ವಜಾ ಮಾಡಿದ್ದಕ್ಕೆ ಮಾಲೀಕನ ವಿರುದ್ಧ ಸೇಡು ತೀರಿಸಿಕೊಳ್ಳಲು ಬಸ್ಸಿನ ಡಿಸ್ಪ್ಲೇ ಬೋರ್ಡ್‌ನಲ್ಲಿ ನಿಂದನೀಯ ಶಬ್ದ ಬಳಸಿದ ಕಂಡಕ್ಟರ್‌ : ದೃಶ್ಯ ಸೆರೆ

ವಜಾಗೊಂಡ ಬಸ್ ಕಂಡಕ್ಟರ್ ಭಾನುವಾರ ತನ್ನ ಉದ್ಯೋಗದಾತರೊಂದಿಗೆ ಮುಯ್ಯಿಗೆ ಮುಯ್ಯಿ ತೀರಿಸಿಕೊಳ್ಳಲು ಬಸ್‌ನ ಎಲ್ಇಡಿ ಡಿಸ್ಪ್ಲೇ ಬೋರ್ಡ್‌ನ ಸ್ಕ್ರೋಲಿಂಗ್‌ನಲ್ಲಿ ಅಶ್ಲೀಲ ಪದ ಬಳಕೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ಈ ಹಿಂದೆ ಸತ್ನಾ-ಇಂಧೋರ್ ಬಸ್‌ನಲ್ಲಿ ಕೆಲಸ ಮಾಡುತ್ತಿದ್ದ ಕಂಡಕ್ಟರ್ ಸಲ್ಮಾನ್‌ ಖಾನ್‌ ಎಂಬಾತನನ್ನು ಮಾಲೀಕ ನಿಂದಿಸಿ ವಜಾ ಮಾಡಿದ ನಂತರ ಈ ಕಂಡಕ್ಟರ್‌ ಬಸ್‌ನ ಸ್ಕ್ರೋಲಿಂಗ್‌ ಬೋರ್ಡ್‌ ಮೇಲೆ ಅವಹೇಳನಕಾರಿ ಪದ ಬಳಸಿ ಸುಖೇಜಾ ಬಸ್ ಮಾಲೀಕ ಸತೀಶ್ ಸುಖೇಜಾ ಅವರು ಮೇಲೆ ಸೇಡು ತೀರಿಸಿಕೊಂಡಿದ್ದಾನೆ..!
ಬಸ್ ಕಂಡಕ್ಟರ್ ಬೋರ್ಡಿನ ಹೆಸರಿನ ಬದಲಿಗೆ “M…ಸುಖೇಜಾ” ಎಂಬ ಪದಗಳನ್ನು ಪ್ರದರ್ಶಿಸಲು ಇಟ್ಟ ಬೋರ್ಡ್ ಅನ್ನು ಹ್ಯಾಕ್ ಮಾಡಿದ ನಂತರ ಸುಖೇಜಾ ಅವರು ಕಂಡಕ್ಟರ್‌ ವಿರುದ್ಧ ದೂರು ದಾಖಲಿಸಿದ್ದಾರೆ.

ಸತ್ನಾ ಬಸ್ ನಿಲ್ದಾಣದಲ್ಲಿ ಚಿತ್ರೀಕರಿಸಲಾದ ವೈರಲ್ ವೀಡಿಯೊವು ಎಲ್ಇಡಿ ಡಿಸ್ಪ್ಲೇ ಬೋರ್ಡ್‌ನಲ್ಲಿ ಸ್ಕ್ರೋಲಿಂಗ್ ಮಾಡುತ್ತಿರುವಾಗ ಈ ಅವಹೇಳನಕಾರಿ ಶಬ್ದ ಬಳಸಿರುವುದು ಬೆಳಕಿಗೆ ಬಂದಿದೆ. ಕುತೂಹಲಕಾರಿಯಾಗಿ, ಜಾಗರಣ ವರದಿಯ ಪ್ರಕಾರ, ಬಸ್ ಡ್ರೈವರ್ ಅಥವಾ ಸುಖೇಜಾ ಟ್ರಾವೆಲ್ಸ್‌ನ ಸಿಬ್ಬಂದಿಗೆ ನಿಂದನೀಯ ಶ್ಬದಗಳನ್ನು ರಿಪ್ರೋಗ್ರಾಮ್ ಮಾಡಿದ ಬಗ್ಗೆ ಯಾವುದೇ ಸುಳಿವು ಇರಲಿಲ್ಲ. ಈ ಬಗ್ಗೆ ಮಾಹಿತಿ ದೊರೆಯುತ್ತಿದ್ದಂತೆಯೇ ಬಸ್ ಮಾಲೀಕರು ಬೋರ್ಡ್‌ ಡಿಸ್ಪ್ಲೇಯ್‌ ಬಂದ್‌ ಮಾಡಲು ಸೂಚಿಸಿದರು ಮತ್ತು ನಂತರ ಸತ್ನಾದ ಕೊಲ್ಗಾವಾನ್ ಪೊಲೀಸ್ ಠಾಣೆಯಲ್ಲಿ ಘಟನೆ ಕುರಿತು ದೂರು ನೀಡಿದರು.

ಪ್ರಮುಖ ಸುದ್ದಿ :-   100 ವರ್ಷಗಳಲ್ಲಿ ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮೊದಲ ಮಹಿಳಾ ಉಪಕುಲಪತಿ ನೇಮಕ

https://twitter.com/Roshan_Abbas_/status/1582803603621715968?ref_src=twsrc%5Etfw%7Ctwcamp%5Etweetembed%7Ctwterm%5E1582803603621715968%7Ctwgr%5E2b58d196bb864a6baf3ae11d24776e246cfcc443%7Ctwcon%5Es1_&ref_url=https%3A%2F%2Fwww.timesnownews.com%2Fviral%2Fmp-bus-conductor-named-salman-khan-hacked-display-board-satish-sukheja-bus-service-satna-indore-bjp-article-94984677

“ಸಲ್ಮಾನ್ ಖಾನ್” ಎಂದು ಗುರುತಿಸಲಾದ ಮಾಜಿ ಉದ್ಯೋಗಿ, ತನ್ನ ಬಾಸ್ ವಜಾಗೊಳಿಸಿದ ನಂತರ ಈ ಕೃತ್ಯ ಎಸಗಿದ್ದಾನೆ ಎಂದು ಶಂಕಿಸಲಾಗಿದೆ.
ಡಿಸ್ಪ್ಲೇ ಬೋರ್ಡ್‌ನಲ್ಲಿನ ಪಠ್ಯವನ್ನು ಸರಿಪಡಿಸಲು ಮಾಲೀಕರು ಅಂದಾಜು 55,000 ರೂ.ಗಳನ್ನು ವೆಚ್ಚ ಮಾಡುತ್ತಿದ್ದಾರೆ, ಇದು ಅದರ CPU ಬದಲಿಸುವುದನ್ನು ಒಳಗೊಂಡಿರುತ್ತದೆ.
ಪೋಲೀಸ್ ದೂರಿನಲ್ಲಿ ಕಿಡಿಗೇಡಿತನ ಅಥವಾ ಮಾಲೀಕನ ಮಾನಹಾನಿ ಮಾಡುವ ರೀತಿಯ ಸಂಭವನೀಯ ಪಿತೂರಿಯನ್ನು ಸೂಚಿಸುತ್ತದೆ, ಆದರೆ ಬಸ್ ಕಂಡಕ್ಟರ್ ವಿರುದ್ಧದ ಯಾವುದೇ ಆರೋಪಗಳನ್ನು ಖಚಿತಪಡಿಸಲು ಸಾಧ್ಯವಾಗಲಿಲ್ಲ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement