ತುಮಕೂರು: ಮನೆಯ ಫ್ರಿಡ್ಜ್‌ ಒಳಗೆ ಸೇರಿಕೊಂಡಿದ್ದ ನಾಗರ ಹಾವು…ಅದನ್ನು ಹೊರತೆಗೆದದ್ದು ಹೇಗೆ | ವೀಕ್ಷಿಸಿ

posted in: ರಾಜ್ಯ | 0

ಮಳೆಗಾಲದಲ್ಲಿ ಹಾವುಗಳು ಮನೆಯೊಳಗೆ, ಜನಬಿಡ ಪ್ರದೇಶಗಳಲ್ಲಿ ಈಗ ಹೆಚ್ಚಾಗಿ ಕಾಣಿಸುತ್ತಿವೆ. ಇಂಥದ್ದೇ ಘಟನೆಯೊಂದರಲ್ಲಿ ಮನೆಯೊಂದರ ಒಳಗೆ ಬಂದ ನಾಗರ ಹಾವು ಫ್ರಿಡ್ಜ್ ಒಳಗೆ ನುಗ್ಗಿ ಅವಿತುಕೊಂಡಿದೆ. ಇದನ್ನು ನೋಡಿದ ಮನೆಮಂದಿ ಬೆಚ್ಚಿಬಿದ್ದಿದ್ದಾರೆ. ಈ ಘಟನೆ ನಡೆದಿರುವುದು ಕರ್ನಾಟಕದ ತುಮಕೂರಿನಲ್ಲಿ ನಡೆದಿದೆ.
ಮನೆಯೊಳಗೆ ಬಂದ ನಾಗರಹಾವು ಫ್ರಿಡ್ಜ್ ಒಳಗೆ ಅವಿತುಕೊಂಡಿದೆ. ಇದು ಗೊತ್ತಾದ ತಕ್ಷಣವೇ ಈ ಬಗ್ಗೆ ಮನೆಯವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 98867 84189

ಅವರು ಉರಗ ತಜ್ಞನ ಜೊತೆಗೆ ಆಗಮಿಸಿದ್ದಾರೆ. ಸ್ಥಳಕ್ಕೆ ಬಂದ ಉರಗ ತಜ್ಞ, ಫ್ರಿಡ್ಜ್ ಒಳಗಿದ್ದ ಹಾವನ್ನು ಹೊರತೆಗೆದು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ. ಹಾವು ಸೆರೆ ಹಿಡಿದ ನಂತರ ಮನೆಯವರು ನಿಟ್ಟಿಸಿರು ಬಿಟ್ಟಿದ್ದಾರೆ.ಹಾವು ಹಿಡಿಯುವವನು ರೆಫ್ರಿಜಿರೇಟರ್‌ನ ಹಿಂಭಾಗವನ್ನು ತೆರೆದು ಉದ್ದನೆಯ ರಾಡ್‌ನಿಂದ ನಾಗರ ಹಾವನ್ನು ಹೊರ ತೆಗೆಯಲು ಪ್ರಯತ್ನಿಸುತ್ತಿರುವುದನ್ನು ವೀಡಿಯೊ ತೋರಿಸುತ್ತದೆ. ಹಾವು ವೃತ್ತಾಕಾರದಲ್ಲಿ ಫ್ರಿಡ್ಜ್‌ನ ಹಿಂಭಾಗದಲ್ಲಿ ಸುರುಳು ಸುತ್ತಿಕೊಂಡಿತ್ತು. ನಂತರ ನಿಧಾನವಾಗಿ ಹೊರತೆಗೆಯಲಾಯಿತು.

ಹಾವುಗಳು ರಾತ್ರಿಯಲ್ಲಿ ಚಳಿಗಾಲದಲ್ಲಿ ಬೆಚ್ಚಗಿನ ಪ್ರದೇಶಗಳನ್ನು ಹುಡುಕುತ್ತವೆ ಎಂದು ತಿಳಿದುಬಂದಿದೆ. ಆದರೆ ನಾಗರಹಾವು ಇಲ್ಲಿ ಫ್ರಿಡ್ಜ್‌ ಸೇರಿಕೊಂಡಿದೆ. ಬಹಶಃ ತಾನಿದ್ದ ಜಾಗ ಬೆಚ್ಚಗಾಗುತ್ತಿದ್ದಂತೆ ರೆಫ್ರಿಜರೇಟರ್‌ನ ಕಂಪ್ರೆಸರ್ ಸುತ್ತಲೂ ಸುತ್ತಿಕೊಂಡಿರಬಹುದು ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಇಂದಿನ ಪ್ರಮುಖ ಸುದ್ದಿ :-   ಮಹಾ ಕನ್ನಡಿಗರ ನಕಾಶೆ ನೋಡಿ ಬೆಚ್ಚಿ ಬಿದ್ದ ಮಹಾರಾಷ್ಟ್ರ...!

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

2.3 / 5. ಒಟ್ಟು ವೋಟುಗಳು 3

ನಿಮ್ಮ ಕಾಮೆಂಟ್ ಬರೆಯಿರಿ

advertisement