ರಷ್ಯಾದ ಕೆಫೆಯಲ್ಲಿ ಅಗ್ನಿ ಅವಘಡ; 15 ಜನರು ಸಾವು

ಮಾಸ್ಕೋ: ರಷ್ಯಾದ (Russia) ಕೋಸ್ಟ್ರೋಮಾದ ಬಾರ್ ಮತ್ತು ಕೆಫೆಯೊಂದರಲ್ಲಿ ಶುಕ್ರವಾರ ತಡರಾತ್ರಿ ಸಂಭವಿಸಿದ ಅಗ್ನಿ ಅವಘಡದಲ್ಲಿ 15 ಮಂದಿ ಮೃತಪಟ್ಟಿದ್ದಾರೆ ಹಾಗೂ ಸುಮಾರು 250 ಮಂದಿಯನ್ನು ರಕ್ಷಿಸಲಾಗಿದೆ ಎಂದು ಅಲ್ಲಿನ ‘ಟಿಎಎಸ್​ಎಸ್’ ಸುದ್ದಿಸಂಸ್ಥೆ ವರದಿ ಮಾಡಿದೆ.
ಮದ್ಯಪಾನ ಮಾಡಿದ ವ್ಯಕ್ತಿಯೊಬ್ಬ ಡ್ಯಾನ್ಸ್ ಫ್ಲೋರ್‌ನಲ್ಲಿ ‘ಫ್ಲೇರ್​ ಗನ್​’ನಿಂದ ಗುಂಡು ಹಾರಿಸಿದ ನಂತರ ಬೆಂಕಿ ಹೊತ್ತಿಕೊಂಡಿತ್ತು ಎಂದು ವರದಿ ಉಲ್ಲೇಖಿಸಿದ್ದು, ಅಗ್ನಿಯ ಜ್ವಾಲೆಗಳು ಕಟ್ಟಡದಲ್ಲಿ ಹರಡಿರುವ ಚಿತ್ರಗಳನ್ನೂ ಪ್ರಕಟಿಸಿದೆ.
ಶುಕ್ರವಾರ ತಡರಾತ್ರಿ 2 ಗಂಟೆ ವೇಳೆಗೆ ಹೊತ್ತಿಕೊಂಡಿದ್ದ ಬೆಂಕಿಯನ್ನು ಶನಿವಾರ ಬೆಳಿಗ್ಗೆ 7:30ರ ವೇಳೆಗೆ ಸಂಪೂರ್ಣವಾಗಿ ನಂದಿಸಲಾಯಿತು. ಸುಮಾರು 250 ಮಂದಿಯನ್ನು ರಕ್ಷಿಸಲಾಗಿದೆ. ಘಟನೆ ಸಂಭವಿಸಿದ ಪ್ರದೇಶ ರಾಜಧಾನಿ ಮಾಸ್ಕೋದಿಂದ 300 ಕಿಲೋಮೀಟರ್ ದೂರದಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮದ್ಯವ್ಯಸನಿ ಮಾಡಿದ ಅವಾಂತರ
ಮದ್ಯವ್ಯಸನಿ ವ್ಯಕ್ತಿಯೊಬ್ಬ ಕೈಯಲ್ಲಿ ಫ್ಲೇರ್ ಗನ್ ಹಿಡಿದುಕೊಂಡು ಮಹಿಳೆಯೊಂದಿಗೆ ಬಾರ್​​ನಲ್ಲಿ ಸಮಯ ಕಳೆಯುತ್ತಿದ್ದ. ಬಳಿಕ ಏಕಾಏಕಿ ಡ್ಯಾನ್ಸ್​ ಫ್ಲೋರ್​ಗೆ ತೆರಳಿದ ಆತ ಗುಂಡು ಹಾರಿಸಿದ್ದ. ವಿಷಯ ತಿಳಿಯುತ್ತಿದ್ದಂತೆಯೇ ತುರ್ತು ಸೇವೆಗಳ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ. ಬೆಂಕಿ ತಗುಲಿದ್ದ ಕಟ್ಟಡ ಸುಮಾರು 3,500 ಚದರ ಅಡಿಯಷ್ಟು ವಿಸ್ತೀರ್ಣ ಹೊಂದಿತ್ತು ಎಂದು ಇಲಾಖೆ ಮೂಲಗಳನ್ನು ಉಲ್ಲೇಖಿಸಿ ಸುದ್ದಿಸಂಸ್ಥೆ ವರದಿ ಮಾಡಿದೆ.
ಇದು ವಿಶಿಷ್ಟವಾದ ರಷ್ಯನ್ “ಸ್ಟೋಲೋವಾಯಾ” ಸಾಂಪ್ರದಾಯಿಕ ಆಹಾರವನ್ನು ಒದಗಿಸುವ ಕ್ಯಾಶುಯಲ್ ರೆಸ್ಟೋರೆಂಟ್ ಆಗಿದೆ.
ಸರ್ಕಾರಿ ಟಿವಿ ಒಂದೇ ಅಂತಸ್ತಿನ ಕಟ್ಟಡವನ್ನು ಆವರಿಸಿದ ದೊಡ್ಡ ಬೆಂಕಿಯ ವಿರುದ್ಧ ಹೋರಾಡುತ್ತಿರುವ ಡಜನ್‌ಗಟ್ಟಲೆ ತುರ್ತು ಕೆಲಸಗಾರರ ಚಿತ್ರಗಳನ್ನು ತೋರಿಸಿದೆ.
ಬೆಂಕಿಯನ್ನು ನಂದಿಸಲು 50 ಜನರು ಬೇಕಾಯಿತು ಮತ್ತು ಅವರು 20 ಅಗ್ನಿಶಾಮಕ ಯಂತ್ರಗಳನ್ನು ಬಳಸಿರುವುದಾಗಿ ಒಬ್ಬ ಅಗ್ನಿಶಾಮಕ ಸಿಬ್ಬಂದಿ ಪ್ರಾದೇಶಿಕ ಸರ್ಕಾರಿ ದೂರದರ್ಶನಕ್ಕೆಹೇಳಿದ್ದಾರೆ. ಅದರಲ್ಲೂ ಕಟ್ಟಡ ಕುಸಿದು ಬೀಳುವ ಅಪಾಯವಿರುವುದರಿಂದ ಬೆಂಕಿ ನಂದಿಸುವುದು ಕಷ್ಟಕರವಾಗಿತ್ತು ಎಂದರು.

ಪ್ರಮುಖ ಸುದ್ದಿ :-   'ಅಕ್ರಮ' ಐಪಿಎಲ್ ಸ್ಟ್ರೀಮಿಂಗ್ ಪ್ರಕರಣ : ಮಹಾರಾಷ್ಟ್ರ ಸೈಬರ್ ಪೊಲೀಸರಿಂದ ನಟಿ ತಮನ್ನಾ ಭಾಟಿಯಾಗೆ ಸಮನ್ಸ್

2 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement