ಪ್ರಿಯತಮೆ ಕೊಂದ ತಾಸುಗಳ ನಂತರ ಫೇಸ್‌ಬುಕ್ ಲೈವ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ

ಸಿಲ್‌ಗುರಿ: ದೆಹಲಿಯಲ್ಲಿ ವ್ಯಕ್ತಿಯೊಬ್ಬ ತನ್ನ ಪ್ರಿಯಕರಳನ್ನು ಕೊಂದು ದೇಹವನ್ನು 35 ತುಂಡುಗಳಾಗಿ ಕತ್ತರಿಸಿದ ಭೀಕರ ಹತ್ಯೆಯ ಸುದ್ದಿಯಿಂದ ದೇಶವು ಆಘಾತಕ್ಕೊಳಗಾದ ಒಂದು ದಿನದ ನಂತರ, ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ಅಂತಹುದೇ ಘಟನೆ ವರದಿಯಾಗಿದೆ. ವ್ಯಕ್ತಿಯೊಬ್ಬ ತನ್ನ ಗೆಳತಿಯನ್ನು ಕೊಂದ ಗಂಟೆಗಳ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ.
ಸೋಮವಾರ, ಸಿಲಿಗುರಿ ಪೊಲೀಸರು ಪ್ರಿಯಕರನಿಂದ ಹತ್ಯೆಗೀಡಾದ ರಿಯಾ ಬಿಸ್ವಾಸ್ ಎಂಬ ಮಹಿಳೆಯ ದೇಹವನ್ನು ವಶಪಡಿಸಿಕೊಂಡಿದ್ದಾರೆ. ಕಿರಣ್ ದೇಬನಾಥ್ ಎಂದು ಗುರುತಿಸಲಾದ ವ್ಯಕ್ತಿ ನಂತರ ಸಾಮಾಜಿಕ ಮಾಧ್ಯಮದಲ್ಲಿ ಲೈವ್ ಸ್ಟ್ರೀಮ್ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ ಭಾನುವಾರ ಚಲಿಸುವ ರೈಲಿನ ಮುಂದೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಪೊಲೀಸ್ ಮೂಲಗಳ ಪ್ರಕಾರ, ಮದುಯಾಗಿದ್ದರೂ ಎರಡು ವರ್ಷಗಳಿಂದ ದೇಬನಾಥ್ ಜೊತೆ ಲಿವ್‌ ಇನ್‌ ಸಂಬಂಧದಲ್ಲಿದ್ದ ರಿಯಾ ಎಂಬ ಮಹಿಳೆ ತನ್ನ ಪತಿಯನ್ನು ಬಿಡಲು ನಿರಾಕರಿಸಿದ ನಂತರ ದೇಬನಾಥ್ ಅವಳಿಗೆ ಚಿತ್ರಹಿಂಸೆ ನೀಡಿದ್ದಾನೆ. ರಿಯಾಳ ದೇಹವನ್ನು ಸ್ನಾದ ಕೋಣೆಯಿಂದ ವಶಪಡಿಸಿಕೊಳ್ಳಲಾಗಿದೆ. ಮಹಿಳೆ ದೇಹದ ಮೇಲೆ ಗಾಯಗಳು ಮತ್ತು ಹೊಡೆದಾಟದ ಗುರುತುಗಳಿವೆ” ಎಂದು ಪೊಲೀಸ್ ಮೂಲಗಳು ತಿಳಿಸಿವೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 98867 84189

ಸಿಲಿಗುರಿ ಮೆಟ್ರೋಪಾಲಿಟನ್ ಪೊಲೀಸ್‌ನ ನ್ಯೂ ಜಲ್ಪೈಗುರಿ ಪೊಲೀಸ್ ಠಾಣೆ ವ್ಯಾಪ್ತಿಯ ಚತುರ ಗಚ್ ಖತಲ್ ಸ್ಲಂ ಪ್ರದೇಶದಲ್ಲಿ ಈ ಘಟನೆ ನಡೆದಿದೆ.ಮಹಿಳೆಯ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ರವಿವಾರ ರಾತ್ರಿ ಕಿರಣ್ ದೇಬ್‌ನಾಥ ರಿಯಾಳ ಮನೆಗೆ ಹೋಗಿದ್ದಾಗ ನೀಡಿದಾಗ ಇಬ್ಬರ ನಡುವೆ ಜಗಳವಾಗಿದೆ. ಆಗ ಚಾಕುವಿನಿಂದ ಆಕೆಯ ಕತ್ತು ಕೊಯ್ದಿದ್ದಾರೆ ಎಂದು ತನಿಖಾ ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ.
ನಾಡಿಯಾ ನಿವಾಸಿಯಾದ ರಿಯಾ ತನ್ನ ಪತಿ ರೋಮಿಯೋ ಬಿಸ್ವಾಸ್ ಮತ್ತು ಅವರ 5 ವರ್ಷದ ಮಗನೊಂದಿಗೆ ಸಿಲಿಗುರಿಯಲ್ಲಿ ವಾಸಿಸುತ್ತಿದ್ದರು. ಆಜ್‌ತಕ್ ಬಾಂಗ್ಲಾ/ಇಂಡಿಯಾ ಟುಡೆಯೊಂದಿಗೆ ಮಾತನಾಡಿದ ಸ್ಥಳೀಯರು, ರಿಯಾ ಮತ್ತು ಕಿರಣ್ ಕಳೆದ ಎರಡು ವರ್ಷಗಳಿಂದ ಸಂಬಂಧ ಹೊಂದಿದ್ದರು ಎಂದು ಹಂಚಿಕೊಂಡಿದ್ದಾರೆ. “ಹುಡುಗ ಗಂಡನ ಅನುಪಸ್ಥಿತಿಯಲ್ಲಿ ರಿಯಾಳಿದ್ದಲ್ಲಿ ನಿಯಮಿತವಾಗಿ ಭೇಟಿ ನೀಡುತ್ತಾನೆ” ಎಂದು ಸ್ಥಳೀಯರು ಹೇಳಿದರು. ಇವರಿಬ್ಬರು ಅಕ್ಟೋಬರ್‌ನಲ್ಲಿ ಪರಾರಿಯಾಗಿದ್ದರು ಎಂದು ಮತ್ತೊಬ್ಬರು ತಿಳಿಸಿದ್ದಾರೆ. ಆದಾಗ್ಯೂ, ನಂತರ ಮಹಿಳೆ ತನ್ನ ಪತಿಯಿದ್ದಲ್ಲಿಗೆ ಬಂದಿದ್ದಾಳೆ ಎಂದು ಹೇಳಲಾಗಿದೆ.

ಇಂದಿನ ಪ್ರಮುಖ ಸುದ್ದಿ :-   ಆಭರಣಗಳ ಅಂಗಡಿಯಿಂದ 10 ಲಕ್ಷ ಮೌಲ್ಯದ ಚಿನ್ನದ ಸರ ಕದ್ದೊಯ್ದ ಚಾಲಾಕಿ ಅಜ್ಜಿ : ಅಜ್ಜಿಯ ಕೈಚಳಕ ಸಿಸಿಟಿವಿಯಲ್ಲಿ ಸೆರೆ : ವೀಕ್ಷಿಸಿ

ಸೋಮವಾರ ಮುಂಜಾನೆ 3 ಗಂಟೆ ಸುಮಾರಿಗೆ ನೆರೆಹೊರೆಯವರು ರಿಯಾಳ ಮೃತದೇಹವನ್ನು ಪತ್ತೆ ಮಾಡಿದ್ದಾರೆ. “ಮಗು ಅಳುವುದನ್ನು ನಾವು ಕೇಳಿದ್ದೇವೆ. ಬೆಳಗಿನ ಜಾವ 3 ಗಂಟೆ ಸುಮಾರಿಗೆ ಮಗುವನ್ನು ನೋಡಿದಾಗ ತಾಯಿ ಜೊತೆಗಿರಲಿಲ್ಲ. ನಾವು ಸುತ್ತಲೂ ನೋಡಿದ್ದೇವೆ ಮತ್ತು ಸ್ನಾನಗೃಹದ ಬಾಗಿಲು ತೆರೆದಿರುವುದನ್ನು ಗಮನಿಸಿದ್ದೇವೆ.”ನಾವು ರಿಯಾ ಕುತ್ತಿಗೆ ಸೀಳಿ ನೆಲದ ಮೇಲೆ ಮಲಗಿರುವುದನ್ನು ಪತ್ತೆ ಮಾಡಿದೆವು ಎಂದು ಎಂದು ಸ್ಥಳೀಯರಾದ ಸುಭಾಷ್ ರಾಯ್ ಹೇಳಿದರು ಇಂಡಿಯಾ ಟುಡೇ ವರದಿ ಮಾಡಿದೆ.

ನಂತರ ರಾತ್ರಿ ದೇಬನಾಥ್ ಅವರು ನ್ಯೂ ಜಲ್ಪೈಗುರಿ ರೈಲು ನಿಲ್ದಾಣದವರೆಗೆ ನಡೆದುಕೊಂಡು ಬಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕಿರಣ್ ರೈಲಿನ ಮುಂದೆ ಜಿಗಿಯುವ ಮೊದಲು, ಅವನು ಫೇಸ್‌ಬುಕ್‌ನಲ್ಲಿ ಲೈವ್ ಮಾಡಿದ್ದಾನೆ, ಅಲ್ಲಿ ಅವನು ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. “ನಾನು ರಿಯಾಳನ್ನು ಕೊಂದಿದ್ದೇನೆ” ಎಂದು ವೀಡಿಯೊದಲ್ಲಿ ಹೇಳಿದ್ದಾನೆ. ” “ನಾನು ಹೆದರಿದ್ದೇನೆ; ನನಗೆ ಬದುಕಲು ಏನೂ ಇಲ್ಲ. ನಾನು ಬದುಕಿದ್ದರೆ, ನನ್ನ ಉಳಿದ ಜೀವನವನ್ನು ನಾನು ಜೈಲಿನಲ್ಲಿ ಕಳೆಯಬೇಕಾಗುತ್ತದೆ, ”ಎಂದು ಆತ ಹೇಳಿದ್ದಾನೆ.
ದೆಹಲಿಯಲ್ಲಿ 27 ವರ್ಷದ ಶ್ರದ್ಧಾ ವಾಕರ್ ಎಂಬ ಯುವತಿಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ 18 ದಿನಗಳ ಅವಧಿಯಲ್ಲಿ ದೆಹಲಿಯಾದ್ಯಂತ ಬಿಸಾಕಿದ ಪ್ರಕರಣದಲ್ಲಿ ದೆಹಲಿ ಪೊಲೀಸರು ಆರೋಪಿ ಆಫ್ತಾಬ್ ಪೂನಾವಾಲಾ ಅವರನ್ನು ಬಂಧಿಸಿದ ಒಂದು ದಿನದ ನಂತರ ಈ ಘಟನೆ ವರದಿಯಾಗಿದೆ.

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಇಂದಿನ ಪ್ರಮುಖ ಸುದ್ದಿ :-   ಪ್ರಧಾನಿ ಮೋದಿಗೇನು ರಾವಣನಂತೆ 100 ತಲೆಗಳಿವೆಯೇ: ಮಲ್ಲಿಕಾರ್ಜುನ ಖರ್ಗೆ ಲೇವಡಿ, ಗುಜರಾತ್‌ ಮಗನಿಗೆ ಅವಮಾನ ಎಂದ ಬಿಜೆಪಿ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

3 / 5. ಒಟ್ಟು ವೋಟುಗಳು 2

ನಿಮ್ಮ ಕಾಮೆಂಟ್ ಬರೆಯಿರಿ

advertisement