ಚೆನ್ನೈ-ಮೈಸೂರು ನಡುವೆ ವಂದೇ ಭಾರತ ರೈಲಿನ ಪ್ರಾಯೋಗಿಕ ಸಂಚಾರ ಆರಂಭ

ಬೆಂಗಳೂರು: ಚೆನ್ನೈ-ಬೆಂಗಳೂರು-ಮೈಸೂರು ನಡುವೆ ಸಂಚರಿಸಲಿರುವ ವಂದೇ ಭಾರತ್ ಎಕ್ಸ್​ಪ್ರೆಸ್ ರೈಲು ಇಂದಿನಿಂದ (ನ.07)ಪ್ರಾಯೋಗಿಕ ಸಂಚಾರ ಆರಂಭಿಸಿದೆ.
ಭಾನುವಾರ ರಾತ್ರಿ ಚೆನ್ನೈನ ಎಂ.ಜಿ. ರಾಮಚಂದ್ರನ್ ರೈಲ್ವೇ ನಿಲ್ದಾಣದಿಂದ ವಂದೇ ಭಾರತ್ ಎಕ್ಸ್​ಪ್ರೆಸ್ ರೈಲು ಇಂದು, ಸೋಮವಾರ ಬೆಂಗಳೂರು ಮೂಲಕ ಮೈಸೂರು ತಲುಪಿದೆ. ಈ ರೈಲು, ದೇಶದ ಮೊದಲ ಅತಿವೇಗದ ರೈಲು ಎಂಬ ಖ್ಯಾತಿಗೆ ಪಾತ್ರವಾಗಿದೆ.
ನವೆಂಬರ್‌ 11ರಂದು ಪ್ರಧಾನಿ ಮೋದಿ, ಚೆನ್ನೈ-ಬೆಂಗಳೂರು-ಮೈಸೂರು ನಡುವೆ ಸಂಚರಿಸಲಿರುವ ವಂದೇ ಭಾರತ್ ಎಕ್ಸ್​ಪ್ರೆಸ್ ರೈಲಿಗೆ ಚಾಲನೆ ನೀಡಲಿದ್ದಾರೆ. ಈ ಹಿನ್ನಲೆಯಲ್ಲಿ ತಾಂತ್ರಿಕ ದೋಷ ಪತ್ತೆಗಾಗಿ ಪ್ರಾಯೋಗಿಕವಾಗಿ ಸಂಚಾರವನ್ನು ಆರಂಭಿಸಲಾಗಿದೆ.

ಇಂದು, ಸೋಮವಾರ ಬೆಳಗ್ಗೆ 10.20ಕ್ಕೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣಕ್ಕೆ ಆಗಮಿಸಿದ ರೈಲು, ಮೈಸೂರಿಗೆ ೧೨.೧೫ಕ್ಕೆ ತಲುಪಿದೆ.
ರೈಲಿನ ಎಲ್ಲಾ 16 ಕೋಚ್‌ಗಳು ಸ್ವಯಂಚಾಲಿತ ಬಾಗಿಲುಗಳು, ಜಿಪಿಎಸ್‌ (GPS)-ಆಧಾರಿತ ಆಡಿಯೋ-ದೃಶ್ಯ ಪ್ರಯಾಣಿಕರ ಮಾಹಿತಿ ವ್ಯವಸ್ಥೆ, ಮನರಂಜನಾ ಉದ್ದೇಶಗಳಿಗಾಗಿ ಆನ್‌ಬೋರ್ಡ್ ಹಾಟ್‌ಸ್ಪಾಟ್ ವೈ-ಫೈ ಮತ್ತು ಅತ್ಯಂತ ಆರಾಮದಾಯಕ ಆಸನಗಳನ್ನು ಹೊಂದಿವೆ. ಕಾರ್ಯನಿರ್ವಾಹಕ ವರ್ಗವು ತಿರುಗುವ ಕುರ್ಚಿಗಳನ್ನು ಸಹ ಹೊಂದಿದೆ.
ಈ ರೈಲು 6 ಗಂಟೆ 40 ನಿಮಿಷಗಳಲ್ಲಿ ಸುಮಾರು 497 ಕಿಮೀ ಕ್ರಮಿಸಲಿದ್ದು, ವಾರದಲ್ಲಿ ಆರು ದಿನ ಸಂಚರಿಸಲಿದೆ.

ಪ್ರಮುಖ ಸುದ್ದಿ :-   ಕರ್ನಾಟಕದಲ್ಲಿ ಪೂರ್ವ ಮುಂಗಾರು ಚುರುಕು; ಏಪ್ರಿಲ್‌ 19 ರಿಂದ ಮೂರು ದಿನ ಈ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ

3 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement