11 ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮಾಡಿದ ರಾಜ್ಯ ಸರ್ಕಾರ

ಬೆಂಗಳೂರು: ಆಡಳಿತ ವಿಭಾಗ ಎಡಿಜಿಪಿಯಾಗಿದ್ದ ಡಾ.ಎಂ ಅಬ್ದುಲ್‌ ಸಲೀಂ, ಬೆಂಗಳೂರು ನಗರ ಸಂಚಾರ ವಿಭಾಗದ ಜಂಟಿ ಆಯುಕ್ತರಾಗಿದ್ದ ಡಾ. ರವಿಕಾಂತೇಗೌಡ ಸೇರಿದಂತೆ ರಾಜ್ಯ ಸರ್ಕಾರ 11 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶಿಸಿದೆ.
ಈ ಕುರಿತು ಅಧಿಸೂಚನೆ ಹೊರಡಿಸಲಾಗಿದ್ದು, ಆಡಳಿತ ವಿಭಾಗ ಎಡಿಜಿಪಿಯಾಗಿದ್ದ ಡಾ.ಎಂ ಅಬ್ದುಲ್ಲಾ ಸಲೀಂ ಅವರನ್ನು ಬೆಂಗಳೂರು ನಗರ ಸಂಚಾರ ವಿಭಾಗದ ಎಡಿಜಿಪಿ ಹಾಗೂ ಎಸ್ಪಿಯಾಗಿ ನೇಮಿಸಲಾಗಿದೆ.
ಕ್ರಿಮಿನಲ್ ಇನ್ವೆಸ್ಟಿಗೇಷನ್ ವಿಭಾಗ, ಎಕಾನಾಮಿಕಲ್ ಅಫೆನ್ಸ್ ಎಡಿಜಿಪಿ ಉಮೇಶಕುಮಾರ ಅವರನ್ನು ಆಡಳಿತ ವಿಭಾಗದ ಎಡಿಜಿಪಿಯಾಗಿ ವರ್ಗಾವಣೆ ಮಾಡಲಾಗಿದೆ. ಮಂಗಳೂರು ಪಶ್ಚಿಮ ರೇಂಜ್ ನ ಐಜಿಪಿಯಾಗಿದ್ದ ದೇವಜ್ಯೋತಿ ರೇ ಅವರನ್ನು ಹ್ಯೂಮನ್ ರೈಟ್ಸ್ ಐಜಿಪಿಯಾಗಿ ವರ್ಗಾವಣೆ ಮಾಡಲಾಗಿದೆ.

ಬೆಂಗಳೂರು ನಗರ ಕ್ರೈಂ ವಿಭಾಗದ ಡಿಐಜಿ ಮತ್ತು ಜಂಟಿ ಆಯುಕ್ತರಾಗಿದ್ದ ರಮಣ ಗುಪ್ತ ಅವರನ್ನು ಬೆಂಗಳೂರು ನಗರ ಇಂಟೆಲಿಜೆನ್ಸಿಯ ಡಿಐಜಿ ಮತ್ತು ಜಂಟಿ ಪೊಲೀಸ್‌ ಆಯುಕ್ತರನ್ನಾಗಿ ವರ್ಗಾವಣೆ ಮಾಡಲಾಗಿದೆ.
ಬೆಂಗಳೂರು ನಗರ ಸಂಚಾರ ವಿಭಾಗದ ಡಿಐಜಿ ಹಾಗೂ ಜಂಟಿ ಆಯುಕ್ತರಾಗಿದ್ದ ಡಾ. ರವಿಕಾಂತೇಗೌಡ ಅವರನ್ನು ಸಿಐಜಿ ವಿಭಾಗದ ಡಿಐಜಿಯಾಗಿ ವರ್ಗಾವಣೆ ಮಾಡಲಾಗಿದೆ. ಇಂಟರ್ನಲ್ ಸೆಕ್ಯೂರಿಟಿ ವಿಭಾಗದ ಡಿಐಜಿ ಆಗಿದ್ದ ಬಿ.ಎಸ್. ಲೋಕೇಶಕುಮಾರ ಅವರನ್ನು ಬಳ್ಳಾರಿ ವಿಭಾಗದ ಡಿಐಜಿಯಾಗಿ ನೇಮಕ ಮಾಡಲಾಗಿದೆ.

ಪ್ರಮುಖ ಸುದ್ದಿ :-   ಸೆರೆ ಕಾರ್ಯಾಚರಣೆ ವೇಳೆ ಕಾಡಾನೆ ಜೊತೆ ಕಾದಾಟದಲ್ಲಿ 8 ಬಾರಿ ಮೈಸೂರು ದಸರಾ ಅಂಬಾರಿ ಹೊತ್ತಿದ್ದ ಅರ್ಜುನ ಆನೆ ಸಾವು

ಮೈಸೂರು ನಗರದ ಡಿಐಜಿ ಮತ್ತು ಆಯುಕ್ತರಾಗಿದ್ದ ಡಾ.ಚಂದ್ರಗುಪ್ತ ಅವರನ್ನು ಮಂಗಳೂರು ಪಶ್ಚಿಮ ವಿಭಾಗದ ಡಿಐಜಿಯಾಗಿ ವರ್ಗಾವಣೆ ಮಾಡಲಾಗಿದೆ. ಬೆಂಗಳೂರು ನಗರ ಕ್ರೈಂ-1 ವಿಭಾಗದ ಡಿಸಿಪಿ ಡಾ.ಶರಣಪ್ಪ ಎಸ್ ಡಿ ಅವರನ್ನು ಬೆಂಗಳೂರು ನಗರ ಕ್ರೈಂ ವಿಭಾಗದ ಜಂಟಿ ಆಯುಕ್ತರನ್ನಾಗಿ ವರ್ಗಾವಣೆ ಮಾಡಲಾಗಿದೆ.
ಸಿಐಡಿಯ ಎಸ್ಪಿ ಆಗಿದ್ದ ಎಂ.ಎನ್. ಅನುಚೇತ್ ಅವರನ್ನು ಸಂಚಾರ ವಿಭಾಗದ ಜಂಟಿ ಾಯುಕ್ತರಾಗಿ ಹಾಗೂ ಸಿಐಡಿಯ ಎಸ್ಪಿಯಾಗಿದ್ದ ರವಿ ಡಿ ಚೆನ್ನಣ್ಣನವರ್ ಅವರನ್ನು ಕಿಯೋನಿಕ್ಸ್ ಎಂ.ಡಿ. ಆಗಿ ವರ್ಗಾವಣೆ ಮಾಡಲಾಗಿದೆ. ಸಿಐಡಿ-1 ವಿಭಾಗದ ಎಸ್ಪಿಯಾಗಿದ್ದ ಬಿ ರಮೇಶ ಅವರನ್ನು ಮೈಸೂರು ನಗರ ಪೊಲೀಸ್ ಆಯುಕ್ತರನ್ನಾಗಿ ವರ್ಗಾವಣೆ ಮಾಡಲಾಗಿದೆ.

3 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement