ಎಸ್‌ಬಿಐ ಖಾತೆದಾರರಿಗೆ ದೀಪಾವಳಿ ಸಿಹಿ ಸುದ್ದಿ ; ಎಫ್‌ಡಿಗಳ ಮೇಲಿನ ಬಡ್ಡಿದರ ಹೆಚ್ಚಳ

ನವದೆಹಲಿ: ದೇಶದ ಅತಿದೊಡ್ಡ ಸಾಲದಾತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಶುಕ್ರವಾರ ತನ್ನ ಸ್ಥಿರ ಠೇವಣಿಗಳ (ಎಫ್‌ಡಿ) ಬಡ್ಡಿದರಗಳನ್ನು 80 ಬೇಸಿಸ್ ಪಾಯಿಂಟ್‌ಗಳ ವರೆಗೆ ಹೆಚ್ಚಿಸಿದೆ.
2 ಕೋಟಿಗಿಂತ ಕಡಿಮೆ ಇರುವ ಸ್ಥಿರ ಠೇವಣಿಗಳಿಗೆ ಹೊಸ ಬಡ್ಡಿ ದರಗಳು ಅನ್ವಯವಾಗಲಿದೆ. ಅಕ್ಟೋಬರ್ 21ರಂದು ಬ್ಯಾಂಕಿನ ಪತ್ರಿಕಾ ಪ್ರಕಟಣೆಯ ಪ್ರಕಾರ, ಸ್ಥಿರ ಠೇವಣಿ(FD) ಮೇಲಿನ ಬಡ್ಡಿದರಗಳು ಅಕ್ಟೋಬರ್ 22, 2022ರಿಂದ ಜಾರಿಗೆ ಬರುತ್ತವೆ. ಬ್ಯಾಂಕ್‌ 7 ದಿನಗಳಿಂದ 45 ದಿನಗಳ ಎಫ್‌ಡಿಗಳ ಬಡ್ಡಿದರ 3%ರಷ್ಟು ಮುಂದುವರುಯಲಿದೆ. 46 ದಿನಗಳಿಂದ 179 ದಿನಗಳ ವರೆಗೆ 4%ರಷ್ಟಿದ್ದ ಬಡ್ಡಿದರವನ್ನು 4.50%ಕ್ಕೆ ಹೆಚ್ಚಿಸಲಾಗಿದೆ.180 ದಿನಗಳಿಂದ 210 ದಿನಗಳ ನಡುವಿನ ಅವಧಿಯ ಎಫ್‌ಡಿಗಳ ಮೇಲಿನ ಬಡ್ಡಿ ದರವು 4.65 ಶೇಕಡಾದಿಂದ 5.25 ಶೇಕಡಾಕ್ಕೆ ಜಿಗಿದಿದೆ. ಬ್ಯಾಂಕ್ 211 ದಿನಗಳಿಂದ ಒಂದು ವರ್ಷಕ್ಕಿಂತ ಕಡಿಮೆ ಅವಧಿಯ ಠೇವಣಿಗಳ ಮೇಲಿನ ಬಡ್ಡಿ ದರವನ್ನು 4.70 ಪ್ರತಿಶತದಿಂದ 5.50 ಪ್ರತಿಶತಕ್ಕೆ ಹೆಚ್ಚಿಸಿದೆ.
ಒಂದು ವರ್ಷದಿಂದ ಎರಡು ವರ್ಷಕ್ಕಿಂತ ಕಡಿಮೆ ಅವಧಿಯ ಠೇವಣಿಗಳ ಮೇಲಿನ ಬಡ್ಡಿ ದರವು 5.60 ಪ್ರತಿಶತದಿಂದ 6.10 ಪ್ರತಿಶತಕ್ಕೆ ಏರಿದೆ. ಎರಡು ವರ್ಷದಿಂದ ಮೂರು ವರ್ಷಕ್ಕಿಂತ ಕಡಿಮೆ ಅವಧಿಗೆ, ಬಡ್ಡಿದರವನ್ನು ಶೇಕಡಾ 5.65 ರಿಂದ 6.25 ಕ್ಕೆ ಏರಿಸಲಾಗಿದೆ.
ಮೂರು ವರ್ಷದಿಂದ ಐದು ವರ್ಷಕ್ಕಿಂತ ಕಡಿಮೆ ಅವಧಿಯ ಠೇವಣಿಗಳ ಮೇಲಿನ ಬಡ್ಡಿ ದರವನ್ನು ಶೇ 5.80 ರಿಂದ ಶೇ 6.10ಕ್ಕೆ ಹೆಚ್ಚಿಸಲಾಗಿದೆ. ಐದು ವರ್ಷದಿಂದ 10 ವರ್ಷಗಳವರೆಗೆ ಎಫ್‌ಡಿಗಳಿಗೆ, ಬಡ್ಡಿ ದರವು 5.85 ಪ್ರತಿಶತದಿಂದ 6.10 ಪ್ರತಿಶತಕ್ಕೆ ಜಿಗಿದಿದೆ.

ಪ್ರಮುಖ ಸುದ್ದಿ :-   ತಪ್ಪು ಮಾಹಿತಿ ನೀಡಲಾಗಿದೆ : ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ವಿವರಿಸಲು ಮೋದಿ ಭೇಟಿಗೆ ಸಮಯಾವಕಾಶ ಕೋರಿ ಬಹಿರಂಗ ಪತ್ರ ಬರೆದ ಖರ್ಗೆ

ಹಿರಿಯ ನಾಗರೀಕರು
2 ಕೋಟಿಗಿಂತ ಕಡಿಮೆ ಮೊತ್ತದ ಹಿರಿಯ ನಾಗರಿಕರ ಸ್ಥಿರ ಠೇವಣಿಗಳ ಬಡ್ಡಿದರವನ್ನು ಬ್ಯಾಂಕ್ ಹೆಚ್ಚಿಸಿದೆ. ಹಿರಿಯ ನಾಗರಿಕರಿಗೆ, 7 ದಿನಗಳಿಂದ 45 ದಿನಗಳ ನಡುವಿನ ಅವಧಿಯ ಠೇವಣಿಗಳ ಬಡ್ಡಿ ದರವು 3.50 ಪ್ರತಿಶತ ಹಾಗೆಯೇ ಇರಲಿದೆ.
46 ದಿನಗಳಿಂದ 179 ದಿನಗಳ ವರೆಗಿನ ಎಫ್‌ಡಿ (FD)ಗಳಿಗೆ, ಬಡ್ಡಿದರವನ್ನು 4.50 ಪ್ರತಿಶತದಿಂದ 5 ಪ್ರತಿಶತಕ್ಕೆ ಹೆಚ್ಚಿಸಲಾಗಿದೆ. 180 ದಿನಗಳಿಂದ 210 ದಿನಗಳ ನಡುವಿನ ಅವಧಿಯ ಠೇವಣಿಗಳ ಮೇಲಿನ ಬಡ್ಡಿ ದರವು 5.15 ಪ್ರತಿಶತದಿಂದ 5.75 ಪ್ರತಿಶತಕ್ಕೆ ಜಿಗಿದಿದೆ.
211 ದಿನಗಳಿಂದ ಒಂದು ವರ್ಷಕ್ಕಿಂತ ಕಡಿಮೆ ಅವಧಿಯ ಠೇವಣಿಗಳ ಮೇಲಿನ ಬಡ್ಡಿ ದರವನ್ನು 5.20 ಪ್ರತಿಶತದಿಂದ 6 ಪ್ರತಿಶತಕ್ಕೆ ಹೆಚ್ಚಿಸಿದೆ. ಒಂದು ವರ್ಷದಿಂದ ಎರಡು ವರ್ಷಕ್ಕಿಂತ ಕಡಿಮೆ ಅವಧಿಯ ಎಫ್‌ಡಿಗಳ ಮೇಲಿನ ಬಡ್ಡಿ ದರವು 6.10 ಪ್ರತಿಶತದಿಂದ 6.60 ಪ್ರತಿಶತಕ್ಕೆ ಏರಿದೆ.

ಎರಡು ವರ್ಷದಿಂದ ಮೂರು ವರ್ಷಕ್ಕಿಂತ ಕಡಿಮೆ ಅವಧಿಯ ಎಫ್‌ಡಿಗಳಿಗೆ, ಬಡ್ಡಿದರವನ್ನು ಶೇಕಡಾ 6.15 ರಿಂದ ಶೇಕಡಾ 6.75 ಕ್ಕೆ ಏರಿಸಲಾಗಿದೆ. ಮೂರು ವರ್ಷದಿಂದ ಐದು ವರ್ಷಕ್ಕಿಂತ ಕಡಿಮೆ ಅವಧಿಯ ಠೇವಣಿಗಳ ಮೇಲಿನ ಬಡ್ಡಿದರವನ್ನು 6.30 ರಿಂದ 6.60 ಕ್ಕೆ ಹೆಚ್ಚಿಸಲಾಗಿದೆ.
ಇದನ್ನೂ ಓದಿ: ವೊಡಾಫೋನ್ ಐಡಿಯಾ ಎಟಿಸಿ ಟೆಲಿಕಾಂಗೆ 1,600 ಕೋಟಿ ರೂ ಮೌಲ್ಯದ ಡಿಬೆಂಚರ್‌ಗಳನ್ನು ವಿತರಿಸಲಿದೆ
ಐದು ವರ್ಷದಿಂದ 10 ವರ್ಷಗಳವರೆಗೆ ಪಕ್ವವಾಗುವ ಎಫ್‌ಡಿಗಳಿಗೆ, ಬಡ್ಡಿ ದರವು 6.65 ಪ್ರತಿಶತದಿಂದ 6.90 ಪ್ರತಿಶತಕ್ಕೆ ಜಿಗಿದಿದೆ.

ಪ್ರಮುಖ ಸುದ್ದಿ :-   ಮೋದಿ, ರಾಹುಲ್ ಗಾಂಧಿಯಿಂದ ನೀತಿ ಸಂಹಿತೆ ಉಲ್ಲಂಘನೆ ಆರೋಪ: ಉತ್ತರ ನೀಡಲು ಚುನಾವಣಾ ಆಯೋಗ ಸೂಚನೆ

3 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement