ಎಂಥಾ ಲೋಕವಯ್ಯಾ..: ರಕ್ತದ ಮಡುವಿನಲ್ಲಿ ಬಿದ್ದಿದ್ದ ಬಾಲಕಿ ಸಹಾಯಕ್ಕಾಗಿ ಅಂಗಲಾಚುತ್ತಿದ್ದರೆ, ವೀಡಿಯೊ ಮಾಡುವುದರಲ್ಲಿ ನಿರತರಾದ ಜನ…!

ಲಕ್ನೋ: ತೀವ್ರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ಬಾಲಕಿಯೊಬ್ಬಳು ಸಹಾಯಕ್ಕಾಗಿ ಯಾಚಿಸುತ್ತಿದ್ದರೆ, ಮಾನವೀಯತೆ ಮರೆತ ಜನರು ತಮ್ಮ ಮೊಬೈಲ್ ಫೋನ್‌ಗಳಲ್ಲಿ ಆಕೆಯ ದಾರುಣ ಸ್ಥಿತಿಯನ್ನು ಚಿತ್ರೀಕರಿಸುತ್ತಿದ್ದ ಅಮಾನವೀಯ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಉತ್ತರ ಪ್ರದೇಶದ ಕನೌಜ್‌ನ 13 ವರ್ಷದ ಬಾಲಕಿ ಅಕ್ಟೋಬರ್ 23 ರಂದು ಭಾನುವಾರ ತನ್ನ ಮನೆಯಿಂದ ನಾಪತ್ತೆಯಾದ ಗಂಟೆಗಳ ನಂತರ ಬಹು ಗಾಯಗಳೊಂದಿಗೆ ಪತ್ತೆಯಾಗಿದ್ದಾಳೆ.
ವೀಡಿಯೊದಲ್ಲಿ, ಯುವತಿಯು ಸಹಾಯವನ್ನು ಯಾಚಿಸುತ್ತಿರುವುದನ್ನು ಕಾಣಬಹುದು. ಭಾನುವಾರ ಮನೆಯಿಂದ ನಾಪತ್ತೆಯಾಗಿದ್ದ ಬಾಲಕಿ, ಉತ್ತರ ಪ್ರದೇಶದ ಕನ್ನೌಜ್‌ನ ಸರ್ಕಾರಿ ಅತಿಥಿಗೃಹದ ಸಮೀಪ ಪತ್ತೆಯಾಗಿದ್ದಾಳೆ. ಆಕೆಯ ತಲೆ ಸೇರಿದಂತೆ ದೇಹದ ಹಲವು ಭಾಗಗಳಲ್ಲಿ ಗಂಭೀರ ಗಾಯಗಳಾಗಿವೆ. ತನ್ನ ರಕ್ತಸಿಕ್ತ ಕೈಗಳನ್ನು ಚಾಚಿ ಬಾಲಕಿ ಸಹಾಯಕ್ಕಾಗಿ ಮೊರೆಯಿಡುತ್ತಿದ್ದರೆ ಜನರು ಆಕೆಗೆ ಸಹಾಯ ಮಾಡುವುದು ಬಿಟ್ಟು ವಿಭಿನ್ನ ದಿಕ್ಕುಗಳಿಂದ ತಮ್ಮ ಮೊಬೈಲ್ ಫೋನ್‌ಗಳಲ್ಲಿ ಚಿತ್ರೀಕರಿಸುವ ದೃಶ್ಯ ವೈರಲ್‌ ಆಗಿದೆ.

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 98867 84189

ಪೊಲೀಸರಿಗೆ ಮಾಹಿತಿ ನೀಡಲಾಗಿದೆಯೇ ಎಂದು ವ್ಯಕ್ತಿಯೊಬ್ಬರು ಕೇಳುವುದು ವೀಡಿಯೊದಲ್ಲಿ ಸೆರೆಯಾಗಿದೆ. ಮತ್ತೊಬ್ಬರು ಪೊಲೀಸ್ ಮುಖ್ಯಸ್ಥರ ದೂರವಾಣಿ ಸಂಖ್ಯೆ ಕೇಳಿದ್ದಾರೆ. ಆದರೆ ಬಾಲಕಿಗೆ ಸಹಾಯ ಮಾಡುವುದನ್ನು ಬಿಟ್ಟು ಚಿತ್ರೀಕರಿಸುವುದನ್ನು ಮುಂದುವರಿಸಿದ್ದಾರೆ. ಪೊಲೀಸರು ಬರುವವರೆಗೂ ಬಾಲಕಿ ಅಲ್ಲಿಯೇ ಅಸಹಾಯಕಳಾಗಿ ಬಿದ್ದಿದ್ದಳು.
ಪೊಲೀಸ್ ಸಿಬ್ಬಂದಿಯೊಬ್ಬರು ಆ ಗಾಯಾಳು ಮಗುವನ್ನು ತಮ್ಮ ತೋಳುಗಳಲ್ಲಿ ಹಿಡಿದೆತ್ತಿಕೊಂಡು ಆಟೋರಿಕ್ಷಾ ಕಡೆಗೆ ಓಡುವುದು ಮತ್ತೊಂದು ವಿಡಿಯೋದಲ್ಲಿ ಸೆರೆಯಾಗಿದೆ.

ಇಂದಿನ ಪ್ರಮುಖ ಸುದ್ದಿ :-   ಬಾಲಿವುಡ್‌ ಹಿರಿಯ ನಟ ವಿಕ್ರಮ್ ಗೋಖಲೆ ನಿಧನ

ಅಪ್ರಾಪ್ತ ವಯಸ್ಸಿನ ಬಾಲಕಿ ತೀವ್ರ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಸ್ಥಳೀಯ ಪೊಲೀಸರು ಆಕೆಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ” ಎಂದು ಪೊಲೀಸ್ ವರಿಷ್ಠಾಧಿಕಾರಿ ಕುನ್ವರ್ ಅನುಪಮ್ ಸಿಂಗ್ ಹೇಳಿಕೆ ನೀಡಿದ್ದಾರೆ.
ಪಿಗ್ಗಿ ಬ್ಯಾಂಕ್ ಖರೀದಿಸುವ ಸಲುವಾಗಿ ಭಾನುವಾರ ಮನೆಯಿಂದ ಹೊರಗೆ ಬಂದಿದ್ದ ಆಕೆ ಮರಳಿ ಬಂದಿರಲಿಲ್ಲ. ಆಕೆ ಎಲ್ಲಿ ಹೋಗಿದ್ದಾಳೆ ಎನ್ನುವುದು ಗೊತ್ತಾಗದೆ ಮನೆಯವರಿಗೆ ಆತಂಕ ಉಂಟಾಗಿತ್ತು.

ಆಕೆಯ ಜೊತೆ ಯುವಕನೊಬ್ಬ ಇದ್ದಂತೆ ಕಂಡುಬಂದಿದ್ದು, ಗೆಸ್ಟ್ ಹೌಸ್‌ನ ಸಿಸಿಟಿವಿ ಕ್ಯಾಮೆರಾದಲ್ಲಿ ಕಾಣಿಸಿದೆ. ಆತನ ಗುರುತು ಪತ್ತೆ ಮಾಡುವ ಪ್ರಯತ್ನ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕುಟುಂಬದವರ ದೂರಿನ ಅನ್ವಯ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.
ಬಾಲಕಿಗೆ ಲೈಂಗಿಕ ಕಿರುಕುಳ ನೀಡಿ ಹಲ್ಲೆ ಮಾಡಲಾಗಿದೆಯೇ ಎಂಬುದು ಸ್ಪಷ್ಟವಾಗಿಲ್ಲ. ಬಾಲಕಿಯ ಮನೆಯವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದು, ಇನ್ನೂ ಯಾರನ್ನೂ ಬಂಧಿಸಿಲ್ಲ.
ಉತ್ತರ ಪ್ರದೇಶ ಕಾಂಗ್ರೆಸ್ ತನ್ನ ಅಧಿಕೃತ ಹ್ಯಾಂಡಲ್‌ನಲ್ಲಿ ಈ ವಿಡಿಯೋವನ್ನು ಟ್ವೀಟ್ ಮಾಡಿದೆ.

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಇಂದಿನ ಪ್ರಮುಖ ಸುದ್ದಿ :-   ತೆಲಂಗಾಣ ಶಾಸಕರ ಆಮಿಷ ಪ್ರಕರಣ: ಬಿಎಲ್‌ ಸಂತೋಷ ವಿಚಾರಣೆಗೆ ತೆಲಂಗಾಣ ಹೈಕೋರ್ಟ್‌ ತಡೆ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

5 / 5. ಒಟ್ಟು ವೋಟುಗಳು 2

ನಿಮ್ಮ ಕಾಮೆಂಟ್ ಬರೆಯಿರಿ

advertisement