ಆಘಾತಕಾರಿ ಘಟನೆ: ಪತ್ನಿ ಆತ್ಮಹತ್ಯೆ ಪ್ರಯತ್ನ ವೀಡಿಯೊ ಮಾಡಿದ ಭೂಪ…! ನಂತರ ಸಾವಿಗೀಡಾದ ಪತ್ನಿ

ಕಾನ್ಪುರ: ವಿಚಿತ್ರ ಮತ್ತು ಆಘಾತಕಾರಿ ಘಟನೆಯಲ್ಲಿ, ವ್ಯಕ್ತಿಯೊಬ್ಬ ತನ್ನ ಹೆಂಡತಿಯ ಆತ್ಮಹತ್ಯೆ ಪ್ರಯತ್ನವನ್ನು ಚಿತ್ರೀಕರಿಸಿಕೊಂಡು ಅದನ್ನು ಆಕೆಯ ಸಾವಿನ ಬಳಿಕ ಕುಟುಂಬದವರಿಗೆ ತೋರಿಸಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಸಂಜಯ್ ಗುಪ್ತಾ ಮತ್ತು ಶೋಬಿತಾ ಗುಪ್ತಾ ಐದು ವರ್ಷಗಳ ಹಿಂದೆ ಮದುವೆಯಾಗಿದ್ದರು. ತಮ್ಮ ಹಾಸಿಗೆ ಮೇಲಿನ ಫ್ಯಾನ್‌ಗೆ ನೇಣು ಬಿಗಿದುಕೊಳ್ಳುವುದನ್ನು ಸಂಜಯ್ ಗುಪ್ತಾ ತನ್ನ ಮೊಬೈಲ್ ಫೋನ್‌ನಲ್ಲಿ ಚಿತ್ರೀಕರಿಸಿದ್ದ. ಪತಿ ಜೊತೆಗಿನ ಜಗಳದ ಬಳಿಕ ಮನನೊಂದ ಶೋಬಿತಾ, ಮಂಗಳವಾರ ಆತ್ಮಹತ್ಯೆ ಮಾಡಿಕೊಂಡಿದ್ದರು. ಈಗ ಅವರ ಪತಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹೆಂಡತಿ ಆತ್ಮಹತ್ಯೆ ಪ್ರಯತ್ನ ಮಾಡುತ್ತಿದ್ದರೆ, ಸಂಜಯ್ ಗುಪ್ತಾ ಆಕೆಯನ್ನು ತಡೆಯುವ ಯಾವ ಪ್ರಯತ್ನವನ್ನೂ ಮಾಡಿಲ್ಲ. ಆಕೆ ಕುಣಿಕೆಗೆ ತಲೆಯೊಡ್ಡುವ ಹಂತದಲ್ಲಿಯೂ ಆಕೆಯನ್ನು ಉಳಿಸಿಕೊಳ್ಳಲು ಮುಂದಾಗಿಲ್ಲ. ಇದು ನಿನ್ನ ಮನಸ್ಥಿತಿ. ನಿನ್ನದು ಬಹಳ ಕೆಟ್ಟ ಮನಸ್ಥಿತಿ ಎಂದು ಸಂಜಯ್ ಕೂಗಾಡುವುದು ವಿಡಿಯೋದಲ್ಲಿ ಸೆರೆಯಾಗಿದೆ.

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 98867 84189

ಒಂದು ಕ್ಷಣ ಕುಣಿಕೆಯನ್ನು ತೆಗೆದ ಶೋಬಿತಾ, ಹಾಸಿಗೆ ಮೇಲೆ ನಿಂತು ಪತಿಯ ಕಡೆ ದಿಟ್ಟಿಸಿ ನೋಡಿದ ಸಂದರ್ಭಕ್ಕೆ ವೀಡಿಯೊ ಅಂತ್ಯಗೊಂಡಿದೆ. ಮಂಗಳವಾರ ಮಧ್ಯಾಹ್ನ ಶೋಬಿತಾ ತಂದೆ ರಾಜ್ ಕಿಶೋರ ಗುಪ್ತಾ ಅವರಿಗೆ ಅಳಿಯನಿಂದ ಕರೆ ಬಂದಿದ್ದು, ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿಸಿದ್ದ.
ಕೂಡಲೇ ಆಕೆಯ ಮನೆಯವರು ಅಲ್ಲಿಗೆ ತೆರಳಿದ್ದರು. ಶೋಬಿತಾ ಹಾಸಿಗೆ ಮೇಲೆ ಮಲಗಿದ್ದು, ಸಂಜಯ್ ಗುಪ್ತಾ ಆಕೆಗೆ ಸಿಪಿಆರ್ ಮಾಡುತ್ತಿರುವುದು ಕಂಡುಬಂದಿತ್ತು. ತಾನು ಚಿತ್ರೀಕರಿಸಿಕೊಂಡಿದ್ದ ವಿಡಿಯೋವನ್ನು ಆತ ಮಾವನಿಗೆ ತೋರಿಸಿದ್ದ. ಆಕೆಯ ಮೊದಲ ಪ್ರಯತ್ನದಲ್ಲಿ ಉಳಿಸಿಕೊಂಡಿದ್ದಾಗಿ ಹೇಳಿದ್ದ. ಆತನ ವರ್ತನೆ ತೀವ್ರ ಪ್ರಶ್ನಾರ್ಹವಾಗಿತ್ತು ಎಂದು ಶೋಬಿತಾ ತಂದೆ ಹೇಳಿದ್ದಾರೆ.

ಇಂದಿನ ಪ್ರಮುಖ ಸುದ್ದಿ :-   "ನಿಮಗೆ ನಾಚಿಕೆಯಾಗಬೇಕು, ನಿಮ್ಮ ವರ್ತನೆಗೆ ನಾನು ಕ್ಷಮೆಯಾಚಿಸ್ತೇನೆ : 'ಕಾಶ್ಮೀರ ಫೈಲ್ಸ್' ಬಗ್ಗೆ ಇಸ್ರೇಲಿ ಚಲನಚಿತ್ರ ನಿರ್ಮಾಪಕನ ಟೀಕೆಗಳಿಗೆ ಇಸ್ರೇಲಿ ರಾಯಭಾರಿ ತೀವ್ರ ವಾಗ್ದಾಳಿ

ಆಕೆಯನ್ನು ಆಸ್ಪತ್ರೆಗೆ ಸಾಗಿಸುವ ಬದಲು ಎದೆಯ ಮೇಲೆ ಒತ್ತುತ್ತಾ ಇರುವುದನ್ನು ನಾವು ನೋಡಿದ್ದೆವು. ಈ ಮೊದಲು ಆಕೆ ಆತ್ಮಹತ್ಯೆ ಪ್ರಯತ್ನ ಮಾಡಿದ್ದಳು ಎನ್ನುವ ವಿಡಿಯೋವನ್ನು ಸಂಜಯ್ ನಮಗೆ ತೋರಿಸಿದ್ದ. ನಮ್ಮ ಮಗಳನ್ನು ತಡೆಯಲು ಆತ ಮುಂದಾಗಿರಲಿಲ್ಲ. ಆದರೆ ಅದನ್ನು ವಿಡಿಯೋ ಮಾಡುತ್ತಿದ್ದ. ಇದಾದ ಕೆಲವೇ ಹೊತ್ತಿನಲ್ಲಿ ಆಕೆ ಮೃತಪಟ್ಟಿದ್ದಾಳೆ. ಇದು ಅನುಮಾನಕ್ಕೆ ಕಾರಣವಾಗಿದೆ ಎಂದು ಅವರು ತಿಳಿಸಿದ್ದಾರೆ.
ಶೋಬಿತಾ ಕುಟುಂಬ, ಆಕೆಯನ್ನು ಆಸ್ಪತ್ರೆಗೆ ಸಾಗಿಸಿದೆ. ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದರು. ಬಳಿಕ ಕುಟುಂಬ ಪೊಲೀಸರನ್ನು ಸಂಪರ್ಕಿಸಿದೆ. ಅವರ ಕುಟುಂಬ ತೀವ್ರ ಆಘಾತಕ್ಕೆ ಒಳಗಾಗಿದೆ. ಆಕೆಯನ್ನು ಉಳಿಸಬಹುದಿತ್ತು. ಆದರೆ ಯಾರೂ ಆ ಪ್ರಯತ್ನ ಮಾಡಿಲ್ಲ. ನಮಗೆ ನ್ಯಾಯ ಬೇಕು ಎಂದು ಕುಟುಂಬದವರು ಹೇಳಿದ್ದಾರೆ.

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

3 / 5. ಒಟ್ಟು ವೋಟುಗಳು 1

ನಿಮ್ಮ ಕಾಮೆಂಟ್ ಬರೆಯಿರಿ

advertisement