ಚಲಿಸುವ ರೈಲಿನಿಂದ ಬಿದ್ದ ಮಹಿಳೆ, ಮಗುವಿನ ಪ್ರಾಣ ಉಳಿಸಿದ ಆರ್‌ಪಿಎಫ್‌ ಸಿಬ್ಬಂದಿ | ವೀಕ್ಷಿಸಿ

ಮುಂಬೈ: ಮುಂಬೈನ ಮನ್ಖುರ್ದ್ ರೈಲು ನಿಲ್ದಾಣದಲ್ಲಿ ಚಲಿಸುತ್ತಿದ್ದ ರೈಲಿನಿಂದ ಬಿದ್ದ ಮಹಿಳೆ ಮತ್ತು ಆಕೆಯ ಮಗುವಿನ ಪ್ರಾಣವನ್ನು ರೈಲ್ವೆ ರಕ್ಷಣಾ ಪಡೆಯ (ಆರ್‌ಪಿಎಫ್) ಕ್ರೈಂ ವಿಂಗ್‌ನ ಇಬ್ಬರು ಸಿಬ್ಬಂದಿ ರಕ್ಷಿಸಿದ್ದಾರೆ.
ಜವಾನರ ನಿಸ್ವಾರ್ಥ ಸೇವೆಯನ್ನು ನೆಟ್ಟಿಗರು ಶ್ಲಾಘಿಸಿದ್ದಾರೆ. ರೈಲು ನಿಲ್ದಾಣದಲ್ಲಿ ರೈಲು ಹತ್ತುವಾಗ ಪ್ರಯಾಣಿಕರ ನೂಕುನುಗ್ಗಲು ಉಂಟಾದ ಕಾರಣ ಈ ಘಟನೆ ಸಂಭವಿಸಿದೆ. ಈ ಘಟನೆಯ ದೃಶ್ಯಾವಳಿ ಅಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ.

ಮಹಿಳೆ ರೈಲು ಹತ್ತಲು ಪ್ರಯತ್ನಿಸುತ್ತಿರುವುದನ್ನು ವಿಡಿಯೋದಲ್ಲಿ ತೋರಿಸಲಾಗಿದೆ. ನೂಕುನುಗ್ಗಲಿನ ನಡುವೆ ರೈಲು ಚಲಿಸಿತು ಮತ್ತು ಮಗು ಪ್ಲಾಟ್‌ಫಾರ್ಮ್‌ಗೆ ಬಿತ್ತು. ಮಗು ರೈಲಿನ ಕೆಳಗೆ ಬೀಳುತ್ತಿರುವಾಗ ಒಬ್ಬ ಸಿಬ್ಬಂದಿ ಓಡಿ ಹೋಗಿ ಮಗುವನ್ನು ಹಿಡಿದೆಳೆದು ರಕ್ಷಿಸಿದ್ದಾರೆ.ಇದನ್ನು ನೋಡಿದ ಆಕೆಯ ತಾಯಿ ಕೆಲವೇ ಸೆಕೆಂಡುಗಳಲ್ಲಿ ರೈಲ್ವೆ ಬಾಗಲಿನಿಂದ ಕೆಳಗೆ ಜೋಲಿ ಹೊಡೆದಿದ್ದಾಳೆ. ಇದನ್ನು ಗಮನಿಸಿದ ಮತ್ತೊಬ್ಬ ಸಿಬ್ಬಂದಿ ಅವಳನ್ನು ರಕ್ಷಿಸಿದ್ದಾನೆ.

ಇಬ್ಬರು ಜವಾನರು ತಾಯಿ-ಮಗ ಜೋಡಿಯ ಜೀವವನ್ನು ಉಳಿಸಿದ್ದಾರೆ.ಅವರಿಗೆ ಸೆಲ್ಯೂಟ್” ಎಂದು ಜೈಶಂಕರ್ ಸಿಂಗ್ ಎಂಬ ಟ್ವಿಟರ್ ಬಳಕೆದಾರರು ಬರೆದಿದ್ದಾರೆ. ಏತನ್ಮಧ್ಯೆ, ಹಲವಾರು ಬಳಕೆದಾರರು ಒತ್ತಡದ ನಾಗರಿಕ ಮೂಲಸೌಕರ್ಯವನ್ನು ಸಹ ಗಮನಸೆಳೆದಿದ್ದಾರೆ.

ಪ್ರಮುಖ ಸುದ್ದಿ :-   ಉತ್ತಮ ಪ್ರತಿಕ್ರಿಯೆ, ಜನರು ದಾಖಲೆ ಸಂಖ್ಯೆಯಲ್ಲಿ ಎನ್‌ಡಿಎಗೆ ಮತ ಹಾಕಿದ್ದಾರೆ : ಲೋಕಸಭೆ ಚುನಾವಣೆ 1ನೇ ಹಂತದ ಮತದಾನದ ಬಗ್ಗೆ ಪ್ರಧಾನಿ ಮೋದಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement