ಟಿ20 ವಿಶ್ವಕಪ್ 2022: ಸೂಪರ್ 12ಕ್ಕೆ ಅರ್ಹತೆ ಪಡೆದ ನಾಲ್ಕು ತಂಡಗಳು, ನವೀಕರಿಸಿದ ಭಾರತ ಪಂದ್ಯಗಳ ವೇಳಾಪಟ್ಟಿ ಇಲ್ಲಿದೆ

ನವದೆಹಲಿ: ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಐಸಿಸಿ (ICC) ಪುರುಷರ T20 ವಿಶ್ವಕಪ್ 2022 ರ ಅರ್ಹತಾ ಸುತ್ತಿನ ಹಂತ ಮುಕ್ತಾಯವಾಗಿದ್ದು, ಅರ್ಹತೆ ಪಡೆದ 4 ತಂಡಗಳು ಸೂಪರ್ 12 ಹಂತದಲ್ಲಿ ಅಗ್ರ 8 ತಂಡಗಳ ಜೊತೆ ಸೇರಿಕೊಂಡಿವೆ.
ಎ ಗುಂಪಿನಿಂದ ಶ್ರೀಲಂಕಾ ಮತ್ತು ನೆದರ್ಲೆಂಡ್ಸ್ ಮತ್ತು ಬಿ ಗುಂಪಿನಿಂದ ಜಿಂಬಾಬ್ವೆ ಮತ್ತು ಐರ್ಲೆಂಡ್ ಸೂಪರ್ 12ಕ್ಕೆ ಅರ್ಹತೆ ಪಡೆದ ನಾಲ್ಕು ತಂಡಗಳಾಗಿವೆ.
ಎರಡು ಬಾರಿಯ ವಿಶ್ವ ಟಿ20 ಚಾಂಪಿಯನ್ ವೆಸ್ಟ್ ಇಂಡೀಸ್ ಕೇವಲ ಒಂದು ಗೆಲುವಿನೊಂದಿಗೆ ಬಿ ಗುಂಪಿನಲ್ಲಿ ಕೊನೆಯದಾಗಿ ಶುಕ್ರವಾರದಂದು ಅರ್ಹತಾ ಸುತ್ತಿನಲ್ಲೇ ನಿರ್ಗಮಿಸಿದೆ. ವೆಸ್ಟ್ ಇಂಡೀಸ್ ಜೊತೆಗೆ ನಮೀಬಿಯಾ, ಯುಎಇ ಮತ್ತು ಸ್ಕಾಟ್ಲೆಂಡ್ ಟಿ20 ವಿಶ್ವಕಪ್‌ನಿಂದ ಹೊರಬಿದ್ದಿವೆ.
ನೆದರ್ಲ್ಯಾಂಡ್ಸ್ ಮತ್ತು ಜಿಂಬಾಬ್ವೆ ಭಾರತದ ಸೂಪರ್ 12ರ ೆರಡನೇ ಗುಂಪಿಲ್ಲಿವೆ.

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 98867 84189

ಎರಡೂ ಗುಂಪುಗಳ ತಂಡಗಳು ಹೀಗಿವೆ.
ಗುಂಪು 1: ಅಫ್ಘಾನಿಸ್ತಾನ, ಆಸ್ಟ್ರೇಲಿಯಾ, ಇಂಗ್ಲೆಂಡ್, ಐರ್ಲೆಂಡ್, ನ್ಯೂಜಿಲೆಂಡ್, ಶ್ರೀಲಂಕಾ
ಗುಂಪು 2: ಬಾಂಗ್ಲಾದೇಶ, ಭಾರತ, ನೆದರ್ಲ್ಯಾಂಡ್ಸ್, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಜಿಂಬಾಬ್ವೆ
ನೆದರ್ಲ್ಯಾಂಡ್ಸ್ ಮತ್ತು ಜಿಂಬಾಬ್ವೆ ದೃಢೀಕರಣದೊಂದಿಗೆ, ಸೂಪರ್ 12ರ ಹಂತಕ್ಕಾಗಿ ಭಾರತದ ಪಂದ್ಯದ ವೇಳಾಪಟ್ಟಿ ಈಗ ಪೂರ್ಣಗೊಂಡಿದೆ. ಭಾರತವು ಈಗ ಅಕ್ಟೋಬರ್ 27ರಂದು ನೆದರ್ಲ್ಯಾಂಡ್ಸ್ ಮತ್ತು ನವೆಂಬರ್6 ರಂದು ಜಿಂಬಾಬ್ವೆ ವಿರುದ್ಧದ ಹಂತದಲ್ಲಿ ಆಡಲಿದೆ.

ಇಂದಿನ ಪ್ರಮುಖ ಸುದ್ದಿ :-   ದೊಡ್ಡ ಸುರಂಗವನ್ನೇ ಕೊರೆದು ರೈಲು ಇಂಜಿನ್ ಕದ್ದೊಯ್ದ ಕಳ್ಳರು...!

T20 ವಿಶ್ವಕಪ್ ಸೂಪರ್ 12 ಹಂತಕ್ಕಾಗಿ ಭಾರತದ ಪಂದ್ಯಗಳ ವೇಳಾಪಟ್ಟಿ:
ಭಾರತ vs ಪಾಕಿಸ್ತಾನ – ಭಾನುವಾರ, ಅಕ್ಟೋಬರ್ 23
ನೆದರ್ಲ್ಯಾಂಡ್ಸ್ vs ಭಾರತ – ಗುರುವಾರ, ಅಕ್ಟೋಬರ್ 27
ಭಾರತ vs ದಕ್ಷಿಣ ಆಫ್ರಿಕಾ – ಭಾನುವಾರ, ಅಕ್ಟೋಬರ್ 30
ಭಾರತ vs ಬಾಂಗ್ಲಾದೇಶ – ಬುಧವಾರ, ನವೆಂಬರ್ 2
ಜಿಂಬಾಬ್ವೆ vs ಭಾರತ – ಭಾನುವಾರ, ನವೆಂಬರ್ 6
ಮೊದಲ ಸೆಮಿಫೈನಲ್ ಬುಧವಾರ ನವೆಂಬರ್ 9 ರಂದು ಮತ್ತು ಎರಡನೇ ಫೈನಲ್ ನವೆಂಬರ್ 10 ರಂದು ಗುರುವಾರ ನಡೆಯಲಿದೆ. T20 ವಿಶ್ವಕಪ್ 2022 ರ ಫೈನಲ್ ನವೆಂಬರ್ 13 ರ ಭಾನುವಾರದಂದು ನಡೆಯಲಿದೆ.

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

3 / 5. ಒಟ್ಟು ವೋಟುಗಳು 1

ನಿಮ್ಮ ಕಾಮೆಂಟ್ ಬರೆಯಿರಿ

advertisement