ಸರ್ಕಾರಿ ನೌಕರನಿಗೆ ಕಪಾಳಮೋಕ್ಷ ಮಾಡಿದ ಹಾಸನ ಉಪವಿಭಾಗಾಧಿಕಾರಿ

ಹಾಸನ: ಹಾಸನಾಂಬೆ ದೇಗುಲದಲ್ಲಿ ಕುಟುಂಬಸ್ಥರೊಂದಿಗೆ ದೇವಸ್ಥಾನಕ್ಕೆ ಬಂದಿದ್ದ ಜಿಲ್ಲಾ ಪಂಚಾಯತ ನೌಕರನೊಬ್ಬನಿಗೆ ಸರತಿ ಸಾಲಿನಲ್ಲಿ ಬರದೆ ಬೇಕಾಬಿಟ್ಟಿಯಾಗಿ ದೇವಾಲಯಕ್ಕೆ ನುಗ್ಗಿದಕ್ಕೆ ಹಾಸನದ ಉಪವಿಭಾಗಧಿಕಾರಿ ಜಗದೀಶ ಕಪಾಳಮೋಕ್ಷ ಮಾಡಿದ್ದಾರೆ ಎಂದು ವರದಿಯಾಗಿದೆ.
ಜಿಲ್ಲಾ ಪಂಚಾಯತ ನೌಕರ ಶಿವೇಗೌಡ ಅವರು ಕುಟುಂಬ ಸಮೇತ ಹಾಸನಾಂಬೆ ದೇವಾಲಯಕ್ಕೆ ಬಂದಿದ್ದರು. ಕುಟುಂಬಸ್ಥರು, ಭಕ್ತರು, ಅಧಿಕಾರಿಗಳು ಮುಂದೆಯೇ ಕಪಾಳಮೋಕ್ಷ ಮಾಡಿದ್ದು, ಈ ನಡೆಗೆ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವರ್ಷಕ್ಕೊಮ್ಮೆ ದರ್ಶನ ನೀಡುವ ಇತಿಹಾಸ ಪ್ರಸಿದ್ಧ ಹಾಸನಾಂಬೆ ದೇಗುಲದ ಬಾಗಿಲು ತೆರೆಯಲಾಗಿದ್ದು ಲಕ್ಷಾಂತರ ಜನ ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಂತು ದೇವಿ ದರ್ಶನ ಪಡೆಯುತ್ತಿದ್ದಾರೆ.

ದೇವಿ ದರ್ಶನಕ್ಕಾಗಿ ಜಿಲ್ಲಾ ಪಂಚಾಯತ ನೌಕರ ಶಿವೇಗೌಡ ಅವರು ತಮ್ಮ ಪರಿವಾರ ಸಮೇತ ಬಂದಿದ್ದಾರೆ. ಕರ್ತವ್ಯದಲ್ಲಿದ್ದ ಅಧಿಕಾರಿಗಳಿಗೆ ಮನವಿ‌ ಮಾಡಿ ವಿಐಪಿ ಗೇಟ್ ನಲ್ಲಿ ಪ್ರವೇಶ ಮಾಡಿದ್ದಾರೆ. ಇದನ್ನು ಕಂಡ ಸಹಾಯಕ ಆಯುಕ್ತ ಜಗದೀಶ ಅವರು ಶಿವೇಗೌಡರನ್ನು ಹಾಸನಾಂಬೆ ದೇವಾಲಯದ ಮುಖ್ಯದ್ವಾರದ ಬಳಿಯೇ ನಿಲ್ಲಿಸಿ ಯಾಕೋ ಓಡಿ ಬರ್ತಿದ್ದಿಯಾ? ನಿನಗೆ ಈ ಗೇಟ್ ನಲ್ಲಿ ಯಾರು ಒಳಬಿಟ್ಟಿದ್ದು ಎಂದು ಏಕವಚನದಲ್ಲಿ ನಿಂದಿಸಿದ್ದಾರೆ. ಸರದಿಯಲ್ಲಿ ಬರದೇ ಇದ್ದುದಕ್ಕೆ ಆಕ್ರೋಶಗೊಂಡಿದ್ದಾರೆ. ಶಿವೇಗೌಡರು ಜಿ.ಪಂ ನೌಕರ ಎಂದು ಗುರುತಿನ ಚೀಟಿ ತೋರಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ಜಗದೀಶ ಅವರು ಕಪಾಳಮೋಕ್ಷ ಮಾಡಿದ್ದಾರೆ ಎಂದು ವರದಿಯಾಗಿದೆ. ಸಣ್ಣ ಕಾರಣಕ್ಕೆ ಈ ರೀತಿ ಸಾರ್ವಜನಿಕರೆದುರು ಹಿಡಿಯ ಅಧಿಕಾರಿ ಕಪಾಳ ಮೋಕ್ಷ ಮಾಡಿದ್ದು ಈಗ ಚರ್ಚೆಗೆ ಗ್ರಾಸವಾಗಿದೆ.

ಪ್ರಮುಖ ಸುದ್ದಿ :-   ಕರ್ನಾಟಕದ ಈ ಜಿಲ್ಲೆಗಳಲ್ಲಿ 3-4 ದಿನ ಬಿಸಿಗಾಳಿ : ಹವಾಮಾನ ಇಲಾಖೆ ಎಚ್ಚರಿಕೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement