ಕನ್ನಡ ರಾಜ್ಯೋತ್ಸವಕ್ಕೆ ಜಿಲ್ಲಾ ಕೇಂದ್ರಗಳಲ್ಲಿ ಧ್ವಜಾರೋಹಣ ಮಾಡುವ ಸಚಿವರ ಪಟ್ಟಿ ಪ್ರಕಟ: 4 ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳಿಗೆ ಹೊಣೆ

ಬೆಂಗಳೂರು: ನವೆಂಬರ್ 1, 2022ರಂದು ರಾಜ್ಯ ಸರ್ಕಾರದಿಂದ ಕನ್ನಡ ರಾಜ್ಯೋತ್ಸವದಂದು ಜಿಲ್ಲಾ ಕೇಂದ್ರಗಳಲ್ಲಿ ಧ್ವಜಾರೋಹಣಕ್ಕೆ (Flag Hosting) ಸಚಿವರ ಪಟ್ಟಿಯನ್ನು ಪ್ರಕಟಿಸಿದೆ. ಈ ಪಟ್ಟಿಯಂತೆ ನಾಲ್ಕು ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳಿಗೆ ಹೊಣೆಗಾರಿಕೆ ನೀಡಲಾಗಿದೆ.
ಈ ಕುರಿತು ರಾಜ್ಯ ಸರ್ಕಾರದ ಅಧೀನ ಕಾರ್ಯದರ್ಶಿ ಅಧಿಸೂಚನೆ ಹೊರಡಿಸಿದ್ದು, ನವೆಂಬರ್ 1ರ ಕನ್ನಡ ರಾಜ್ಯೋತ್ಸವ ದಿನಾಚರಣೆಯ ಪ್ರಯುಕ್ತ ರಾಜ್ಯದ ಜಿಲ್ಲಾ ಕೇಂದ್ರಗಳಲ್ಲಿ ಬೆಂಗಳೂರು ನಗರ ಹೊರತುಪಡಿಸಿ, ಈ ಕೆಳಕಂಡ ಸಚಿವರು ಹಾಗೂ ಜಿಲ್ಲಾಧಿಕಾರಿಗಳನ್ನು ಧ್ವಜಾರೋಹಣ ಮಾಡಲು ನೇಮಕ ಮಾಡಲಾಗಿದೆ ಎಂದು ತಿಳಿಸಿದೆ.
ಜಿಲ್ಲಾ ಕೇಂದ್ರಗಳಲ್ಲಿ ಧ್ವಜಾರೋಹಣ ಮಾಡಲಿರುವಂತ ಸಚಿವರ ಪಟ್ಟಿ
ಗೋವಿಂದ ಕಾರಜೋಳ – ಬೆಳಗಾವಿ
ಬಿ ಶ್ರೀರಾಮುಲು – ಬಳ್ಳಾರಿ
ವಿ.ಸೋಮಣ್ಣ – ಚಾಮರಾಜನಗರ
ಎಸ್. ಅಂಗಾರ– ಉಡುಪಿ
ಅರಗ ಜ್ಞಾನೇಂದ್ರ – ತುಮಕೂರು
ಡಾ.ಸಿಎನ್ ಅಶ್ವತ್ಥನಾರಾಯಣ – ರಾಮನಗರ
ಸಿ.ಸಿ. ಪಾಟೀಲ್ – ಬಾಗಲಕೋಟೆ
ಆನಂದ್ ಸಿಂಗ್– ಕೊಪ್ಪಳ
ಕೋಟಾ ಶ್ರೀನಿವಾಸ ಪೂಜಾರಿ – ಉತ್ತರ ಕನ್ನಡ
ಪ್ರಭು ಚವ್ಹಾಣ – ಯಾದಗಿರಿ
ಮುರುಗೇಶ್ ನಿರಾಣಿ – ಕಲಬುರ್ಗಿ
ಶಿವರಾಂ ಹೆಬ್ಬಾರ್ – ಹಾವೇರಿ
ಎಸ್ ಟಿ ಸೋಮಶೇಖರ – ಮೈಸೂರು
ಬಿ.ಸಿ ಪಾಟೀಲ – ಚಿತ್ರದುರ್ಗ
ಭೈರತಿ ಬಸವರಾಜ – ದಾವಣಗೆರೆ
ಡಾ.ಕೆ ಸುಧಾಕರ – ಬೆಂಗಳೂರು ಗ್ರಾಮಾಂತರ
ಕೆ ಗೋಪಾಲಯ್ಯ – ಹಾಸನ
ಎಂಟಿಬಿ ನಾಗರಾಜ – ಚಿಕ್ಕಬಳ್ಳಾಪುರ
ಶಶಿಕಲಾ ಜೊಲ್ಲೆ – ವಿಜಯನಗರ
ಕೆ.ಸಿ. ನಾರಾಯಣಗೌಡ – ಶಿವಮೊಗ್ಗ
ಬಿ.ಸಿ ನಾಗೇಶ – ಕೊಡಗು
ವಿ.ಸುನೀಲಕುಮಾರ ಕಾರ್ಕಳ – ದಕ್ಷಿಣ ಕನ್ನಡ
ಹಾಲಪ್ಪ ಆಚಾರ– ಧಾರವಾಡ
ಶಂಕರ ಮುನೇನಕೊಪ್ಪ – ರಾಯಚೂರು
ವಿ. ಮುನಿರತ್ನ – ಕೋಲಾರ
ಆರ್. ಅಶೋಕ- ಮಂಡ್ಯ
ವಿಜಯಪುರ – ಜಿಲ್ಲಾಧಿಕಾರಿ
ಗದಗ – ಜಿಲ್ಲಾಧಿಕಾರಿ
ಬೀದರ – ಜಿಲ್ಲಾಧಿಕಾರಿ
ಚಿಕ್ಕಮಗಳೂರು – ಜಿಲ್ಲಾಧಿಕಾರಿ

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ನನ್ನ ಬಳಿ ಹಣವಿಲ್ಲ : ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement