ಯಲ್ಲಾಪುರ: ತೂಗು ಸೇತುವೆ ಮೇಲೆ ಕಾರು ಚಾಲನೆ, ದರ್ಪದ ವರ್ತನೆಗೆ ಸ್ಥಳೀಯರ ಆಕ್ಷೇಪ | ವೀಕ್ಷಿಸಿ

posted in: ರಾಜ್ಯ | 0

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಶಿವಪುರ ಗ್ರಾಮಕ್ಕೆ ಅಡ್ಡಲಾಗಿ ಕೊಟ್ಟಿರುವ ತೂಗು ಸೇತುವೆ ಮೇಲೆ ಅಪರಿಚಿತರು ಸೋಮವಾರ ಕಾರನ್ನು ಚಲಾಯಿಸಿಕೊಂಉ ಬಂದಿದ್ದಲ್ಲದೆ ಇದಕ್ಕೆ ಆಕ್ಷೇಪಿಸದ ಸ್ಥಳೀಯರ ಜೊತೆ ದರ್ಪ ತೋರಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಇದೇ ರೀತಿ ಬಂದವರನ್ನು ವಾಪಸ್‌ ಕಳುಹಿಸಿದ್ದಾರೆ. ಹಾಗೂ ಯಾವುದೇ ಕಾರಣಕ್ಕೂ ತೂಗು ಸೇತುವೆ ಮೇಲೆ ಕಾರು ಮೊದಲಾದ ನಾಲ್ಕು ಚಕ್ರ ವಾಹನಗಳನ್ನು ತರಬೇಡಿ ಎಂದು ಹೇಳಿದ್ದಾರೆ.
ಗುಜರಾತಿ ಮೊರ್ಬಿ ತೂಗು ಸೇತುವೆ ದುರಂತದ ನಂತರ ಜಾಗೃತರಾಗಿರುವ ಸ್ಥಳೀಯರು ಇಂಥದ್ದಕ್ಕೆ ಆಡಳಿತ ಅವಕಾಶ ನೀಡದೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಉಳಿವಿಯಿಂದ ಬರುವ ಅನೇಕ ಜನರು ಶಿವಪುರದ ತೂಗು ಸೇತುವೆಯನ್ನು ನೋಡಿಕೊಂಡು ಹೋಗುತ್ತಾರೆ ಇಂಥವರಲ್ಲಿ ಕೆಲವರು ಅದರಲ್ಲಿಯೇ ಕಾರನ್ನು ತರುತ್ತಾರೆ. ಕಾರು ಓಡಾಡುವುದಕ್ಕೆ ಮಾಡಿಲ್ಲ ಎಂದು ಹೇಳಿದ್ದಾರೆ.

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 98867 84189

ಕಾರು ತರಬಾರದೆಂದು ಹಿರಿಯರು ಕಿವಿಮಾತು ಹೇಳಿದರೂ ಕೇಳದೆ ಸಹ ಧಿಕ್ಕರಿಸಿ ದರ್ಪವನ್ನು ತೋರುತ್ತಾರೆ. ತೂಗು ಸೇತುವೆ ನಿರ್ವಹಣೆ ಇಲ್ಲದೆ ಶಿಥಿಲವಾದ ಸಂದರ್ಭದಲ್ಲಿ ಸ್ಥಳೀಯರು ಜಿಲ್ಲಾಡಳಿತಧ ಮುಂದೆ ಮನವಿ ಮಾಡಿಕೊಂಡ ನಂತರ ಸೇತುವೆಯ ನಿರ್ವಹಣೆಯನ್ನು ಮಾಡಲಾಗಿದೆ. ಭಾರವಾದ ವಾಹನಗಳು ಸೇತುವೆ ಏನಾಗಬೇಡ..? ಅಲ್ಲದೆ ಈ ತೂಗು ಸೇತುವೆಯಲ್ಲಿ ಕಾರು ಬಂದರೆ ನಡೆದುಕೊಂಡು ಹೋಗಲು ಸ್ಥಳವೇ ಇರುವುದಿಲ್ಲ. ಇದು ಅಷ್ಟೊಂದು ಇಕ್ಕಟ್ಟಾಗಿದೆ. ಇಂಥ ಸಂದರ್ಭದಲ್ಲಿ ಹೀಗೆಲ್ಲ ಬೇಕಾಬಿಟ್ಟಿ ವರ್ತನೆ ಮಾಡುವುದ ಸರಿಯಲ್ಲ ಎಂದು ಆಕ್ಷೇಪಿಸಿದ್ದಾರೆ.

ಹೀಗೆಲ್ಲ ಮಾಡಿದರೆ ಗುಜರಾತಿನ ಮೊರ್ಬಿ ಸೇತುವೆ ಕುಸಿದಂತೆ ಈ ತೂಗು ಸೇತುವೆಯೂ ಕುಸಿದರೆ ಅದಕ್ಕೆ ಹೊಣೆ ಯಾರು..? ಅದು ಹಾಳಾದರೆ ಇದರಲ್ಲೇ ಓಡಾಡಿಕೊಂಡು ಬದುಕು ಕಟ್ಟಿಕೊಂಡ ಸ್ಥಳೀಯರು ಏನು ಮಾಡಬೇಕು ಎಂದು ಪ್ರಶ್ನಿಸಿದ್ದಾರೆ. ತೂಗು ಸೇತುವೆ ಹಾಳಾಗುವ ಮೊದಲೇ ಈ ರೀತಿ ಸೇತುವೆ ಮೇಲೆ ಕಾರು ಚಲಾಯಿಸಿಕೊಂಡು ಬರುವವರ ವಿರುದ್ಧ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಇಂದಿನ ಪ್ರಮುಖ ಸುದ್ದಿ :-   ಕಿತ್ತೂರು ತಹಶೀಲ್ದಾರ ಲೋಕಾಯುಕ್ತ ಬಲೆಗೆ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

4 / 5. ಒಟ್ಟು ವೋಟುಗಳು 4

ನಿಮ್ಮ ಕಾಮೆಂಟ್ ಬರೆಯಿರಿ

advertisement