಪ್ರದರ್ಶನಗಳಲ್ಲಿ ಒಂದನ್ನು ಕಡಿಮೆ ಸಮಯದಲ್ಲಿ ಪ್ರದರ್ಶಿಸಿದರು, ಅವರು ಓವರ್ನಲ್ಲಿ 3 ವಿಕೆಟ್ಗಳನ್ನು ಪಡೆದರು ಹಾಗೂ ಒಂದು ರನ್ ಔಟ್ ಆಯಿತು. ಅವರು ಭಾರತವನ್ನು 6 ರನ್ಗಳಿಂದ ಗೆಲ್ಲಲು ಸಹಾಯ ಮಾಡಿದರು.
ಜಸ್ಪ್ರೀತ್ ಬುಮ್ರಾ ಬದಲಿಗೆ ಅವರು ಭಾರತ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಕೆಲವು ದಿನಗಳ ಹಿಂದೆ ಆಸ್ಟ್ರೇಲಿಯಾಕ್ಕೆ ಆಗಮಿಸಿದ್ದ ಶಮಿಗೆ ಅಂತಿಮ ಓವರ್ನಲ್ಲಿ 10 ರನ್ಗಳನ್ನು ಆಸ್ಟರೇಲಿಯಾಕ್ಕೆ ಗಳಿಸಲು ಕೊಡದೇ ಇರುವ ಸವಾಲು ದೊಡ್ಡದಾಗಿತ್ತು.
ವೆಸ್ಟರ್ನ್ ಆಸ್ಟ್ರೇಲಿಯಾ ವಿರುದ್ಧದ ಎರಡು ಅಭ್ಯಾಸ ಪಂದ್ಯಗಳಲ್ಲಿ ಶಮಿ ಭಾರತಕ್ಕಾಗಿ ಆಡಿರಲಿಲ್ಲ ಮತ್ತು ಡೌನ್ ಅಂಡರ್ಗೆ ಬಂದ ನಂತರ ಅವರ ಮೊದಲ ಓವರ್ನಲ್ಲಿ 10 ರನ್ಗಳನ್ನು ರಕ್ಷಿಸುವ ಕೆಲಸವನ್ನು ತಕ್ಷಣವೇ ನೀಡಲಾಯಿತು.
ಓವರ್ ಹೇಗೆ ಎಂಬುದು ಇಲ್ಲಿದೆ:
ಬಾಲ್ 1: ಪ್ಯಾಟ್ ಕಮ್ಮಿನ್ಸ್ 2 ರನ್
ಬಾಲ್ 2: ಕಮ್ಮಿನ್ಸ್ 2 ರನ್.
ಬಾಲ್ 3: ವಿಕೆಟ್! ಒನ್ ಹ್ಯಾಂಡ್ ಸ್ಟನ್ನರ್… ವಿರಾಟ್ ಕೊಹ್ಲಿಯಿಂದ ಕಮ್ಮಿನ್ಸ್ ಕ್ಯಾಚ್
ಬಾಲ್ 4: ವಿಕೆಟ್! ಆಷ್ಟನ್ ಅಗರ್ ರನ್ ಔಟ್.
ಬಾಲ್ 5: ವಿಕೆಟ್! ಜೋಶ್ ಔಟ್
ಬಾಲ್ 6: ವಿಕೆಟ್! ಪರಿಪೂರ್ಣ ಯಾರ್ಕರ್ ಮತ್ತು ಕೇನ್ ರಿಚರ್ಡ್ಸನ್ ಔಟ್
ಆಸ್ಟ್ರೇಲಿಯಾ ಗೆಲುವಿಗೆ 11 ರನ್ ಅಗತ್ಯವಿದ್ದರೂ ಕೇವಲ 4 ರನ್ ಗಳಿಸಲಷ್ಟೇ ಶಕ್ತವಾಯಿತು. ಶಮಿ 20ನೇ ಓವರ್ನವರೆಗೆ ಪಂದ್ಯದಿಂದ ದೂರವಿದ್ದರು ,ಆದರೆ ಬಂದ ನಂತರ ಪಂದ್ಯವನ್ನು ಗೆಲ್ಲುವ ಪ್ರದರ್ಶನವನ್ನು ನೀಡಿದರು.
ನಿಮ್ಮ ಕಾಮೆಂಟ್ ಬರೆಯಿರಿ