ರಥೋತ್ಸವದ ವೇಳೆ ಮಗುಚಿ ಬಿದ್ದ ವೀರಭದ್ರ ಸ್ವಾಮಿ ರಥ

posted in: ರಾಜ್ಯ | 0

ಕೊಳ್ಳೇಗಾಲ : ಚಾಮರಾಜನಗರ ತಾಲೂಕಿನ ಅಮಚವಾಡಿ ಸಮೀಪದ ಚನ್ನಪ್ಪನಪುರದ ವೀರಭದ್ರ ಸ್ವಾಮಿ ರಥೋತ್ಸವದ ವೇಳೆ ರಥ ಮಗುಚಿ ಘಟನೆ ನಡೆದಿದ್ದು, ಯಾವುದೇ ಅನಾಹುತ ಸಂಭವಿಸಿಲ್ಲ.
ಚೆನ್ನಪ್ಪನ ಪುರದ ಬೆಟ್ಟದ ಮೇಲಿರುವ ವೀರಭದ್ರ ಸ್ವಾಮಿ ರಥೋತ್ಸವ ಇಂದು, ಮಂಗಳವಾರ ಹರ್ಷೋದ್ಗಾರದ ನಡುವೆ ನಡೆಯುತ್ತಿತ್ತು. ಜಾತ್ರೆಗೆ ಸುತ್ತಮುತ್ತಲಿನ ಗ್ರಾಮಗಳ ಜನ ಸೇರಿದ್ದರು. ಈ ವೇಳೆ ಭಕ್ತರು ರಥವನ್ನು ಎಳೆಯುತ್ತದ್ದ ಸಂದರ್ಭದಲ್ಲಿ ರಥದ ಒಂದು ಭಾಗ ಸಡಿಲಗೊಂಡು ಬಾಗಲು ಶುರುವಾಗಿದೆ.

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 98867 84189

ರಥ ಬಾಗುತ್ತಿರುವುದನ್ನು ಅರಿತ ಜನ ದೂರ ಸರಿದಿದ್ದಾರೆ. ನಂತರ ರಥ ಮುಂದಡಿಯಾಗಿ ಮುಗುಚಿ ಬಿದ್ದಿದೆ. ಘಟನೆಯಿಂದ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ವರದಿಯಾಗಿದೆ. ಆದರೆ ರಥ ಮಗುಚಿ ಬಿದ್ದ ಪರಿಣಾಮ ಜನರಲ್ಲಿ ಆತಂಕ ಭಯ ಮನೆ ಮಾಡಿದೆ.
ಮುಜರಾಯಿ ಇಲಾಖೆಗೆ ಸೇರಿದ ಚಾಮರಾಜನಗರ ತಾಲೂಕಿನ ಚನ್ನಪ್ಪನ ಪುರದ ವೀರಭದ್ರ ಸ್ವಾಮಿ ರಥೋತ್ಸವ ಪ್ರತಿವರ್ಷ ಕಾರ್ತಿಕ ಮಾಸದಲ್ಲಿ ನಡೆಯುತ್ತದೆ. ಅದರಂತೆ ಈ ಬಾರಿಯೂ ಸಹ ದೇವಸ್ಥಾನದಲ್ಲಿ ರಥೋತ್ಸವ ಹಮ್ಮಿಕೊಳ್ಳಲಾಗಿತ್ತು. ರಥೋತ್ಸವದ ವೇಳೆ ಈ ಅವಘಡ ಸಂಭವಿಸಿದೆ.

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಇಂದಿನ ಪ್ರಮುಖ ಸುದ್ದಿ :-   ಶಾಲೆಯ ಶಾಕರ್: ‌ ಬೆಂಗಳೂರಿನ ವಿದ್ಯಾರ್ಥಿಗಳ ಬ್ಯಾಗ್ ದಿಢೀರ್ ತಪಾಸಣೆ ವೇಳೆ ಕಾಂಡೋಮ್, ಗರ್ಭನಿರೋಧಕಗಳು, ಮದ್ಯ ಪತ್ತೆ...!

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

3 / 5. ಒಟ್ಟು ವೋಟುಗಳು 1

ನಿಮ್ಮ ಕಾಮೆಂಟ್ ಬರೆಯಿರಿ

advertisement