ಮದ್ಯದ ಕಳ್ಳಸಾಗಣೆಯ ಈ ವಿಧಾನ ನೋಡಿದ್ರೆ ಬೆರಗಾಗ್ತೀರಾ : ಬಾಗಿಲುಗಳಲ್ಲಿ ಬಚ್ಚಿಟ್ಟು ಒಯ್ಯುತ್ತಿದ್ದ 2000 ಮದ್ಯದ ಬಾಟಲಿ ವಶಪಡಿಸಿಕೊಂಡ ಪೊಲೀಸರು | ವೀಕ್ಷಿಸಿ

ನವದೆಹಲಿ: ದೆಹಲಿ ಪೊಲೀಸರ ವಿಶೇಷ ತಂಡವು ಇಬ್ಬರು ಮದ್ಯ ಕಳ್ಳಸಾಗಣೆದಾರರನ್ನು ಬಂಧಿಸಿದೆ. ದೆಹಲಿಯಿಂದ ಮದ್ಯ ನಿಷೇಧಿತ ಬಿಹಾರಕ್ಕೆ ಈ ಇಬ್ಬರೂ ಆರೋಪಿಗಳು ಮದ್ಯವನ್ನು ಕಳ್ಳಸಾಗಣೆ ಮಾಡುತ್ತಿದ್ದರು. ರಹಸ್ಯ ಮಾಹಿತಿಯ ಮೇರೆಗೆ, ಇಬ್ಬರೂ ಆರೋಪಿಗಳನ್ನು ಬಂಧಿಸಿ, ನಂತರ ಮರದ ಬಾಗಿಲುಗಳಲ್ಲಿ ಬಚ್ಚಿಟ್ಟ ಸಾಗಿಸುತ್ತಿದ್ದ ತಲಾ 90 ಎಂಎಲ್‌ನ 2112 ಬಾಟಲಿಗಳನ್ನು ವಶಪಡಿಸಿಕೊಂಡಿದ್ದಾರೆ.
ರೋಷನ್ ರೈ ಮತ್ತು ಸರ್ವಜಿತ್ ಸಿಂಗ್ ಎಂಬ ಇಬ್ಬರು ಆರೋಪಿಗಳಿಂದ 2,112 ಬಾಟಲಿಗಳು, ಆರು ಮರದ ಬಾಗಿಲುಗಳು ಮತ್ತು ಟೆಂಪೋವನ್ನು ಹೊರ ಉತ್ತರ ಜಿಲ್ಲೆಯ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ನವೆಂಬರ್‌ 2ರಂದು ಮರದ ಬಾಗಿಲುಗಳಲ್ಲಿ ಮದ್ಯವನ್ನು ಬಚ್ಚಿಟ್ಟು ದೆಹಲಿಯಿಂದ ಬಿಹಾರಕ್ಕೆ ಅಕ್ರಮ ಮದ್ಯ ಸಾಗಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿತ್ತು. ಮದ್ಯ ನಿಷೇಧಿಸಿರುವ ಬಿಹಾರ ರಾಜ್ಯಕ್ಕೆ ಟೆಂಪೋದಲ್ಲಿ ತುಂಬಿ ಬಿಹಾರಕ್ಕೆ ಕಳುಹಿಸಲಾಗುತ್ತಿದೆ ಎಂಬ ರಹಸ್ಯ ಮಾಹಿತಿಯ ಆಧಾರದ ಮೇಲೆ ವಿಶೇಷ ಸಿಬ್ಬಂದಿಯ ತಂಡ ರಚಿಸಿತ್ತು.
ಪೊಲೀಸರ ಪ್ರಕಾರ, ಇಬ್ಬರು ಕಳ್ಳಸಾಗಣೆದಾರರು ಬಾಟಲಿಗಳನ್ನು ಮರದ ಬಾಗಿಲುಗಳಲ್ಲಿ ಪೇರಿಸಿ ದೆಹಲಿಯಿಂದ ಬಿಹಾರಕ್ಕೆ ಟೆಂಪೋದಲ್ಲಿ ತೆಗೆದುಕೊಂಡು ಹೋಗುತ್ತಿದ್ದರು. ರೋಹಿಣಿ ಬಳಿ ವಾಹನವನ್ನು ಅಡ್ಡಗಟ್ಟಿದ ಪೊಲೀಸ್ ತಂಡ, ಬಾಟಲಿಗಳನ್ನು ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಿದೆ.

ವಶಪಡಿಸಿಕೊಂಡ ಟೆಂಪೋವನ್ನು ಪರಿಶೀಲಿಸಲಾಯಿತು. ಟೆಂಪೋ ಹಿಂಭಾಗದಲ್ಲಿ ಒಟ್ಟು ಆರು ಪ್ಲೈವುಡ್ ಬಾಗಿಲುಗಳು ಲೋಡ್ ಆಗಿರುವುದು ಕಂಡುಬಂದಿದೆ. ನಂತರ ಎಲ್ಲಾ ಬಾಗಿಲುಗಳನ್ನು ಉಳಿ ಮತ್ತು ಸುತ್ತಿಗೆಯ ಸಹಾಯದಿಂದ ಒಡೆದು ತೆರೆಯಲಾಯಿತು.ವಿಚಾರಣೆ ವೇಳೆ ಆರೋಪಿಗಳು ಈ ಮೇಲೆ ಹೇಳಿದ ಮಾರ್ಗದ ಮೂಲಕ ಬಿಹಾರಕ್ಕೆ ಅಕ್ರಮ ಮದ್ಯ ಸಾಗಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ. 2017ರಲ್ಲಿ ದಾಖಲಾದ ಮತ್ತೊಂದು ಪ್ರಕರಣದಲ್ಲಿ ಆರೋಪಿ ಸರ್ವಜೀತ್ ಸಿಂಗ್ ಕೂಡ ಬೇಕಾದವನಾಗಿದ್ದಾನೆ. ಆರೋಪಿಗಳಿಬ್ಬರನ್ನೂ ಬಂಧಿಸಿರುವ ಮುಂದಿನ ಕಾನೂನು ಕ್ರಮಗಳಿಗಾಗಿ ತನಿಖೆ ನಡೆಸಲಾಗುತ್ತಿದೆ.

4 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement