ಎಲ್ಲ ಶಾಲೆಗಳಲ್ಲಿ ವಿವೇಕಾನಂದರ ಫೋಟೋ ಹಾಕಲು ತೀರ್ಮಾನ: ಶಿಕ್ಷಣ ಸಚಿವ ನಾಗೇಶ

ಬೆಂಗಳೂರು: ಕಾಂಗ್ರೆಸ್ ಪಕ್ಷ ಶಾಲೆಗಳಿಗೆ ಕೇಸರಿ ಬಣ್ಣ ಬಳಿಯುವ ವಿಚಾರದಲ್ಲಿ ಅನಗತ್ಯ ರಾಜಕೀಯ ಮಾಡುತ್ತಿದೆ. ಶಿಕ್ಷಣ ಕ್ಷೇತ್ರದಲ್ಲಿಯೂ ಈ ರೀತಿ ರಾಜಕೀಯ ಸರಿಯಲ್ಲ. ನಾವು ಇಂತಹದ್ದೇ ಬಣ್ಣ ಬಳಿಯಿರಿ ಎಂದು ಹೇಳಿಲ್ಲ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ ಹೇಳಿದ್ದಾರೆ.
ವಿಧಾನಸೌಧದ ಬಳಿ ಇಂದು ಮಂಗಳವಾರ ಶಾಲೆಗಳಿಗೆ ಕೇಸರಿ ಬಣ್ಣ ವಿಚಾರವಾಗಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್ ಶಿಕ್ಷಣ ಕ್ಷೇತ್ರದಲ್ಲೂ ಅನವಶ್ಯಕ ರಾಜಕೀಯ ಮಾಡುತ್ತಿದೆ. ವಿರೋಧ ಮಾಡಲಿಕ್ಕಾಗಿಯೇ ಒಂದಷ್ಟು ಜನರು ಇದ್ದಾರೆ. ವೋಟ್ ಬ್ಯಾಂಕ್‌ಗಾಗಿ ಕಾಂಗ್ರೆಸ್‌ ಶಿಕ್ಷಣ ಕ್ಷೇತ್ರದಲ್ಲೂ ರಾಜಕೀಯ ಮಾಡಲು ಪ್ರಯತ್ನಿಸುತ್ತಿದೆ. ಒಂದು ಧರ್ಮದ ಮತಗಳಿಗಾಗಿ ಈ ರೀತಿಯ ವಿರೋಧ ಸರಿಯಲ್ಲ ಎಂದರು.

. ಖಾಸಗಿ ಶಾಲೆಗಳಲ್ಲಿ ಕೇಸರಿ ಬಣ್ಣ, ವಿವೇಕ ಬಣ್ಣ ಬಳಿಯುವುದು ಅವರವರ ವಿವೇಚನೆಗೆ ಬಿಟ್ಟಿದ್ದು. ಯಾವುದೇ ಸುತ್ತೋಲೆಯಲ್ಲಿ ಇಂತಹದ್ದೇ ಬಣ್ಣ ಬಳಿಯಿರಿ ಎಂದು ಹೇಳಿಲ್ಲ. ಅಲ್ಲಿನ ವಾತಾವಾರಣಕ್ಕೆ ತಕ್ಕಂತೆ ಕೊಠಡಿ ನಿರ್ಮಿಸಿ ಎಂದು ಹೇಳಿದ್ದೇವೆ ಎಂದರು. .
ಇನ್ಮುಂದೆ ಎಲ್ಲ ಶಾಲೆಗಳಲ್ಲಿಯೂ ವಿವೇಕಾನಂದರ ಫೋಟೋ ಹಾಕುವುದಕ್ಕೆ ತೀರ್ಮಾನಿಸಲಾಗಿದೆ. ಈಗಾಗಲೇ ವಿವೇಕಾನಂದ ಫೋಟೋಗಳನ್ನು ಅನೇಕ ಶಾಲೆಗಳಲ್ಲಿ ಹಾಕಿದ್ದಾರೆ. ಹೀಗಾಗಿ ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ ಹೇಳಿದರು.
ಯಾವ ರೀತಿಯ ಫೋಟೊ ಹಾಕಬೇಕು ಎಂಬುದನ್ನು ತೀರ್ಮಾನ ಮಾಡುತ್ತೇವೆ. ಆದರೆ ಎಲ್ಲ ಶಾಲೆಗಳಲ್ಲೂ ವಿವೇಕಾನಂದರ ಫೋಟೊ ಬರುವುದಂತೂ ಹೌದು ಎಂದರು.

ಪ್ರಮುಖ ಸುದ್ದಿ :-   ಕುಣಿಗಲ್ : ರಾಮನವಮಿ ಪಾನಕ ಸೇವಿಸಿದ 42 ಮಂದಿ ಅಸ್ವಸ್ಥ

 

 

4.7 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement