ಅಯ್ಯೋ ರಾಮಾ…ರಸ್ತೆ ದಾಟಲು ಹೋಗಿ ಬೈಕ್ ಚಕ್ರಕ್ಕೆ ಸಿಲುಕಿದ ಮಂಗ : ಸ್ಥಳಿಯರಿಂದ ರಕ್ಷಣೆ | ವೀಕ್ಷಿಸಿ

ಅತ್ಯಾಶ್ಚರ್ಯಕರ ರೀತಿಯಲ್ಲಿ ಬೈಕ್‌ನ ಮುಂದಿನ ಚಕ್ರಕ್ಕೆ ಮಂಗವೊಂದು ಸಿಕ್ಕಿಹಾಕಿಕೊಂಡಿರುವ ವೀಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬೈಕ್ ನ ಚಕ್ರಕ್ಕೆ ಸಿಲುಕಿದ್ದ ಕೋತಿಯೊಂದನ್ನ ಉಳಿಸಲು ಜನರ ಗುಂಪು ಸ್ಥಳಿಯರು ಪ್ರಯತ್ನಿಸುತ್ತಿರುವುದನ್ನು ಕಾಣಬಹುದಾಗಿದೆ. ಉತ್ತರ ಪ್ರದೇಶದ ಬಡೋಸರಾಯ್‌ನಲ್ಲಿ ಈ ಘಟನೆ ನಡೆದಿದೆ. ಮಂಗವೊಂದು ಬೈಕ್ ಚಕ್ರದಲ್ಲಿ ನೋವಿನಿಂದ ಸಿಲುಕಿಕೊಂಡು ಹೊರಬರಲು ಹೆಣಗಾಡುತ್ತಿರುವುದನ್ನು ವೀಡಿಯೊ ಕ್ಲಿಪ್ ತೋರಿಸುತ್ತದೆ.
ಹಗಲು ಹೊತ್ತಿನಲ್ಲಿ ಕೋತಿಯು ರಸ್ತೆ ದಾಟಲು ಯತ್ನಿಸುತ್ತಿದ್ದ ವೇಳೆ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಆದರೆ ಸುರಕ್ಷಿತವಾಗಿ ಇನ್ನೊಂದು ಬದಿಗೆ ಹೋಗುವ ಬದಲು ಅದು ವೇಗವಾಗಿ ಬಂದ ಬೈಕ್‌ನ ಚಕ್ರಕ್ಕೆ ಸಿಕ್ಕಿಹಾಕಿಕೊಂಡಿದೆ.

ಅದೃಷ್ಟವಶಾತ್, ಬೈಕ್ ಚಲಾಯಿಸುತ್ತಿದ್ದ ವ್ಯಕ್ತಿ ಕೂಡಲೇ ಬ್ರೇಕ್ ಹಾಕಿದ್ದರಿಂದ ಕೋತಿಗೆ ಯಾವುದೇ ಹಾನಿಯಾಗಲಿಲ್ಲ. ಬಳಿಕ ಸ್ಥಳೀಯರು ಜಮಾಯಿಸಿ ಬೈಕ್‌ನ ಮುಂಭಾಗದ ಚಕ್ರವನ್ನು ತೆರೆದು ಪ್ರಾಣಿಯನ್ನು ಬಿಡಿಸಿದ್ದಾರೆ.
ವೀಡಿಯೊದಲ್ಲಿ, ಕೋತಿ ಬೈಕ್ನ ಮುಂಭಾಗದ ಫೋರ್ಕ್ ಮತ್ತು ಟೈರ್ ನಡುವಿನ ಸಣ್ಣ ಅಂತರದಲ್ಲಿ ಸಿಕ್ಕಿಬಿದ್ದಿರುವುದನ್ನು ಕಾಣಬಹುದು. ಸ್ಥಳೀಯರು ಸ್ಥಳಕ್ಕೆ ಧಾವಿಸಿ ಮಾನವೀಯತೆ ಮೆರೆದಿದ್ದಾರೆ. ವೀಡಿಯೊದಲ್ಲಿ, ಕೋತಿಯನ್ನು ರಕ್ಷಿಸುವ ಸಲುವಾಗಿ ಸ್ಥಳೀಯರು ಬೈಕ್‌ ಟೈರ್ ಅನ್ನು ಕಳಚುವುದನ್ನು ಕಾಣಬಹುದು.

ಬಹಳ ಹಿಂದೆಯೇ ಕೋತಿಯೊಂದು ಗ್ರಾಹಕರಿಂದ ಮದ್ಯದ ಬಾಟಲಿಗಳನ್ನು ಕಸಿದುಕೊಳ್ಳುವ ವೀಡಿಯೊಗಳು ಜನರಲ್ಲಿ ಆಶ್ಚರ್ಯ ಮತ್ತು ಆತಂಕವನ್ನು ಉಂಟುಮಾಡಿದವು. ಉತ್ತರ ಪ್ರದೇಶದ ರಾಯ್ ಬರೇಲಿಯಲ್ಲಿ ಈ ಘಟನೆ ನಡೆದಿದೆ.

ಪ್ರಮುಖ ಸುದ್ದಿ :-   ಏಷ್ಯಾದ ಆನೆಗಳು ಸತ್ತ ಮರಿಗಳನ್ನು ವಿಧಿವತ್ತಾಗಿ ಹೂಳುತ್ತವೆ...! ಹೊಸ ಅಧ್ಯಯನದ ವೇಳೆ ಪತ್ತೆ...!!

3 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement