ಹಣಕ್ಕಾಗಿ ತನ್ನ ಪತ್ನಿಯನ್ನೇ ಬೇರೊಬ್ಬನಿಗೆ ಮಾರಾಟ ಮಾಡಿ ಮದುವೆಯನ್ನೂ ಮಾಡಿದ ಈ ಪತಿ ಮಹಾಶಯ…!

ಒರಿಸ್ಸಾದ ಕಲಹಂಡಿ ಜಿಲ್ಲೆಯ ಪೊಲೀಸರು ಶನಿವಾರ ತನ್ನ 22 ವರ್ಷದ ಹೆಂಡತಿಯನ್ನು ಬೇರೊಬ್ಬನಿಗೆ ಮಾರಾಟ ಮಾಡಿ ಆತನ ಜೊತೆ ವಿವಾಹ ಮಾಡಿದ ಕಾರಣದ ಮೇಲೆ ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ.
ಕೆಲಸ ಹುಡುಕುವ ನೆಪದಲ್ಲಿ ತನ್ನ ಹೆಂಡತಿಯನ್ನು ನವದೆಹಲಿಗೆ ಕರೆದೊಯ್ದ ನಂತರ ಹರಿಯಾಣದ ಇನ್ನೊಬ್ಬ ವ್ಯಕ್ತಿಗೆ ಮಾರಾಟ ಮಾಡಿ ಆತನೊಂದಿಗೆ ಮದುವೆ ಮಾಡಿದ ಆರೋಪದ ಮೇಲೆ 25 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.
ಅಳಿಯ ಬೆರುಕ್‌ ತನ್ನ ಮಗಳನ್ನು ಹರಿಯಾಣದ ವ್ಯಕ್ತಿಗೆ ಮಾರಾಟ ಮಾರಾಟ ಮಾಡಿದ್ದಾನೆ ಎಂದು ಮಹಿಳೆಯ ತಂದೆ ಕುಲಮಣಿ ಭೋಯಿ ದೂರು ನೀಡಿದ ನಂತರ ಪೊಲೀಸರು ಮಸ್ಕಗುಡಾ ಗ್ರಾಮದ ಖಿರಾ ಬೆರುಕ್‌ನನ್ನು ಬಂಧಿಸಿದ್ದಾರೆ.

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 98867 84189

ನವೆಂಬರ್ 2ರಂದು ಅಪರಿಚಿತ ವ್ಯಕ್ತಿಯೊಂದಿಗೆ ತನ್ನನ್ನು ಮದುವೆ ಮಾಡುತ್ತಿರುವುದಾಗಿ ಮಗಳು ಪೂರ್ಣಮಿಯಿಂದ ದೂರವಾಣಿ ಕರೆ ಬಂದ ನಂತರ ಘಟನೆ ಬೆಳಕಿಗೆ ಬಂದಿದೆ. ಮಹಿಳೆಯ ತಂದೆ ಬೆರುಕ್ ವಿರುದ್ಧ ನಮಗೆ ದೂರು ನೀಡಿದ್ದಾರೆ. ಇಬ್ಬರೂ ಪರಸ್ಪರ ಪ್ರೇಮಿಸಿ ಒಂದು ವರ್ಷದ ಹಿಂದೆ ಮದುವೆಯಾಗಿದ್ದರು ಎಂದು ಹೇಳಲಾಗಿದೆ.
ಅಕ್ಟೋಬರ್ 30 ರಂದು ತನಗೆ ಕೆಲಸ ಸಿಗಲಿದೆ ಎಂದು ನೆಪ ಹೇಳಿ ಅಳಿಯ ತನ್ನ ಮಗಳನ್ನು ದೆಹಲಿಗೆ ಕರೆದೊಯ್ದಿದ್ದಾನೆ, ಆದರೆ ಆಕೆಯನ್ನು ಅಲ್ಲಿನ ವ್ಯಕ್ತಿಯೊಬ್ಬರಿಗೆ ಮಾರಾಟ ಮಾಡಿ ಒರಿಸ್ಸಾಕ್ಕೆ ಏಕಾಂಗಿಯಾಗಿ ಮರಳಿದ್ದಾನೆ ಎಂದು ಯುವತಿಯ ತಂದೆ ದೂರು ದಾಖಲಿಸಿದ್ದರು ಎಂದು ನಾರ್ಲಾ ಪೊಲೀಸ್ ಠಾಣೆ ಪ್ರಭಾರಿ ಇನ್ಸ್‌ಪೆಕ್ಟರ್ ಗಂಗಾಧರ ಮೆಹರ್ ತಿಳಿಸಿದ್ದಾರೆ. .

ಇಂದಿನ ಪ್ರಮುಖ ಸುದ್ದಿ :-   24 ಗಂಟೆಯೊಳಗೆ ಅನಂತನಾಗ್‌ನಲ್ಲಿರುವ ಸರ್ಕಾರಿ ಕ್ವಾರ್ಟರ್ಸ್ ಖಾಲಿ ಮಾಡಲು ಮೆಹಬೂಬಾ ಮುಫ್ತಿಗೆ ನೋಟಿಸ್

ನವೆಂಬರ್ 5 ರಂದು ಪೂರ್ಣಮಿ ತನ್ನ ತಂದೆಯನ್ನು ದೂರವಾಣಿಯಲ್ಲಿ ಸಂಪರ್ಕಿಸಿ ತನ್ನ ಕಷ್ಟವನ್ನು ವಿವರಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಕುಲಮಣಿ ಅವರು ನವೆಂಬರ್ 6 ರಂದು ಪೊಲೀಸರಿಗೆ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಿದ್ದಾರೆ. ನಂತರ ಪೊಲೀಸರು ಬೆರುಕ್‌ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಮಹಿಳೆಯನ್ನು ಇನ್ನೂ ರಕ್ಷಿಸಲಾಗಿಲ್ಲ ಮತ್ತು ಕಾಳಹಂಡಿಯ ತಂಡವು ಕರೆತರಲು ಶೀಘ್ರದಲ್ಲೇ ಹೋಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. “ಮಹಿಳೆ ಹಿಂತಿರುಗಿದ ನಂತರ ನಾವು ಅದರ ಹಿಂದಿನ ಸಂಪೂರ್ಣ ಮಾಹಿತಿಯನ್ನು ಪಡೆಯುತ್ತೇವೆ” ಎಂದು ಪೊಲೀಸ್‌ ಅಧಿಕಾರಿ ಹೇಳಿದರು.

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

5 / 5. ಒಟ್ಟು ವೋಟುಗಳು 2

ನಿಮ್ಮ ಕಾಮೆಂಟ್ ಬರೆಯಿರಿ

advertisement