ಹಿಂದೂಸ್ತಾನ್ ಮೇ ರೆಹನಾ ಹೋಗಾ ತೋ…: ‘ನೋಟುಗಳ ಮೇಲೆ ಗಣೇಶ, ಲಕ್ಷ್ಮಿ’ ಚಿತ್ರಗಳ ಬೇಡಿಕೆ ಮುಂದಿಟ್ಟು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಎಎಪಿ

ನವದೆಹಲಿ: ಹಿಂದೂ ದೇವತೆಗಳ ಚಿತ್ರಗಳನ್ನು ಹೊಂದಿರುವ ಕರೆನ್ಸಿ ನೋಟುಗಳ ಬಗ್ಗೆ ಬಿಜೆಪಿ ವಿರುದ್ಧದ ದಾಳಿಯನ್ನು ತೀವ್ರಗೊಳಿಸಿರುವ ಎಎಪಿ ನಾಯಕ ನರೇಶ್ ಬಲ್ಯಾನ್, ಬಿಜೆಪಿ ನಾಯಕರಿಗೆ ಗಣೇಶ ಮತ್ತು ಲಕ್ಷ್ಮಿ ಚಿತ್ರಗಳನ್ನು ನೋಟುಗಳ ಮೇಲೆ ಹಾಕಲು ಸಮಸ್ಯೆ ಇದ್ದರೆ ಅವರು ಪಾಕಿಸ್ತಾನಕ್ಕೆ ಹೋಗಬಹುದು ಎಂದು ಹೇಳಿದ್ದಾರೆ.
ಅಕ್ಟೋಬರ್ 26 ಬುಧವಾರ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಮಹಾತ್ಮಾ ಗಾಂಧಿಯವರ ಫೋಟೋದೊಂದಿಗೆ ಕರೆನ್ಸಿ ನೋಟುಗಳ ಮೇಲೆ ಭಗವಾನ್ ಗಣೇಶ ಮತ್ತು ಲಕ್ಷ್ಮಿ ದೇವಿಯ ಚಿತ್ರಗಳನ್ನು ಮುದ್ರಿಸುವಂತೆ ಕೇಂದ್ರಕ್ಕೆ ಮನವಿ ಮಾಡಿದ ಬೆನ್ನಲ್ಲೇ ಎಎಪಿ ನಾಯಕನ ಈ ಹೇಳಿಕೆ ಬಂದಿದೆ.

ಬಿಜೆಪಿ ತನ್ನ ಮೇಲೆ ಒತ್ತಡ ಹೇರಲು ಯತ್ನಿಸುತ್ತಿದೆ ಎಂದು ಆರೋಪಿಸಿರುವ ಅವರು, “ಹಿಂದೂಸ್ತಾನ್ ಮೇ ರೆಹನಾ ಹೋಗಾ ಬಿಜೆಪಿಗೆ ವಾಲೋ ಕೋ ಶ್ರೀ ಗಣೇಶ್-ಲಕ್ಷ್ಮೀಜಿ ಕೋ ಜಯ್ ಬೋಲ್ನಾ ಹೋಗಾ. (ಬಿಜೆಪಿ ಭಾರತದಲ್ಲಿ ಉಳಿಯಲು ಬಯಸಿದರೆ, ಅವರು ಜೈ ಶ್ರೀ ಗಣೇಶ-ಲಕ್ಷ್ಮಿಗೆ ಜೈ ಎಂದು ಜಪಿಸಬೇಕು)

ಡಿಸೆಂಬರ್‌ನಲ್ಲಿ ನಡೆಯಲಿರುವ ಗುಜರಾತ್ ಚುನಾವಣೆಗೆ ಈ ವಿಷಯವನ್ನು ಚುನಾವಣಾ ಪ್ಲಾನ್ ಮಾಡಲು ಎಎಪಿ ಯೋಜಿಸುತ್ತಿದೆ. ” ‘ಭಾರತೀಯ ರೂಪಾಯಿಯ ಮೇಲೆ ಶ್ರೀ ಗಣೇಶ ಮತ್ತು ಲಕ್ಷ್ಮಿ ಅವರ ಚಿತ್ರಗಳನ್ನು ಹಾಕುವುದನ್ನು ಬಿಜೆಪಿ ವಿರೋಧಿಸಿದೆ’ ಎಂದು ಗುಜರಾತಿನಾದ್ಯಂತ ಪೋಸ್ಟರ್‌ಗಳನ್ನು ಹಾಕಲಾಗುವುದು ಎಂದು ಬಲ್ಯಾನ್ ಹೇಳಿದ್ದಾರೆ.

ಪ್ರಮುಖ ಸುದ್ದಿ :-   30 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಬೆಂಗಳೂರು ಸ್ಫೋಟದ ಪ್ರಮುಖ ಆರೋಪಿ ಅರೆಸ್ಟ್‌

ಎಎಪಿಗೆ ‘ನಿಜವಾದ ಹಿಂದೂ’ ಟ್ಯಾಗ್ ಅನ್ನು ಪಡೆದುಕೊಳ್ಳುವ ಪ್ರಯತ್ನದಲ್ಲಿ, ಬಲ್ಯಾನ್ ಅವರು ಕೇಜ್ರಿವಾಲ್ ವಿವಿಧ ದೇವಾಲಯಗಳಲ್ಲಿ ಪೂಜೆ ಮತ್ತು ಆರತಿ ನೀಡುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಅವರು ಕೇಜ್ರಿವಾಲ್ ಅವರನ್ನು “ರಾಮನ ನಿಜವಾದ ಸೇವಕ (ಭಕ್ತ)” ಎಂದು ಕರೆದಿದ್ದಾರೆ.

ಬಿಜೆಪಿಗೆ ನೋಟುಗಳಲ್ಲಿ ಸಾವರ್ಕರ್ ಬೇಕು
ಬಿಜೆಪಿ ಪಕ್ಷವು ನೋಟುಗಳ ಮೇಲೆ ವಿ.ಡಿ. ಸಾವರ್ಕರ್ ಅವರ ಫೋಟೋವನ್ನು ಬಯಸಿದ್ದರಿಂದ ಬಿಜೆಪಿಯು ಕರೆನ್ಸಿ ನೋಟುಗಳಲ್ಲಿ ಹಿಂದೂ ದೇವತೆಗಳ ಚಿತ್ರಗಳ ಕಲ್ಪನೆಯನ್ನು ವಿರೋಧಿಸುತ್ತಿದೆ ಎಂದು ಎಎಪಿ ಶಾಸಕ ಸಂಜಯ್ ಸಿಂಗ್ ಆರೋಪಿಸಿದ್ದಾರೆ. ಮೋದಿ ಸರ್ಕಾರ ಸಾವರ್ಕರ್ ಅವರ ಫೋಟೋ ಹಾಕಲು ಹೊರಟಿದೆ ಎಂದು ನಮಗೆ ತಿಳಿದುಬಂದಿದ್ದು, ಈ ಕಾರಣದಿಂದ ಈ ಜನರು ಗಣೇಶ ಮತ್ತು ಲಕ್ಷ್ಮಿ ದೇವಿ ಚಿತ್ರ ಹಾಕುವುದನ್ನುವಿರೋಧಿಸುತ್ತಿದ್ದಾರೆ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಪ್ರಮುಖ ಸುದ್ದಿ :-   ಅಧಿಕಾರಿಯನ್ನು ಕಚೇರಿಯಿಂದ ಹೊರಗೆಳೆದು ಥಳಿತ, ಮುಖಕ್ಕೆ ಒದ್ದು ಹಲ್ಲೆ : ಮೂವರ ಬಂಧನ-ದೃಶ್ಯ ಸಿಸಿಟಿವಿಯಲ್ಲಿ ಸೆರೆ

3 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement