ಎಸ್‌ಬಿಐ ಸೇರಿ ಹಲವು ಬ್ಯಾಂಕುಗಳಿಂದ ಎಟಿಎಂ ವಿತ್‌ಡ್ರಾ ಶುಲ್ಕ ಹೆಚ್ಚಳ : ಹೊಸ ದರಗಳನ್ನು ಪರಿಶೀಲಿಸಿ

ನವದೆಹಲಿ: ಎಲ್ಲಾ ಬ್ಯಾಂಕುಗಳು ತಮ್ಮ ಸೌಲಭ್ಯಗಳನ್ನು ಒದಗಿಸಲು ಶುಲ್ಕವನ್ನು ವಿಧಿಸುತ್ತವೆ. ಶುಲ್ಕ ವಿಧಿಸಬಹುದಾದ ಅಂತಹ ಒಂದು ಸೇವೆ ಎಟಿಎಂ ಹಿಂಪಡೆಯುವಿಕೆ. ಆದರೆ ಉಚಿತ ಮಿತಿಗಳ ನಂತರ ಮಾತ್ರ ಅವು ಗ್ರಾಹಕರಿಗೆ ಶುಲ್ಕ ವಿಧಿಸುತ್ತವೆ. ಹಲವಾರು ಬ್ಯಾಂಕ್‌ಗಳು ಎಟಿಎಂ ಬಳಸುವ ಶುಲ್ಕವನ್ನು ಹೆಚ್ಚಿಸಿವೆ. ಪರಿಣಾಮವಾಗಿ, ಗ್ರಾಹಕರು ಪ್ರತಿ ತಿಂಗಳು ಉಚಿತ ವಹಿವಾಟಿನ ಮಿತಿಯನ್ನು ಮೀರಿ ಎಟಿಎಂ ಸೇವೆಗಳನ್ನು ಬಳಸಲು ಹೆಚ್ಚಿನ ಹಣವನ್ನು ಪಾವತಿಸಬೇಕಾಗುತ್ತದೆ. ಖಾತೆಯ ಪ್ರಕಾರವನ್ನು ಅವಲಂಬಿಸಿ ಈ ಮಿತಿಯು ಭಿನ್ನವಾಗಿರಬಹುದು.
ಎಸ್‌ಬಿಐ ಸೇರಿದಂತೆ ಹಲವಾರು ಬ್ಯಾಂಕುಗಳು ಗ್ರಾಹಕರಿಗೆ ನೀಡುವ ಸೇವಾ ಶುಲ್ಕ ಏರಿಕೆ ಮಾಡಿದೆ. ಉಚಿತ ವಿತ್‌ಡ್ರಾ ಮಿತಿಯನ್ನು ಮೀರಿದ ಬಳಿಕ ಎಟಿಎಂ ವಿತ್‌ಡ್ರಾ ಶುಲ್ಕವನ್ನು ಹೆಚ್ಚಳ ಮಾಡಿದೆ ಪ್ರತಿ ತಿಂಗಳು ಉಚಿತ ಎಟಿಎಂ ವಿತ್‌ಡ್ರಾ ಮಿತಿ ಮೀರಿದ ಬಳಿಕ ಗ್ರಾಹಕರಿಗೆ ಪ್ರತಿ ಎಟಿಎಂ ವಹಿವಾಟಿಗೆ ಈ ಹಿಂದಿಗಿಂತ ಅಧಿಕ ಶುಲ್ಕವನ್ನು ವಿಧಿಸಲಾಗುತ್ತದೆ. ಖಾತೆಯನ್ನು ಆಧರಿಸಿ ಈ ಶುಲ್ಕವನ್ನು ವಿಧಿಸಲಾಗುತ್ತದೆ ಎಂದು ZEEbiz.com ವರದಿ ಮಾಡಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ)
ತನ್ನ ಎಟಿಎಂ ಸೇವೆಗೆ ಮಾಸಿಕವಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಪ್ರತಿ ಪ್ರದೇಶದಲ್ಲಿ ಐದು ಉಚಿತ ವಿತ್‌ಡ್ರಾ ಅವಕಾಶವನ್ನು ನೀಡುತ್ತದೆ. ಮುಂಬೈ, ನವದೆಹಲಿ, ಚೆನ್ನೈ, ಕೋಲ್ಕತ್ತಾ, ಬೆಂಗಳೂರು ಮತ್ತು ಹೈದರಾಬಾದ್‌ನಂತಹ ಪ್ರಮುಖ ನಗರಗಳಲ್ಲಿನ ಇತರ ಬ್ಯಾಂಕ್ ಎಟಿಎಂಗಳಲ್ಲಿ, ವಿತ್‌ಡ್ರಾ ಮಾಡುವುದಾದರೆ ಮೂರು ಬಾರಿ ಮಾತ್ರ ವಿತ್‌ಡ್ರಾ ಮಾಡಲು ಉಚಿತ ಅವಕಾಶವಿದೆ. ಉಚಿತ ಮಿತಿಯನ್ನು ಮೀರಿದ ಬಳಿಕ ಎಸ್‌ಬಿಐ ತನ್ನ ಎಟಿಎಂನಿಂದ ಹಣ ವಿತ್‌ಡ್ರಾ ಮಾಡಲು ಹತ್ತು ರೂ.ಗಳು ಹಾಗೂ ಬೇರೆ ಬ್ಯಾಂಕ್‌ನಲ್ಲಿ ಹಣ ವಿತ್‌ಡ್ರಾ ಮಾಡಲು 20 ರೂ.ಗಳಷ್ಟು ಶುಲ್ಕ ವಿಧಿಸಲಾಗುತ್ತದೆ. ಇನ್ನು ಹಣಕಾಸೇತರ ವಹಿವಾಟಿಗೆ ಎಸ್‌ಬಿಐ ಎಟಿಎಂಗಳಲ್ಲಿ 5 ರೂಪಾಯಿ ಹಾಗೂ ಇತರ ಬ್ಯಾಂಕ್ ಎಟಿಎಂಗಳಲ್ಲಿ 8 ರೂಪಾಯಿ ಶುಲ್ಕ ವಿಧಿಸಲಾಗುತ್ತದೆ.

ಪ್ರಮುಖ ಸುದ್ದಿ :-   ಕೋವಿಡ್ ಲಸಿಕೆಗಳಿಗೂ ಹೃದಯಾಘಾತದ ಸಾವುಗಳಿಗೂ ಯಾವುದೇ ಸಂಬಂಧವಿಲ್ಲ; ತಳ್ಳಿಹಾಕಿದ ಏಮ್ಸ್ ವೈದ್ಯರು

ಎಚ್‌ಡಿಎಫ್‌ಸಿ ಬ್ಯಾಂಕ್
ಪ್ರತಿ ತಿಂಗಳು ಎಚ್‌ಡಿಎಫ್‌ಸಿ ಬ್ಯಾಂಕ್ ತಮ್ಮ ಬ್ಯಾಂಕ್‌ನ ಎಟಿಎಂನಿಂದ ಐದು ಬಾರಿ ಉಚಿತವಾಗಿ ವಿತ್‌ಡ್ರಾ ಮಾಡುವ ಅವಕಾಶವನ್ನು ಗ್ರಾಹಕರಿಗೆ ನೀಡಿದೆ. ನಗರ ಪ್ರದೇಶದಲ್ಲಿ 3 ಹಾಗೂ ಮೆಟ್ರೋಯೇತರ ಪ್ರದೇಶದಲ್ಲಿ ಐದು ಬಾರಿ ಉಚಿತ ಎಟಿಎಂ ವಹಿವಾಟು ನಡೆಸಬಹುದು. ಅದಾದ ಬಳಿಕ ಎಟಿಎಂನಲ್ಲಿ ನಡೆಸುವ ಹಣಕಾಸು ವಹಿವಾಟಿಗೆ 21 ರೂಪಾಯಿ ಪ್ಲಸ್ ತೆರಿಗೆ ವಿಧಿಸಲಾಗುತ್ತದೆ. ಹಣಕಾಸೇತರ ವಹಿವಾಟಿಗೆ 8.50 ರೂಪಾಯಿ ಹಾಗೂ ತೆರಿಗೆಯನ್ನು ವಿಧಿಸಲಾಗುತ್ತದೆ.

ಐಸಿಐಸಿಐ ಬ್ಯಾಂಕ್
ಆರು ಮೆಟ್ರೋ ಪ್ರದೇಶಗಳಲ್ಲಿ, ಐಸಿಐಸಿಐ ಬ್ಯಾಂಕ್ 5 ಮತ್ತು 3 ಉಚಿತ ವಿತ್‌ಡ್ರಾ ಮಿತಿಯನ್ನು ಹೊಂದಿದೆ. ಐಸಿಐಸಿಐ ಬ್ಯಾಂಕ್‌ನ ಎಟಿಎಂನಿಂದಲೇ ಮಾಸಿಕವಾಗಿ ಐದು ಬಾರಿ ಉಚಿತವಾಗಿ ವಿತ್‌ಡ್ರಾ ಮಾಡಲು ಅವಕಾಶವಿದೆ. ಆದರೆ ಇತರೆ ಬ್ಯಾಂಕ್‌ಗಳಲ್ಲಿ ಮಾಸಿಕವಾಗಿ ಮೂರು ಬಾರಿ ಮಾತ್ರ ವಿತ್‌ಡ್ರಾ ಮಾಡುವ ಅವಕಾಶವಿದೆ. ಉಚಿತ ಮಿತಿ ಮುಗಿದ ಬಳಿಕ ಬ್ಯಾಂಕ್ ಪ್ರತಿ ಹಣಕಾಸು ವಹಿವಾಟಿಗೆ 20 ರೂಪಾಯಿ ಶುಲ್ಕವನ್ನು ವಿಧಿಸುತ್ತದೆ. ಪ್ರತಿ ಹಣಕಾಸೇತರ ವಹಿವಾಟಿಗೆ ಬ್ಯಾಂಕ್ 8.50 ರೂ. ಶುಲ್ಕವನ್ನು ವಿಧಿಸುತ್ತದೆ. ಈ ಶುಲ್ಕಗಳು ಐಸಿಐಸಿಐ ಬ್ಯಾಂಕ್ ಎಟಿಎಂಗಳು ಮತ್ತು ಇತರ ಬ್ಯಾಂಕ್‌ಗಳ ಎಟಿಎಂನಲ್ಲಿ ಮಾಡುವ ವಿತ್‌ಡ್ರಾ ಎರಡಕ್ಕೂ ಅನ್ವಯವಾಗುತ್ತದೆ.

ಪ್ರಮುಖ ಸುದ್ದಿ :-   ಅಪ್ರಾಪ್ತ ವಿದ್ಯಾರ್ಥಿಗೆ ಮದ್ಯ ಕುಡಿಸಿ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಮುಂಬೈ ಶಿಕ್ಷಕಿ...! ಆತಂಕ ನಿವಾರಕ ಮಾತ್ರೆಯನ್ನೂ ನೀಡುತ್ತಿದ್ದಳಂತೆ

ಆಕ್ಸಿಸ್ ಬ್ಯಾಂಕ್
ಆಕ್ಸಿಸ್‌ ಬ್ಯಾಂಕ್‌ನಲ್ಲಿ ತನ್ನದೇ ಆದ ಎಟಿಎಂನಲ್ಲಿ ವಿತ್‌ಡ್ರಾ ಮಾಡುವುದಾದರೆ ಮಾಸಿಕವಾಗಿ ಐದು ಬಾರಿ ಉಚಿತ ವಹಿವಾಟು ಮಿತಿ ಇದೆ. ಆದರೆ ಬೇರೆ ಬ್ಯಾಂಕ್‌ನ ಎಟಿಎಂನಿಂದ ಮಾಸಿಕವಾಗಿ ಮೂರು ಬಾರಿ ಮಾತ್ರ ವಿತ್‌ಡ್ರಾ ಮಾಡಲು ಅವಕಾಶವಿದೆ. ಈ ಉಚಿತ ವಹಿವಾಟು ಮುಗಿದ ಬಳಿಕ, ಆಕ್ಸಿಸ್ ಬ್ಯಾಂಕ್‌ನ ಅಥವಾ ಬೇರೆ ಯಾವುದೇ ಎಟಿಎಂಗಳಲ್ಲಿ ನಡೆಸುವ ವಹಿವಾಟಿಗೆ 21 ರೂಪಾಯಿ ಶುಲ್ಕವನ್ನು ವಿಧಿಸಲಾಗುತ್ತದೆ. ಹಣಕಾಸೇತರ ವಹಿವಾಟಿಗೆ 10 ರೂಪಾಯಿ ಶುಲ್ಕವನ್ನು ವಿಧಿಸಲಾಗುತ್ತದೆ.

ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ)
ಪಂಜಾಬ್ ನ್ಯಾಷನಲ್ ಬ್ಯಾಂಕ್ ತನ್ನದೇ ಎಟಿಎಂನಲ್ಲಿ ಐದು ಬಾರಿ ಉಚಿತವಾಗಿ ವಹಿವಾಟು ನಡೆಸುವ ಅವಕಾಶವನ್ನು ನೀಡುತ್ತದೆ. ಹಾಗೂ ಬೇರೆ ಬ್ಯಾಂಕ್‌ನಲ್ಲಿ ಮಾಸಿಕವಾಗಿ ಮೂರು ಬಾರಿ ಉಚಿತ ಎಟಿಎಂ ವಿತ್‌ಡ್ರಾ ಅವಕಾಶವನ್ನು ನೀಡುತ್ತದೆ. ಇದು ಮೆಟ್ರೋ ನಗರಗಳಿಗೆ ಅನ್ವಯವಾಗುತ್ತದೆ. ಈ ಉಚಿತ ವಹಿವಾಟಿನ ಮಿತಿಯ ಬಳಿಕ ತನ್ನದೇ ಬ್ಯಾಂಕ್‌ನ ಎಟಿಎಂಗಳಲ್ಲಿ ನಡೆಸುವ ಎಲ್ಲ ವಹಿವಾಟಿಗೆ ಬ್ಯಾಂಕ್ 10 ರೂಪಾಯಿ ಶುಲ್ಕವನ್ನು ವಿಧಿಸುತ್ತದೆ. ಬೇರೆ ಬ್ಯಾಂಕ್‌ಗಳಲ್ಲಿ ನಡೆಸುವ ಹಣಕಾಸು ವಹಿವಾಟಿಗೆ ಪಿಎನ್‌ಬಿ 20 ರೂಪಾಯಿ ಶುಲ್ಕವನ್ನು ವಿಧಿಸುತ್ತದೆ. ಹಣಕಾಸೇತರ ವಹಿವಾಟಿಗೆ 9 ರೂಪಾಯಿ ಶುಲ್ಕ ವಿಧಿಸುತ್ತದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement