ಭಾರತದಲ್ಲಿ 100 ವರ್ಷಕ್ಕೂ ಮೇಲ್ಪಟ್ಟ 2.5 ಲಕ್ಷಕ್ಕೂ ಹೆಚ್ಚು ಮತದಾರರು…!

ನವದೆಹಲಿ: ಭಾರತದ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ರಾಜೀವಕುಮಾರ್ ಭಾರತದಲ್ಲಿ 100 ವರ್ಷಕ್ಕಿಂತ ಮೇಲ್ಪಟ್ಟ 2.5 ಲಕ್ಷಕ್ಕೂ ಹೆಚ್ಚು ಮತದಾರರಿದ್ದಾರೆ ಎಂದು ಬುಧವಾರ ತಿಳಿಸಿದ್ದಾರೆ.
ಚುನಾವಣಾ ಆಯೋಗದ ಪ್ರಕಾರ 80 ವರ್ಷ ಮೇಲ್ಪಟ್ಟ 1,83,53,347 ಮಂದಿ ಇದ್ದಾರೆ. ಶತಾಯುಷಿಗಳ ಸಂಖ್ಯೆ 2,55,598 ಎಂದು ಅಂದಾಜಿಸಲಾಗಿದೆ. ಹದಿಹರೆಯದ ಮತದಾರರ ಸಂಖ್ಯೆ (18-19) ಭಾರತದಲ್ಲಿ 1,52,34,341 ಆಗಿದ್ದರೆ, 20-29 ವಯಸ್ಸಿನವರ ಸಂಖ್ಯೆ 20,06,65,436 ಆಗಿದೆ.

ನಗರ ಪ್ರದೇಶದ ಯುವಕರಿಗೆ ಚುನಾವಣಾ ಜಾಗೃತಿ ಮೂಡಿಸುವ ವಿಶೇಷ ಅಭಿಯಾನದ ಅಂಗವಾಗಿ ಆರಂಭಿಸಲಾದ 20 ಕಿ.ಮೀ ಸೈಕಲ್ ರ್ಯಾಲಿಗೆ ಚಾಲನೆ ನೀಡಲು ಚುನಾವಣಾ ಆಯುಕ್ತರು ಬುಧವಾರ ಪುಣೆಯಲ್ಲಿದ್ದರು.
ರ್ಯಾಲಿಗೆ ಜಮಾಯಿಸಿದವರನ್ನು ಉದ್ದೇಶಿಸಿ ಮಾತನಾಡಿದ ಸಿಇಸಿ, ಅತಿ ಕಡಿಮೆ ಮತದಾನವಾಗಿರುವ ನಗರಗಳಲ್ಲಿ ಪುಣೆ ಕೂಡ ಇದೆ ಎಂದು ಹೇಳಿದರು. ಈ ಕಾರಣಕ್ಕಾಗಿ ಸೈಕಲ್ ರ್ಯಾಲಿಗೆ ಚಾಲನೆ ನೀಡಲಾಗಿದೆ ಎಂದರು. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಹೆಸರು ನೋಂದಾಯಿಸಿ ಮತದಾನ ಮಾಡುವಂತೆ ಮನವಿ ಮಾಡಿದರು.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement