67 ಸಾಧಕರಿಗೆ 2022ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ

ಬೆಂಗಳೂರು: ರಾಜ್ಯ ಸರ್ಕಾರ 2022-23ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಇಂದು, ಭಾನುವಾರ(ಅಕ್ಟೋಬರ್‌ 30) ಪ್ರಕಟಿಸಿದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಒಟ್ಟು 67 ಸಾಧಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ನವೆಂಬರ್‌ 1ರಂದು ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
2022ನೇ ಸಾಲಿನ ಕನ್ನಡ ರಾಜೋತ್ಸವ ಪ್ರಶಸ್ತಿಗೆ ಅರ್ಹ ಮಹನೀಯರನ್ನುಆಯ್ಕೆ ಮಾಡಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯ್ಕೆ ಸಲಹಾ ಸಮಿತಿಯನ್ನು ರಚಿಸಿತ್ತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ ಸುನಿಲ್ ಕುಮಾರ್ ಅಧ್ಯಕ್ಷತೆಯಲ್ಲಿ ಪ್ರಸಕ್ತ ಸಾಲಿನ ರಾಜೋತ್ಸವ ಪ್ರಶಸ್ತಿಗೆ ನಾನಾ ಕ್ಷೇತ್ರದ ಸಾಧಕರನ್ನು ಆಯ್ಕೆ ಮಾಡಲು ಸಮಿತಿಯನ್ನು ರಚಿಸಲಾಗಿತ್ತು.
ಸಿಎಂ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ಪ್ರಶಸ್ತಿ ಆಯ್ಕೆ ಕುರಿತಂತೆ ಅಂತಿಮ ಸಭೆ ನಡೆದಿತ್ತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಯ್ಕೆ ಸಲಹಾ ಸಮಿತಿ ನಾನಾ ಕ್ಷೇತ್ರಗಳ ಗಣ್ಯರನ್ನು 1:2 ಅನುಪಾತದಲ್ಲಿ 134 ಜನರ ಪಟ್ಟಿ ಸಿದ್ಧಪಡಿಸಿ ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಗಿತ್ತು.

2022-23ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದ 67 ಜನರ ಪಟ್ಟಿ ಈ ಕೆಳಗಿನಂತಿದೆ
ಸಂಕೀರ್ಣ
ಸುಬ್ಬರಾಮ ಶೆಟ್ಟಿ ಆರ್.ಎ. ಸಂಸ್ಥೆಗಳು ಬೆಂಗಳೂರು, ಸೋಲಿಗರ ಮಾದಮ್ಮ, (ಚಾಮರಾಜನಗರ).
ಸೈನಿಕ
ಸುಬೇದಾರ್ ಬಿ.ಕೆ. ಕುಮಾರಸ್ವಾಮಿ (ಬೆಂಗಳೂರು),
ಪತ್ರಿಕೋದ್ಯಮ
ಹೆಚ್.ಆರ್ ಶ್ರೀಶಾ ಬೆಂಗಳೂರು, ಜಿಎಂ ಶಿರಹಟ್ಟಿ (ಗದಗ).
ವಿಜ್ಞಾನ – ತಂತ್ರಜ್ಞಾನ
ಕೆ. ಶಿವನ್ ಬೆಂಗಳೂರು, ಡಾ. ಬಿ.ಆರ್ ಬಳೂರಗಿ (ರಾಯಚೂರು).
ಕೃಷಿ
ಗಣೇಶ್ ತಿಮ್ಮಯ್ಯ(ಕೊಡಗು), ಚಂದ್ರಶೇಖರ್ ನಾರಾಯಣಪುರ (ಚಿಕ್ಕಮಗಳೂರು)
ಪರಿಸರ
ಸಾಲುಮರದ ನಿಂಗಣ್ಣ(ರಾಮನಗರ)
ಪೌರಕಾರ್ಮಿಕ
ಮಲ್ಲಮ್ಮ ಹೂವಿನಹಡಗಲಿ (ವಿಜಯನಗರ)
ಆಡಳಿತ
ಡಾ. ಎಲ್. ಎಚ್. ಮಂಜುನಾಥ್ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ(ಶಿವಮೊಗ್ಗ), ಮದನ್ ಗೋಪಾಲ್(ಬೆಂಗಳೂರು)
ಹೊರನಾಡು
ದೇವಿದಾಸ ಶೆಟ್ಟಿ (ಮುಂಬೈ), ಅರವಿಂದ ಪಾಟಿಲ್ (ಹೊರನಾಡು), ಕೃಷ್ಣಮೂರ್ತಿ ಮಾಂಜಾ (ತೆಲಂಗಾಣ)
ಹೊರದೇಶ
ರಾಜ್‍ಕುಮಾರ್ (ಗಲ್ಫ್ ರಾಷ್ಟ್ರ)
ವೈದ್ಯಕೀಯ
ಡಾ. ಎಚ್.ಎಸ್. ಮೋಹನ್ (ಶಿವಮೊಗ್ಗ), ಡಾ. ಬಸವಂತಪ್ಪ (ದಾವಣಗೆರೆ)
ಸಮಾಜಸೇವೆ
ರವಿ ಶೆಟ್ಟಿ (ದಕ್ಷಿಣ ಕನ್ನಡ), ಸಿ.ಕರಿಯಪ್ಪ (ಬೆಂಗಳೂರು ಗ್ರಾಮಾಂತರ), ಎಂ.ಎಸ್. ಕೋರಿ ಶೆಟ್ಟರ್ (ಹಾವೇರಿ), ಡಿ. ಮಾದೇಗೌಡ (ಮೈಸೂರು), ಬಿಲಬೀರ್ ಸಿಂಗ್ (ಬೀದರ್)
ವಾಣಿಜ್ಯೋದ್ಯಮ
ಬಿ.ವಿ.ನಾಯ್ಡು (ಬೆಂಗಳೂರು), ಜಯರಾಮ ಬನಾನ್ (ಉಡುಪಿ), ಜಿ. ಶ್ರೀನಿವಾಸ್ (ಕೋಲಾರ್)
ರಂಗಭೂಮಿ
ತಿಪ್ಪಣಿ ಹೆಳವರ್ (ಯಾದಗಿರಿ), ಲಲಿತಾಬಾಯಿ ಚನ್ನದಾಸರ (ವಿಜಯಪುರ), ಗುರುನಾಥ್ ಹೂಗಾರ (ಕಲಬುರಗಿ), ಪ್ರಭಾಕರ ಜೋಶಿ – ತಾಳಮದ್ದಳೆ- ಯಕ್ಷಗಾನ (ಉಡುಪಿ), ಶ್ರೀಶೈಲ ಹುದ್ದಾರ್ (ಹಾವೇರಿ)
ಸಂಗೀತ
ನಾರಾಯಣ ಎಂ (ದಕ್ಷಿಣ ಕನ್ನಡ), ಅನಂತಾಚಾರ್ಯ ಬಾಳಾಚಾರ್ಯ (ಧಾರವಾಡ) ಅಂಜಿನಪ್ಪ ಸತ್ಯಾಡಿ ಮುಖವೀಣೆ ಕಲಾವಿದ (ಚಿಕ್ಕಬಳ್ಳಾಪುರ), ಅನಂತ ಕುಲಕರ್ಣಿ (ಬಾಗಲಕೋಟೆ)
ಜಾನಪದ
ಸಹಮದೇವಪ್ಪ ಈರಪ್ಪ ನಡಿಗೇರ್ (ಉತ್ತರ ಕನ್ನಡ), ಗುಡ್ಡ ಪಾಣಾರ-ದೈವ ನರ್ತಕ (ಉಡುಪಿ), ಕಮಲಮ್ಮ, ಸೂಲಗಿತ್ತಿ (ರಾಯಚೂರು), ಸಾವಿತ್ರಿ ಪೂಜಾರ್ (ಧಾರವಾಡ), ರಾಚಯ್ಯ ಸಾಲಿಮಠ್ (ಬಾಗಲಕೋಟೆ), ಮಹೇಶ್ವರ ಗೌಡ ಲಿಂಗದಹಳ್ಳಿ- ವೀರಗಾಸೆ (ಹಾವೇರಿ)
ಶಿಲ್ಪ ಕಲೆ
ಪರಶುರಾಮ್ ಪವಾರ್ ರಥಶಿಲ್ಪಿ (ಬಾಗಲಕೋಟೆ), ಹನುಮಂತಪ್ಪ ಬಾಳಪ್ಪ ಹುಕ್ಕೇರಿ (ಬೆಳಗಾವಿ)
ಚಿತ್ರಕಲೆ
ಸಣ್ಣರಂಗಪ್ಪ ಚಿತ್ರಕಾರ್ – ಕಿನ್ನಾಳ ಕಲೆ (ಕೊಪ್ಪಳ)
ಚಲನಚಿತ್ರ
ದತ್ತಣ್ಣ(ಚಿತ್ರದುರ್ಗ), ಅವಿನಾಶ್ (ಬೆಂಗಳೂರು)
ಕಿರುತರೆ
ಸಿಹಿ ಕಹಿ ಚಂದ್ರು(ಬೆಂಗಳೂರು)
ಯಕ್ಷಗಾನ
ಸುಬ್ರಹ್ಮಣ ಧಾರೇಶ್ವರ (ಉತ್ತರ ಕನ್ನಡ), ಎಂ.ಎ.ನಾಯಕ್ (ಉಡುಪಿ), ಸರಪಾಡಿ ಅಶೋಕ್ ಶೆಟ್ಟಿ (ದಕ್ಷಿಣ ಕನ್ನಡ)
ಬಯಲಾಟ
ಅಡವಯ್ಯ ಚ ಹಿರೇಮಠ (ದೊಡ್ಡಾಟ) (ಧಾರವಾಡ), ಶಂಕರಪ್ಪ ಮಲ್ಲಪ್ಪ ಹೊರಪೇಟೆ (ಕೊಪ್ಪಳ) ಹೆಚ್. ಪಾಂಡುರಂಗಪ್ಪ(ಬಳ್ಳಾರಿ)
ಸಾಹಿತ್ಯ
ಶಂಕರ ಚಚಡಿ (ಬೆಳಗಾವಿ), ಕೃಷ್ಣೆಗೌಡ (ಮೈಸೂರು), ಅಶೋಕ್ ಬಾಬು ನೀಲಗಾ (ಬೆಳಗಾವಿ), ಪ್ರೊ. ಅ.ರಾ. ಮಿತ್ರ(ಹಾಸನ), ರಾಮಕೃಷ್ಣ ಮರಾಠೆ (ಕಲಬುರಗಿ)
ಶಿಕ್ಷಣ
ಕೋಟಿ ರಂಗಪ್ಪ(ತುಮಕೂರು), ಡಾ. ಎಂ.ಜಿ. ನಾಗರಾಜ್ ಸಂಶೋಧಕರು (ಬೆಂಗಳೂರು)
ಕ್ರೀಡೆ
ದತ್ತಾತ್ರೇಯ ಗೋವಿಂದ ಕುಲಕರ್ಣಿ(ಧಾರವಾಡ), ರಾಘವೇಂದ್ರ ಅಣ್ಣೇಕರ್ (ಬೆಳಗಾವಿ)
ನ್ಯಾಯಾಂಗ
ವೆಂಕಟಾಚಲಪತಿ (ಬೆಂಗಳೂರು), ನಂಜುಂಡ ರೆಡ್ಡಿ(ಬೆಂಗಳೂರು)
ನೃತ್ಯ
ಕಮಲಾಕ್ಷಾಚಾರ್ಯ (ದಕ್ಷಿಣ ಕನ್ನಡ)
ಸಂಸ್ಥೆಗಳು:
ರಾಮಕೃಷ್ಣ ಆಶ್ರಮ (ಮೈಸೂರು), ಲಿಂಗಾಯುತ ಪ್ರಗತಿಶೀಲ ಸಂಸ್ಥೆ (ಗದಗ), ಅಗಡಿ ತೋಟ(ಹಾವೇರಿ), ತಲಸೇಮಿಯಾ ಮತ್ತು ಹೀಮೋಫೀಲಿಯ ಸೊಸೈಟಿ(ಬಾಗಲಕೋಟೆ), ಅಮ್ಮತ ಶಿಶು ನಿವಾಸ (ಬೆಂಗಳೂರು), ಸುಮನಾ ಫೌಂಡೇಷನ್ (ಬೆಂಗಳೂರು), ಯುವ ವಾಹಿನಿ ಸಂಸ್ಥೆ (ದಕ್ಷಿಣಕನ್ನಡ), ನೆಲೆ ಫಂಡೇಶನ್- ಅನಾಥ ಮಕ್ಕಳ ಪುನರ್ವಸತಿ ಕೇಂದ್ರ (ಬೆಂಗಳೂರು), ನಮ್ಮನೆ ಸುಮ್ಮನೆ- ನಿರಾಶ್ರಿತ ಆಶ್ರಮ (ಮಂಗಳಮುಖಿ ಸಂಸ್ಥೆ) (ಬೆಂಗಳೂರು), ಉಮಾಮಹೇಶ್ವರಿ ಹಿಂದುಳಿದ ವರ್ಗ ಅಭಿವದ್ಧಿ ಟ್ರಸ್ಟ್ (ಮಂಡ್ಯ)

ಪ್ರಮುಖ ಸುದ್ದಿ :-   ರಾಜ್ಯದ ವಿಧಾನ ಪರಿಷತ್ತಿನ 6 ಸ್ಥಾನಗಳಿಗೆ ಚುನಾವಣೆ ಘೋಷಣೆ

3 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement