ಕನ್ನಡ ರಾಜ್ಯೋತ್ಸವದಂದು 150 ಕಿಮೀ ದೂರ ಪುನೀತ್‌ ಸವಾರಿ

ಬೆಂಗಳೂರು : ಕನ್ನಡ ರಾಜ್ಯೋತ್ಸವ ದಿನವಾದ ನವೆಂಬರ್‌ 1ರಂದು ಕರ್ನಾಟಕದ ಕಣ್ಮಣಿ ಪುನೀತ್‌ ರಾಜಕುಮಾರ ಅವರ ಸ್ಮರಣಾರ್ಥ “ಪುನೀತ ಸವಾರಿ ” ಹೆಸರಿನಲ್ಲಿ ೧೫೦ ಕಿಮೀ ಸೈಕಲ್‌ ಯಾತ್ರೆ ಬೆಂಗಳೂರಿನಿಂದ ನಡೆಯಿತು.
ಬೆಂಗಳೂರಿನಿಂದ ಪ್ರವಾಸಿ ತಾಣ ನಂದಿ ಬೆಟ್ಟಕ್ಕೆ ೧೫೦ ಕಿಮೀ ದೂರದ ವರೆಗೆ “ಪುನೀತ ಸವಾರಿ ” ಎಂಬ ಹೆಸರಿನಲ್ಲಿ ಸೈಕಲ್ ಸವಾರಿ ನಡೆಸಲಾಯಿತು. ಸೈಕಲ್ ಸವಾರಿ ತಂಡದಲ್ಲಿ ಮಂಜುನಾಥ ಯಾಜಿ, ಅರುಣ್ ಬೇಬಿ, ಸಂದೀಪ ಮತ್ತು ಹೇಮಂತ ಇದ್ದರು. ಪುನೀತ ಅವರಿಗೆ ಸೈಕಲ್‌ ಸವಾರಿಯೆಂದರೆ ಅಚ್ಚುಮೆಚ್ಚು. ಅಲ್ಲದೇ ನಂದಿಬೆಟ್ಟಕ್ಕೆ ಹೋಗುವುದೆಂದರೆ ಅವರಿಗೆ ಅತಿ ಪ್ರೀತಿಯಾಗಿತ್ತು. ಹೀಗಾಗಿ ಸೈಕಲ್‌ ಹಾಗೂ ನಂದಿಬೆಟ್ಟ ಎರಡನ್ನೂ ಜೋಡಿಸಿ ಪುನೀತ್‌ ಸವಾರಿ ನಡೆಯಿತು. ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನಂದಿ ಬೆಟ್ಟದಲ್ಲಿ ಕನ್ನಡ ಧ್ವಜಕ್ಕೆ ವಿಶೇಷ ಗೌರವ ಸಲ್ಲಿಸಲಾಯಿತು.

4 / 5. 2

ನಿಮ್ಮ ಕಾಮೆಂಟ್ ಬರೆಯಿರಿ

advertisement