ವಿಷ ಸೇವಿಸಿ 40 ಮಂಗಗಳು ಸಾವು ; ತನಿಖೆ ಆರಂಭ

ಶ್ರೀಕಾಕುಳಂ: ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ಕವಿತಾ ಮಂಡಲ್‌ನ ಶಿಲಾಗಮ್ ಪ್ರದೇಶದಲ್ಲಿ ಸುಮಾರು 40 ಕೋತಿಗಳ ಮೃತದೇಹಗಳು ಪತ್ತೆಯಾಗಿವೆ. ಸುಮಾರು 40 ಸತ್ತ ಕೋತಿಗಳು ಪೊದೆಗಳಲ್ಲಿ ರಾಶಿಯಾಗಿ ಬಿದ್ದಿರುವುದನ್ನು ಕಂಡು ವಿಷ ಉಣಿಸಲಾಗಿದೆ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ತನಿಖೆ ಆರಂಭಿಸಲಾಗಿದೆ.
ಸ್ಥಳೀಯರ ಪ್ರಕಾರ ಇನ್ನೂ ಕೆಲವು ಕೋತಿಗಳು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದವು. ಮಂಗಗಳನ್ನು ಕಂಡ ಜನರು ಪ್ರಜ್ಞೆ ತಪ್ಪಿ ಬಿದ್ದಿದ್ದ ಮಂಗಗಳಿಗೆ ಆಹಾರ ನೀಡಲು ಯತ್ನಿಸಿದರಾದರೂ ಅವು ತಿನ್ನುವ ಸ್ಥಿತಿಯಲ್ಲಿ ಇರಲಿಲ್ಲ. ಅರಣ್ಯ ಇಲಾಖೆ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಪ್ರಾಣಿ ಕಾಯ್ದೆಯಡಿ ಪ್ರಕರಣ ದಾಖಲಿಸಿದೆ.

ಜಿಲ್ಲೆಯಲ್ಲಿ ಇಂತಹ ಘಟನೆಯನ್ನು ನಾವು ನೋಡಿರಲಿಲ್ಲ. ಯಾರೋ ಮಂಗಗಳನ್ನು ಟ್ರ್ಯಾಕ್ಟರ್‌ನಲ್ಲಿ ತಂದು ಗ್ರಾಮದ ಅರಣ್ಯ ಪ್ರದೇಶದ ಬಳಿ ಬಿಟ್ಟಿದ್ದಾರೆ. ಈ ಘಟನೆಯಲ್ಲಿ ಸುಮಾರು 40 ರಿಂದ 45 ಮಂಗಗಳು ಸತ್ತಿವೆ ಎಂದು ಶ್ರೀಕಾಕುಳಂನ ಕಾಸಿಬುಗ ಅರಣ್ಯಾಧಿಕಾರಿ ಮುರಳಿ ಕ್ರಿಶನ್ ಹೇಳಿದರು.
ಈ ವೇಳೆ ಮಾತನಾಡಿದ ಅವರು, ಈ ಕೋತಿಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. 5 ದಿನಗಳಲ್ಲಿ ವರದಿ ಬರಲಿದೆ. ಪ್ರಾಣಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ತನಿಖೆಗಳು ನಡೆಯುತ್ತಿದ್ದು, ಶೀಘ್ರವೇ ಆರೋಪಿಗಳನ್ನು ಬಂಧಿಸಲಾಗುವುದು’ ಎಂದು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   "ಚಾಣಕ್ಯ ಕೂಡ...: ತನ್ನ ಲುಕ್‌ ಬಗ್ಗೆ ಟ್ರೋಲ್‌ ಮಾಡಿದವರ ಬಾಯ್ಮುಚ್ಚಿಸಿದ ಬೋರ್ಡ್ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿ

3 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement